ಸುರಪುರ: ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ ೨೦ರ ಹಸನಾಪುರದಲ್ಲಿ ಪ್ರತಿ ಮನೆಗಳಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಮಲ್ಲು ಬಿಲ್ಲವ್ ಅವರು ರವೆಯ ಪಾಕೀಟ್ ನೀಡುವ ಮೂಲಕ ಜನರಿಗೆ ನೆರವಾಗುವಂತ ಕಾರ್ಯವನ್ನು ಮಾಡಿದರು.
ಈ ಕುರಿತು ಮುಖಂಡ ಮಲ್ಲು ಬಿಲ್ಲವ್ ಮಾತನಾಡಿ,ಕಳೆದ ಅನೇಕ ದಿನಗಳಿಂದ ನಮ್ಮ ವಾರ್ಡ್‌ನ ಅನೇಕ ಕುಟುಂಬಗಳಿಗೆ ಆಹಾರ ಪದಾರ್ಥಗಳಾದ ಅಕ್ಕಿ ಬೇಳೆ ಮತ್ತಿತರೆ ದಿನಸಿಗಳ ಕಿಟ್ ವಿತರಿಸಲಾಗಿದೆ.ತರಕಾರಿ ವಿತರಿಸಲಾಗಿದೆ,ಹಾಲು ಮತ್ತು ಮೊಸರನ್ನು ವಿತರಿಸಲಾಗಿದೆ ಇಂದು ರವೆಯ ಪಾಕೀಟ್‌ನ್ನು ವಿತರಣೆ ಮಾಡಲಾಗುತ್ತಿದೆ. ಯಾಕೆಂದರೆ ಈಗ ಲಾಕ್‌ಡೌನ್ ಇರುವ ಕಾರಣದಿಂದ ನಮ್ಮ ವಾರ್ಡ್‌ನ ಜನರು ತೊಂದರೆಯಲ್ಲಿದ್ದಾರೆ.ಅವರಿಗೆ ನಮ್ಮಿಂದ ಸಾಧ್ಯವಾದಷ್ಟು ನೆರವಾಗಬೇಕು ಎಂಬ ಉದ್ದೇಶದಿಂದ ಈ ಸೇವೆಯನ್ನು ಮಾಡುತ್ತಿದ್ದು ಇದಕ್ಕೆ ಜನರು ಕೂಡ ಉತ್ತಮವಾಗಿ ಸ್ಪಂಧಿಸುತ್ತಿರುವುದು ಸಂತೋಷದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳಿಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗು ಸ್ಥಳಿಯ ಯುವ ಮುಖಂಡರು ಭಾಗವಹಿಸಿ ಜನರಿಗೆ ಕಿಟ್ ವಿತರಿಸಿದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…