(ಜೇವರ್ಗಿ ಮತಕ್ಷೇತ್ರದ 3. 07 ಲಕ್ಷ ಜನರಲ್ಲಿ ಲಸಿಕೆ ಪಡೆದವರು 31, 530 ಮಂದಿ, ಅರ್ಹರೆಲ್ಲರಿಗೂ ಲಸಿಕೆ ಯಾವಾಗ?)
ಕಲಬುರಗಿ: ಕೊರೋನಾ ಆತಂಕದ ಕಲಬುರಗಿಯಲ್ಲಿ ಲಸಿಕಾಕರಣ ಕುಂಟುತ್ತ ಸಾಗಿದೆ, ಸೋಂಕು ಶರವೇಗದಲ್ಲಿದ್ದರೆ ಲಸಿಕಾಕರಣ ಆಮೆ ನಡಿಗೆಯಂತೆ ಸಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ದೂರಿದ್ದಾರೆ.
ಕಲಬುರಗಿ ಜಿಲ್ಲೆಯ ಒಟ್ಟಾರೆ ಜನಸಂಖ್ಯೆ 28 ಲಕ್ಷ, ಲಸಿಕೆ ಪಡೆದವರು ಶೇ. 20 ರಷ್ಟು ಜನ, ಜೇವರ್ಗಿ ಮತಕ್ಷೇತ್ರದ ಒಟ್ಟು ಜನಸಂಖ್ಯೆ 2. 07 ಲಕ್ಷ, ಈ ಪೈಕಿ 1, 52, 730 ಮಂದಿ 18 ರಿಂದ 45 ವಯೋಮಾನದಲ್ಲಿದ್ದರೂ ಲಸಿಕೆ ಸಿಗದೆ ಪರದಾಡುತ್ತಿದ್ದಾರೆ, 31, 530 ಮಂದಿ ಮಾತ್ರ ಲಸಿಕೆ ಪಡೆದಿದ್ದು ಸಾಧನೆ ಶೇ. 20 ರಷ್ಟು ಮಾತ್ರ, ಈ ಪರಿ ನಿಧಾನಕ್ಕೆ ಲಸಿಕೆ ಹಾಕೋದಾದರೆ ಎಲ್ಲರಿಗೂ ಲಸಿಕೆ ದೊರಕೋದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.
ಯಡ್ರಾಮಿ ತಾಲ್ಲೂಕಿನ ಹರನಾಳ ಬಿ ಗ್ರಾಮದಲ್ಲಿ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಅಜಯ್ ಸಿಂಗ್ ಲಸಿಕಾ ಅಭಿಯಾನ ಯಶಸ್ಸಿಗೆ ಶ್ರಮಿಸೋದನ್ನ ಬಿಟ್ಟು ರಾಜ್ಯ ಸರ್ಕಾರ ದಿನಕ್ಕೊಂದು ಗೊಂದಲಕಾರಿ ಆದೇಶ ಹೊರಡಿಸುತ್ತ ಲಸಿಕಾಕರಣದ ದಿಕ್ಕನ್ನೇ ತಪ್ಪಿಸುತ್ತಿದೆ. ಮೊದಲ ಡೋಸ್ ಸ್ಥಗಿತ, 2 ನೇ ಡೋಸ್ ಮಾತ್ರ ನೀಡಿ ಎಂದರು, ಅದೇ ದಿನ ಸಂಜೆ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮೊದಲ ಡೋಸ್ ಕೊಡಿರೆಂದರು, ಮೇ 1 ರಿಂದ 18 ವರ್ಷದವರಿಗೂ ಲಸಿಕೆ ನೀಡಲಾಗುತ್ತದೆ ಎಂದು ಘೋಷಿಸಿದ ಮಾರನೆ ದಿನವೇ ಸ್ಥಗಿತಗೊಳಿಸಿದರು. ಲಸಿಕೆಯಂತಹ ಮಹತ್ವದ ವಿಚಾರದಲ್ಲಿಯೂ ಇಂತಹ ಎಡಬಿಡಂಗಿತನ ಬೇಕೆ? ಎಂದು ಡಾ. ಸಿಂಗ್ ಪ್ರಶ್ನಿಸಿದ್ದಾರೆ.
ಹಣಕಾಸು ಪರಿಸ್ಥಿತಿ ಸರಿಯಾಗಿಲ್ಲದಿದ್ದರೆ ಕಾಂಗ್ರೆಸ್ ಪಕ್ಷವೇ 100 ಕೋಟಿ ರು ಹಣ ಕೊಡಲು ತಯ್ಯಾರಾಗಿದೆ. ನಮ್ಮ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಲಸಿಕಾಭಿಯಾನಕ್ಕೆ 100 ಕೋರಿ ರು ಕೊಡೋದಾಗಿ ಘೋಷಿಸಿದ್ದಾರೆ. ನಾವೆಲ್ಲರು ಕೈ ಶಾಸಕರು ಇದಕ್ಕೆ ನೆರವಿನ ಹಸ್ತ ಚಾಚಲಿz್ದÉೀವೆ. ಸರ್ಕಾರ ಈ ವಿಚಾರದಲ್ಲಿ ಮುಕ್ತವಾಗಿ ಹೊರಬರಲಿ ಎಂದಿದ್ದಾರೆ.
ಕಲಬುರಗಿಯಲ್ಲೂ ಲಸಿಕಾಕರಣ ಪ್ರಗತಿ ಕಂಡಿಲ್ಲ, ಮೇ 2 ನೇ ವಾರದ ಮಾಹಿತಿಯಂತೆ 24, 112 ಹೆಲ್ತ್ ಕೇರ್ ವರ್ಕರ್ಸ್‍ಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತಾದರೂ ಆಗಿರುವ ಸಾಧನೆ 21, 514 ಶೇ. 89 ಅಷ್ಟೆ. ಈ ಪೈಕಿ 2 ನೇ ಡೋಸ್ ಲಸಿಕೆ ಹಾಕಿಸಿಕೊಂಡ ಹೆಲ್ತ್ ಲೈನ್ ವರ್ಕರ್ಸ್ 12, 366 ಶೇ. 57 ಪ್ರತಿಶತ ಮಾತ್ರ ಪ್ರಗತಿಯಾಗಿದೆ. ಈ ನಿಧಾನಗತಿಯೇ ಇಡೀ ಜಿಲ್ಲೆಯ ಲಸಿಕಾ ಅಭಿಯಾನಕ್ಕೆ ಪೆಟ್ಟು ನೀಡಿದೆ. ಇನ್ನು ಫ್ರಂಟ್‍ಲೈನ್ ವಾರಿಯರ್ಸ್‍ಗಳಲ್ಲಿ ಲಸಿಕೆ ಹಾಕಲು ಇಟ್ಟಂತಹ 13, 133 ಗುರಿ ಮೀರಿ ಶೇ. 110 ಪ್ರತಿಶತ ಸಾಧನೆಯಾಗಿದೆ. ಇವರಲ್ಲಿ 2 ನೇ ಡೋಸ್ ಪಡೆಯಲು ಲಸಿಕಾ ಕೇಂದ್ರಕ್ಕೆ ಬಂದವರಿಗೆ ಲಸಿಕೆ ಸಿಗುತ್ತಿಲ್ಲ.
ಜಿಲ್ಲೆಯಲ್ಲಿ ಇದುವರೆಗೂ ಮೊದಲ ಡೋಸ್ 2, 10, 280 ಮಂದಿ, 2 ನೇ ಡೋಸ್ 45, 947 ಮಂದಿ ಪಡೆದಿದ್ದಾರೆ. ಒಟ್ಟು 2, 56, 227 ಮಂದಿ ಲಸಿಕೆ ಇದುವರೆಗೂ ಪಡೆದಿದ್ದಾರೆ. ಜಿಲ್ಲೆಯ ಜನಸಂಖ್ಯೆ 28 ಲಕ್ಷ, ಎಲ್ಲರಿಗೂ ಲಸಿಕೆ ಅದ್ಯಾವಾಗ ತಲುಪುವುದೋ? ಜಿಲ್ಲೆಗೆ ಕೋವಿಶೀಲ್ಡ್ 2, 83, 800 ಡೋಸ್, ಕೋವ್ಯಾಕ್ಸೀನ್ 2, 56227 ಲಸಿಕೆ ಪೂರೈಕೆಯಾಗಿದ್ದು ಈ ಪೈಕಿ ಶೇ. 9 ರಷ್ಟು ಅಂದರೆ 24, 693 ಡೋಸ್ ಲಸಿಕೆ ಹಾಳಾಗಿದೆ.
ನಿತ್ಯ ಜಿಲ್ಲೆಗೆ 20 ಸಾವಿರ ಡೋಸ್ ಲಸಿಕೆ ಬೇಕಿದ್ದರೂ ದಾಸ್ತಾನು ಬರುತ್ತಿಲ್ಲ. 2 ದಿನ, 3 ದಿನಕ್ಕೊಮ್ಮೆ ದಾಸ್ತಾನು ಜಿಲ್ಲೆಗೆ ಬರುತ್ತಿದ್ದು ಅದೂ 7 ರಿಂದ 8 ಸಾವಿರ ಡೋಸ್ ಮಾತ್ರ ಬರುತ್ತಿದೆ. ಇದರಿಂದಾಗಿ ಜಿಲ್ಲೆಯ 141 ಲಸಿಕಾ ಕೇಂದ್ರಗಳಲ್ಲಿ ಎಲ್ಲಾ ಪಿಎಚ್‍ಸಿ ಲಸಿಕೆ ಕೇಂದ್ರಗಳು ಕೆಲಸ ಮಾಡುತ್ತಿಲ್ಲ. ಕೇವಲ ಕಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಅದೂ 2 ನೇ ಡೋಸ್ ಮಾತ್ರ ನೀಡಲಾಗುತ್ತಿದೆ. ಇನ್ನೂ 1. 04 ಲಕ್ಷ ಜನರಿಗೆ ಲಸಿಕೆ ಬೇಕಾಗಿದ್ದರೂ ಬೇಡಿಕೆಯಂತೆ ಪೂರೈಕೆ ಇಲ್ಲದ ಕಾರಣ ಜನ ನಿತ್ಯ ಕೇಂದ್ರಗಳಿಗೆ ಬಂದು ಲಸಿಕೆ ದಾಸ್ತಾನಿಲ್ಲದೆ ಮರಳುತ್ತಿದ್ದಾರೆ, ಲಸಿಕೆ ಸದಾ ಲಭ್ಯವಿರುವಂತೆ ಮಾಡಿ ಇನ್ನಾದರು ಸರ್ಕಾರ ಜನರ ಹೈರಾಣ ತಪ್ಪಿಸಲಿ ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
18 ವರ್ಷ ಮೆಲ್ಪಟ್ಟ ಪ್ರತಿಯೊಬ್ಬ ಗ್ರಾಮಸ್ಥರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು, ಶೇ.100ಕ್ಕೆ ಶೇ.94 ಪ್ರತಿಶತ ಲಸಿಕೆ ತೆಗೆದುಕೊಂಡವರು ಕೊರೊನಾ ಬಂದರು ಗುಣಮುಖರಾಗಿz್ದÁರೆಂದು ಅಧ್ಯಯನದಿಂದ ತಿಳಿದುಬಂದಿದೆ. ತಮ್ಮ ಕುಟುಂಬದ ಯೋಗಕ್ಷೇಮವನ್ನೂ ಲೆಕ್ಕಿಸದೇ, ದಿನವಿಡೀ ಹಳ್ಳಿ ಹಳ್ಳಿ ತೆರಳಿ ಲಸಿಕೆ ನೀಡುತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಗ್ರಾಮಸ್ಥರು ಸ್ಪಂದಿಸಿ ಲಸಿಕೆ ಹಾಕಿಸಿಕೊಳ್ಳಿರಿ, ಸರ್ಕಾರ ಲಸಿಕೆ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು.- ಡಾ. ಅಜಯ್ ಸಿಂಗ್, ಮುಖ್ಯ ಸಚೇತಕರು, ವಿಧಾನಸಭೆ ವಿರೋಧ ಪಕ್ಷ ಹಾಗೂ ಶಾಸಕರು, ಜೇವರ್ಗಿ ಮತಕ್ಷೇತ್ರ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…