ರಾಜ್ಯಕ್ಕೆ ಈ ವಾರ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ: ಸದಾನಂದ ಗೌಡ

ಬೆಂಗಳೂರು: ಕೇಂದ್ರ ಸರ್ಕಾರವು ಬೇರೆ ಬೇರೆ ರಾಜ್ಯಗಳಿಗೆ ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ 23 ಲಕ್ಷ ವಯಲ್ಸ್ (ಸೀಸೆ) ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ ಈ ಸಲ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಒದಗಿಸಲಾಗಿದೆ.
ಇಂದು ಇಲ್ಲಿ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರು ಕರ್ನಾಟಕದಲ್ಲಿರುವ ಅತಿಹೆಚ್ಚು ಸಕ್ರೀಯ ಪ್ರಕರಣವನ್ನು ಆಧರಿಸಿ ರಾಜ್ಯಕ್ಕೆ ಈ ವಾರ ಅತಿಹೆಚ್ಚು ರೆಮ್ಡೆಸಿವಿರ್ ಚುಚ್ಚುಮದ್ದು ಒದಗಿಸಲಾಗಿದೆ. ಏಪ್ರಿಲ್ 21ರಿಂದ ಇದುವರೆಗೆ ಕೇಂದ್ರವು ಒಟ್ಟು 76 ಲಕ್ಷ ವಯಲ್ಸ್ ಹಂಚಿಕೆ ಮಾಡಿದ್ದು ರಾಜ್ಯಕ್ಕೆ 10 ಲಕ್ಷ ವಯಲ್ಸ್ ಲಭ್ಯವಾಗಿದೆ ಎಂದರು.
ಉಳಿದಂತೆ, ಈ ವಾರದ ಬಳಕೆಗಾಗಿ ಮಹಾರಾಷ್ಟ್ರಕ್ಕೆ 3.35 ಲಕ್ಷ, ತಮಿಳುನಾಡಿಗೆ 1.45 ಲಕ್ಷ, ಆಂಧ್ರ ಪ್ರದೇಶಕ್ಕೆ 1.4 ಲಕ್ಷ, ಉತ್ತರಪ್ರದೇಶಕ್ಕೆ 1.3 ಲಕ್ಷ, ರಾಜಸ್ಥಾನಕ್ಕೆ 1.28 ಲಕ್ಷ ಹಾಗೂ ಗುಜರಾತಿಗೆ 91 ಸಾವಿರ ರೆಮ್ಡೆಸಿವಿರ್ ವಯಲ್ಸ್ ಹಂಚಲಾಗಿದೆ. ಉಳಿದ ರಾಜ್ಯಗಳಿಗೂ ಸಕ್ರಿಯ ಕೋವಿಡ್ ಪ್ರಕರಣಗಳನ್ನು ಆಧರಿಸಿಯೇ ಈ ಔಷಧದ ಪ್ರಮಾಣವನ್ನು ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿದೇಶಗಳಿಂದಲೂ ನೆರವಿನ ರೂಪದಲ್ಲಿ ಔಷಧ, ಆಮ್ಲಜನಕ ಸಿಲಿಂಡರ್, ವಂಟಿಲೇಟರ್ ಮುಂತಾದ ವಸ್ತುಗಳು ಭಾರತಕ್ಕೆ ಹರಿದುಬರುತ್ತಿದ್ದು ಈ ಪೈಕಿ ಹೊಸದಾಗಿ 40,000 ವಯಲ್ಸ್ ರೆಮ್ಡೆಸಿವಿರ್ ಬಂದಿದೆ. ರೆಮ್ಟೆಸಿವಿರ್ ಚುಚ್ಚುಮದ್ದೇ ಇರಲಿ ಅಥವಾ ಪ್ರಾಣವಾಯು ಆಮ್ಲಜನಕವೇ ಇರಲಿ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ಲಭ್ಯವಿರುವ ಕೋವಿಡ್ ಸಂಪನ್ಮೂಲವನ್ನು ಎಲ್ಲ ರಾಜ್ಯಗಳಿಗೂ ಅತ್ಯಂತ ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ವಿತರಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ರೆಮಿಡಿಸಿವಿರ್ ಸೇರಿದಂತೆ ಕೆಲವೊಂದು ಮಾತ್ರೆಗಳು ಕೊರೊನಾ ಬಂದವರೆಲ್ಲ ತೆಗೆದುಕೊಳ್ಳುವಂತಹುದಲ್ಲ. ಯಾರಿಗೆ ಅಗತ್ಯವಿದೆ ಎಂಬುದುನ್ನು ವೈದ್ಯರು ನಿರ್ಧರಿಸುತ್ತಾರೆ ಮತ್ತು ಅಗತ್ಯವಾದ ಪ್ರಮಾಣದಲ್ಲಿ ಅದು ದೇಶದಲ್ಲಿ ಲಭ್ಯವಿದೆ. ಬಹುತೇಕ ಸೋಂಕಿತರಿಗೆ ಅದರ ಅಗತ್ಯವೇ ಬೀಳುವುದಿಲ್ಲ. ಮನೆಯಲ್ಲಿ ಸಂಗ್ರಹಿಸುವ ಮದ್ದೂ ಅದಲ್ಲ. ಹಾಗಾಗಿ ಜನರು ಮುಂದೆ ಬೇಕಾಗಬಹುದು ಎಂಬ ಹೆದರಿಕೆಯಿಂದ ಅನವಶ್ಯಕವಾಗಿ ಖರೀದಿಗೆ ಮುಗಿಬೀಳಬಾರದು. ಇದರಿಂದ ನಿಜವಾಗಿಯೂ ಅಗತ್ಯ ಇರುವವರಿಗೆ ತೊಂದರೆಯಾಗುತ್ತದೆ. ಜನರ ಮನಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲವರು ಕೋವಿಡ್ ಔಷಧಗಳ ಕಾಳಸಂತೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಇದನ್ನು ತಡೆಯಲು ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ. ಸೀಮಿತವಾಗಿ ಲಭ್ಯವಿರುವ ಔಷಧಗಳ ಅತ್ಯಂತ ನ್ಯಾಯಸಮ್ಮತ ವಿತರಣೆ ಹಾಗೂ ಬಳಕೆಯಾಗುವಂತೆ ನೋಡಿಕೊಳ್ಳಲು ಅಗತ್ಯ ಉಪಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಎಲ್ಲ ರಾಜ್ಯ ಸರ್ಕಾರಗಳಿಗೆ ಅತ್ಯಂತ ಕಳಕಳಿಯಿಂದ ಮನವಿ ಮಾಡುತ್ತಿರುವುದಾಗಿ ಕೇಂದ್ರ ಸಚಿವರು ತಿಳಿಸಿದರು.

ಕೋವಿಡ್ ಪ್ರೊಟೋಕಾಲ್ ಅಡಿಯಲ್ಲಿ ಬರುವ ಎಲ್ಲ ಔಷಧಗಳ ಸರಬರಾಜನ್ನು ಕೇಂದ್ರವು ಸತತವಾಗಿ ಗಮನಿಸುತ್ತಿದೆ ಮತ್ತು ನಿರ್ದೇಶಿಸುತ್ತಿದೆ. ಈ ಬಗ್ಗೆ ನಾವು ಸಹಾಯವಾಣಿಯನ್ನೂ  (No.-1800111255.  Email: monitoring-nppa@gov.in)  ಸ್ಥಾಪಿಸಿದ್ದೇವೆ. ಏಪ್ರಿಲ್ ತಿಂಗಳ ಕೊನೆಯ ಎರಡು ವಾರಗಳಲ್ಲಿ 767 ದೂರುಗಳು ಬಂದಿದ್ದವು. ಈ ತಿಂಗಳ ಮೊದಲೆರಡು ವಾರಗಳಲ್ಲಿ 147 ದೂರುಗಳಷ್ಟೇ ಬಂದಿವೆ. ಇದು ಕೋವಿಡ್ ಪ್ರೊಟೊಕಾಲ್ ಔಷಧಗಳ ಸರಬರಾಜು ಸಹಜ ಸ್ಥಿತಿಗೆ ಬರುತ್ತಿರುವುದರ ಸೂಚನೆಯಾಗಿದೆ ಎಂದು ಸದಾನಂದ ಗೌಡ ವಿವರಿಸಿದರು.

ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಅಮೃತಹಳ್ಳಿ, ಸಹಕಾರನಗರ ಹಾಗೂ ಕೊಡಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಕೋವಿಡ್ ಲಸಿಕೆ ನೀಡಿಕೆ ಹ಻ಗೂ ಕೋವಿಡ್ ಪರೀಕ್ಷೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಹಾಗೆಯೇ ಹೆಬ್ಬಾಳ ಪಶುವಿಜ್ಞಾನ ಸಂಸ್ಥೆ ಆವರಣದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.
emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

9 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

11 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

16 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

16 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

18 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420