ಹನ್ನೆರಡನೆಯ ಶತಮಾನ ಕರ್ನಾಟಕದ ಪಾಲಿಗೊಂದು ನವ ಮನ್ವಂತರ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ-ಹೀಗೆ ನಾನಾ ಮುಖದ ಕ್ರಾಂತಿಯೊಂದರ ಆಸ್ಫೋಟವಾಯಿತು. ಈ ಕ್ರಾಂತಿಯ ನೇತಾರರಾಗಿ ನಿಂತವರು ಮಹಾನುಭಾವ ಬಸವಣ್ಣ.

ಮಾತು, ಗೀತ ಇತ್ಯಾದಿಗಳಿಗೆ ಬಹಳ ಮಹತ್ವ ಕೊಡದೆ, ಲಿಂಗ ಶ್ರದ್ಧೆಯೇ ತನ್ನ ಪ್ರಮುಖ ನೆಲೆಯನ್ನಾಗಿ ಮಾಡಿಕೊಂಡ ಬಸವಣ್ಣನವರ ವಚನಗಳಲ್ಲಿ ವಿಶ್ವದ ಬೆಳಕಿದೆ. ಆಥ್ಮ ಪರೀಕ್ಷೆಯ ಸರಣಿಯಲ್ಲಿ ಉತ್ತೀರ್ಣರಾದ ಬಸವಣ್ಣ, ಸಮಾಜವನ್ನು ಪರೀಕ್ಷಿಸಿ ಅದರ ರೋಗ ರುಜಿನಗಳನ್ನು ಮೂಲೋತ್ಪಾಟನೆ ಮಾಡುವ ದನ್ವಂತರಿಯಾಗಿ ದುಡಿದರು. ಅವರ ಸಾಧನೆ-ಸಿದ್ಧಿ ಸಂದೇಶಗಳು ಇಂದಿಗೂ ಅನನ್ಯ.

ಬಸವಾದಿ ಶರಣರ ವಚನಗಳು ಸಾಮಾನ್ಯವಲ್ಲ. ಆ ವಚನಗಳು ನಮಗೊಂದು ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ. ಜೀವನದಲ್ಲಿ ಎಂತಹ ಸಮಸ್ಯೆಯೇ ಬರಲಿ ಅದನ್ನು ಹಿಮ್ಮೆಟ್ಟಿಸುವ ಛಲವನ್ನು ನಮಗೆ ಕಲಿಸಿಕೊಡುತ್ತದೆ. ವಚನಗಳು ವೀರನೊಬ್ಬ ರಣಾಂಗಣದಲ್ಲಿ ನಿಂತು ಅನುಸರಿಸಬೇಕಾದ ಸೂತ್ರಗಳನ್ನು ಹೇಳಿಕೊಡುತ್ತವೆ. ಬಸವಾದಿ ಶರಣರು ಧೀರೋದಾತ್ತರಾಗಿದ್ದರು.

ನಮ್ಮ ದೇಶದ ಪ್ರಾಚೀನ ಪರಂಪರೆಯ ಬಹಳಷ್ಟು ಮಂದಿ ಇಹದ ಬದುಕಿಗೆ ಬೆನ್ನು ತಿರುಗಿಸಿ ಪರದ ಬದುಕಿನ ಕಡೆಗೆ ಪಲಾಯನ ಮಾಡಿದವರು. ಆದರೆ ವಚನಕಾರರು ಹಾಗಲ್ಲ. ಜೀವನವನ್ನು ಮುಖಾಮುಖಿಯಾಗಿ ಸಂಪರ್ಕಿಸಿ ಅದನ್ನು ಸುಲಲಿತಗೊಳಿಸಿಕೊಂಡವರು. ಅವರಿಗೆ ಮರ್ತ್ಯವೆಂಬುದು ಮೃತ್ಯಲೋಕವಾಗದೆ ಕರ್ತಾರನ ಕಮ್ಮಟವಾಗಿತ್ತು. ಅವರಿಗೆ ಸ್ವರ್ಗಲೋಕ, ನರಕಲೋಕಗಳೆಂಬಿವು ಬೇರೆ ಬೇರೆ ಆಗಿರಲಿಲ್ಲ.

ಅಯ್ಯಾ ಎಂದೊಡೆ ಸ್ವರ್ಗ, ಎಲವೋ ಎಂದೊಡೆ ನರಕ ಎಂಬ ಸರಳ ತಿಳಿವಳಿಕೆ ಅವರದಾಗಿತ್ತು. ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ ಇದಕಾರಂಜುವರು? ಇದಕಾರಳುಕುವರು? ಎನ್ನುವುದು ಅವರ ಧೀಶಕ್ತಿಯಾಗಿತ್ತು. ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ ಎಂಬತಹ ಅವರ ನೂರು ಸಾವಿರ ನುಡಿ ಮತ್ತುಗಳು ನಮ್ಮ ಬದುಕಿಗೆ ಬೆಳಕನ್ನು ನೀಡಬಲ್ಲವು.

ವಾರ ಏಳೆಂಬರು, ಕುಲ ಹದಿನೆಂಟೆಂಬರು
ಅದ ನಾವು ನಂಬೆವು.
ಹಗಲೊಂದು ವಾರ, ಇರುಳೊಂದು ವಾರ
ಭಕ್ತನೊಂದು ಕುಲ, ಭವಿಯೊಂದು ಕುಲ
ಇದ ನಾವು ಬಲ್ಲುದು ಕಾಣಾ
ಕೂಡಲ ಚನ್ನ ಸಂಗಮದೇವ!

ವಾರಗಳು ಏಳಾದರೇನು ಎಪ್ಪತ್ತಾದರೇನು? ಹಗಲಲ್ಲಿ ಬೆಳಕಿರುತ್ತದೆ. ಇರುಳಿನಲ್ಲಿ ಕತ್ತಲೆ ಇರುತ್ತದೆ. ಹೀಗಾಗಿ ವಾರಗಳಲ್ಲಿ ಕಂಡು ಬರುವ ವ್ಯತ್ಯಾಸಗಳು ಏಳು ಬಗೆಯಲ್ಲ. ಅವು ಎರಡು ಬಗೆ. ಒಂದು ಬಿಳಿ, ಇನ್ನೊಂದು ಕಪ್ಪು. ಅದರಂತೆ ಕುಲಗಳು ಹದಿನೆಂಟಾಗಿರಲಿ, ಹದಿನೆಂಟು ಸಾವಿರ ಲಕ್ಷವಾಗಿರಲಿ, ಮನುಷ್ಯ-ಮನುಷ್ಯರ ನಡುವಿನ ವತ್ಯಾಸ ಇರೋದು ಎರಡೇ ಬಗೆಯಲ್ಲಿ. ಒಬ್ಬ ಒಳ್ಳೆಯವ. ಸಮಾಜ ಶ್ರೇಯಕ ಅಂದರೆ ಭಕ್ತ ಎಂದರ್ಥ. ಇನ್ನೊಬ್ಬ ದುಷ್ಟ. ಸಮಾಜ ಘಾತುಕ ಅಂದರೆ ಭವಿ ಎಂದರ್ಥ. ಅವನು ಯಾವುದೇ ಧರ್ಮೀಯನಾದರೂ ಅದು ಮುಖ್ಯವಲ್ಲ.
ಪ್ರಜಾಪ್ರಭುತ್ವ ಎಂಬ ಕಲ್ಪನೆಯೇ ಜಗತ್ತಿನಲ್ಲಿ ಎಲ್ಲಿಯೂ ಇರದ ಸಂದರ್ಭದಲ್ಲಿ ಅನುಭವ ಮಂಟಪ ಎಂಬ ಪ್ರಜಾಸತ್ತಾತ್ಮಕ ಮಾದರಿ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಪ್ಲೆಟೋನ ಕೆಲ ಚಿಂತನೆ ಹಾಗೂ ಬುದ್ಧನ ಸಂಘ ಜೀವನ ಕ್ರಮದಲ್ಲಿ ಅನುಸಂಘಿಕವಾಗಿ ಮಾತ್ರ ಕಾಣಿಸಿಕೊಳ್ಳುವ ಪ್ರಜಾಪ್ರಭುತ್ವದ ಕಲ್ಪನೆ-ಹನ್ನರಡನೇ ಶತಮಾನದ ಬಸವಾದಿ ಶರಣರ ಅನುಭವ ಮಂಟಪದಲ್ಲಿ ದಟ್ಟವಾಗಿಯೇ ಕೊರೈಸುತ್ತದೆ. ಕಾರ್ಯರೂಪಕ್ಕೆ ಬಂದಿದೆ.

ಆ ಅನುಭವ ಮಂಟಪದಲ್ಲಿ ಎಲ್ಲ ಪ್ರಾಂತ-ಪ್ರದೇಶಗಳಿಗೆ ಸೇರಿದ ಜನರೆಲ್ಲ ಒಟ್ಟಾಗಿ ಕುಳಿತು ಬದುಕಿನ ಮೂಲ ಸಂಗತಿಗಳನ್ನು ಚರ್ಚಿಸುತ್ತಿದ್ದರು ಎಂಬುದನ್ನು ನೆನೆದರೆ ಈಗಲೂ ರೋಮಾಂಚನವಾಗುತ್ತದೆ. ಸಾವಿರಾರು ವರ್ಷಗಳಿಂದ ಬಿಗಿದು ಕಟ್ಟಿದ ಬಂದಳಿಕೆಗಳಿಂದ ಇಡೀ ಭಾರತವನ್ನು ಬಿಡುಗಡೆ ಮಾಡುವವರಾಗಿ ಅವರು ಕಂಗೊಳಿಸುವರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ವಿಕಾಸಶೀಲ ಮತ್ತು ವಿಚಾರಶೀಲ ವ್ಯಕ್ತಿತ್ವದ ಘನತೆಯ ಕಿರೀಟಕ್ಕೆ ಸಿಕ್ಕಿಸಬೇಕಾದ ಇನ್ನೆರಡು ತುರಾಯಿಪ್ರಾಯವಾದ ಸಂಗತಿಗಳಿವೆ. ಅವು ಯಾವೆಂದರೆ ಒಂದು ಕಾಯಕ ಇನ್ನೊಂದು ದಾಸೋಹ. ಒಂದು ಉತ್ಪಾದನೆ. ಇನ್ನೊಂದು ವಿತರಣೆ. ಜಗತ್ತಿನ ಆಗು-ಹೋಗುಗಳಿಗೆ ಇವೆರಡೇ ಮುಖ್ಯ ವಾಹಕಗಳು.

ಈ ಲೋಕಕ್ಕೆ ಬಂದ ಪಶು-ಪಕ್ಷಿ, ಕ್ರಿಮಿ-ಕೀಟ, ಪತಂಗ-ಪ್ರಾಣಿ ಮುಂತಾದೆಲ್ಲವೂ ತಾನು ಕಣ್ಣು ಬಿಟ್ಟ ಮರುಗಳಿಗೆಯಲ್ಲೇ ಆಹಾರ ಹುಡುಕತೊಡಗುತ್ತದೆ. ಅದರ ಪ್ರಥಮ ಅಗತ್ಯವಾದ ಉಸಿರಾಟ ಅದು ಹೇಗೋ ತಾನೆ ಲಭ್ಯವಾಗಿ ಬಿಡುತ್ತದೆ. ಎರಡನೆ ಅಗತ್ಯವೆಂದರೆ ಅನ್ನ-ನೀರು. ಇದಕ್ಕಾಗಿಯೇ ಬಸವಣ್ಣನವರು ಕಾಯಕ ಮತ್ತು ದಾಸೋಹ ಸಿದ್ಧಾಂತದ ಮೂಲಕ ಮನುಷ್ಯ ಬದುಕಿಗೆ ಹೊಸ ಕಾಯಕಲ್ಪ ನೀಡಿದರು.

ಇಡೀ ಮಾನವ ಕುಲಕ್ಕೆ ಸಮಾನತೆಯ ಪಾಠ ಹೇಳಿಕೊಟ್ಟ ಬಸವಾದಿ ಶರಣರ ಜೀವನ-ವಿಧಾನ ಇಂದಿಗೂ ಪ್ರಸ್ತುತ ಮತ್ತು ಪಥ್ಯ. ಇವೊತ್ತಿನ ನಮ್ಮ ಮಕ್ಕಳು ಅವುಗಳನ್ನು ಸುಮ್ಮನೆ ಕಂಠಸ್ಥ ಮಾಡಿದರೂ ಸಾಕು! ಅವು ನಮ್ಮ ಬದುಕಿಗೆ ಮಾರ್ಗದರ್ಶನ ಮಾಡುತ್ತವೆ.

(ಕೃಪೆ: ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾದ ಚಿಂತನ)

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago