ಬಿಸಿ ಬಿಸಿ ಸುದ್ದಿ

ಜನರ ದುಡ್ಡನ್ನು ಜನರಿಗೇ ಕೊಡಲು ನಿಮಗೇನು ಕಷ್ಟ: ಬಾಲರಾಜ್ ಗುತ್ತೇದಾರ ಪ್ರಶ್ನೆ?

ಸೇಡಂ: ಜನರ ದುಡ್ಡನ್ನು ಜನರಿಗೇ ಕೊಡಲು ನಿಮಗೇನು ಕಷ್ಟ? ಬಡವರಿಗೆ ಸಹಾಧನ ಕೊಡಲು ಆರ್ಥಿಕ ಸಂಕಷ್ಟ ಇದ್ಯಾ? ಸರ್ಕಾರವೇನು ಬೆವರು ಸುರಿಸಿ ದುಡಿದ ಹಣವನ್ನು ಕೊಡ್ತಿದ್ಯಾ? ಎಂದು ಸೇಡಂ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಯಡಿಯೂರಪ್ಪ ಘೋಷಿಸಿದ ವಿಶೇಷ ಪ್ಯಾಕೇಜ್‌ ಕುರಿತುಪತ್ರಿಕಾ ಪ್ರಕಟಣೆ ಹೋರಡಿಸಿರುವ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ , ವಿರೋಧ ಪಕ್ಷದವರ ಒತ್ತಡದಿಂದ ಮತ್ತು ಜನರಿಗೆ ಪ್ಯಾಕೇಜ್ ಕೊಟ್ಟಿದ್ದೇವೆ ಎಂದು ಬಿಂಬಿಸಿಕೊಳ್ಳುವುದಕ್ಕಾಗಿ ಮಾತ್ರ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

ರಾಜ್ಯ ಸರ್ಕಾರ ಕೇವಲ 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿರುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ.
ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ನೀಡುವುದರಿಂದ, ಪ್ರತಿ ಎಕರೆಗೆ ಸುಮಾರು 3,000 ದಿಂದ 4,000 ರೂ. ಮಾತ್ರ ಸಿಗುತ್ತದೆ. ಇದು ಅವರ ಒಂದು ದಿನದ ದುಡಿಮೆಯಾಗಿದೆ.

ತಮಿಳುನಾಡಿನಲ್ಲಿ ಪ್ರತಿಯೊಬ್ಬರಿಗೂ 4,000 ರೂ. ಘೋಷಣೆ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ನಮ್ಮಲ್ಲಿ ಅಂತಹ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಅವುಗಳನ್ನು ಮರೆಮಾಚಿಸುವ ಪ್ರಯತ್ನವಾಗಿ ಈ ಪ್ಯಾಕೇಜ್ ಘೋಷಿಸಿದ್ದಾರೆ.

ಕೋವಿಡ್ ನಿಂದ ಮೃತಪಟ್ಟಿರುವ ಕುಟುಂಬಕ್ಕೆ 10ಲಕ್ಷ ಪರಿಹಾರ ನೀಡಬೇಕು ಎಂದು ಇವೇಳೆ ಆಗ್ರಹಿಸಿದರು. ಸರ್ಕಾರ ಘೋಷಣೆ ಮಾಡಿರುವ ಕೋವಿಡ್ ಪ್ಯಾಕೇಜ್ ನಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳು ಇಲ್ಲ. ಕೇವಲ ಕಾಟಾಚಾರಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಎಂದು ಬಾಲರಾಜ್ ಗುತ್ತೇದಾರ ತಿಳಿಸಿದ್ದಾರೆ.

emedialine

Recent Posts

ಆ.25 ರಂದು ಹಟಗಾರ ಸಮಾಜ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

ಕಲಬುರಗಿ: ನಗರದ ಪತ್ರಿಕಾ ಭವನದ ಸಾಂಸ್ಕøತಿಕ ಸಭಾಂಗಣದಲ್ಲಿ ಆ.25 ರಂದು ಬೆಳಗ್ಗೆ 10.30 ಗಂಟೆಗೆ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ…

29 mins ago

ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ACC ಅದಾನಿ ಫೌಂಡೇಷನ್ ಮತ್ತು NGN  ಫೌಂಡೇಷನ್ ಹಾಗೂ ಗ್ರಾಮ ಪಂಚಾಯತವತಿಯಿಂದ ನಮ್ಮ ಗ್ರಾಮದ ಸರಕಾರಿ ಹಿ. ಪ್ರಾ.…

32 mins ago

ಐ.ಟಿ.-ಟೆಲಿಫೋನ್ ಕ್ರಾಂತಿಗೆ ನಾಂದಿ ಹಾಡಿದವರು ರಾಜೀವ ಗಾಂಧಿ: ಡಿಸಿಎಂ ಡಿ.ಕೆ.ಶಿವಕುಮಾರ

ರಾಜೀವ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮಕ್ಕೆ ಚಾಲನೆ ಕಲಬುರಗಿ: ಐ.ಟಿ. ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ರಾಜೀವ…

48 mins ago

1,558 ಜನರಿಗೆ ಸರ್ಕಾರಿ ಸೌಲಭ್ಯ ವಿತರಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಇಲ್ಲಿನ…

54 mins ago

ದಿ. ಡಿ.ದೇವರಾಜ ಅರಸು ಹಿಂದುಳಿದ ವರ್ಗದ ಏಳಿಗೆಗಾಗಿ ಅನೇಕ ಕೂಡುಗೆ ಇದೆ: ಶಾಸಕ ಅಲ್ಲಮಪ್ರಭು ಪಾಟೀಲ್

ಕಲಬುರಗಿ: ದಿ. ಡಿ. ದೇವರಾಜ್ ಅರಸು ಒಬ್ಬ ಮುತ್ಸದ್ಧಿ ರಾಜಕಾರಣೆಯಾಗಿದ್ದರು ಬಡವರ ಮತ್ತು ಹಿಂದುಳಿದ ವರ್ಗದ ಏಳಿಗೆಗಾಗಿ ರಾಜ್ಯಕ್ಕೆ ಅನೇಕ…

60 mins ago

ಸಾಧನೆ ಮಾಡಲು ಓದಿನಷ್ಟೆ ಕ್ರೀಡೆಯಲ್ಲೂ ಅವಕಾಶವಿದೆ

ಸುರಪುರ:ಯಾವುದೇ ವ್ಯಕ್ತಿ ಸಾಧನೆ ಮಾಡಲು ಕೇವಲ ಓದು ಒಂದೇ ಮುಖ್ಯವಲ್ಲ,ಇಂದು ಓದಿನಷ್ಟೆ ಕ್ರೀಡೆಯಲ್ಲೂ ಸಾಧನೆ ಮಾಡಲು ಅವಕಾಶವಿದೆ ಎಂದು ಕ್ಷೇತ್ರ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420