ಬಿಸಿ ಬಿಸಿ ಸುದ್ದಿ

ಈ ಪರಿಹಾರದಿಂದ ಜೀವ ಉಳಿಸಲು ಸಾಧ್ಯವೇ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಟೀಕೆ

ಕಲಬುರಗಿ: ರಾಜ್ಯದ ಮುಖ್ಯಮಂತ್ರಿ ಪ್ರಕಟಿಸಿರುವ ಪ್ಯಾಕೇಜ್  ಜನರಿಗೆ ಅಗತ್ಯ ಪರಿಹಾರವನ್ನು ನೀಡದಿರುವ ಜೀವ ವಿರೋಧಿ  ಪ್ಯಾಕೇಜ್ ಆಗಿದೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ಜೀವನವನ್ನು ಉಳಿಸಲಾರದ ಪ್ಯಾಕೆಜ್ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ  ವ್ಯಕ್ತ ಪಡಿಸುತ್ತದೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ  ಜನರು ಜೀವನ ನಿರ್ವಹ ಣೆಯ ಸಂಕಷ್ಟದ ಲ್ಲಿದ್ದಾರೆ.  ಹಾಗಾಗಿ ಉಚಿತವಾಗಿ 10 ಕೆಜಿ ಅಕ್ಕಿ 6 ತಿಂಗಳಕಾಲ ನೀಡಬೇಕು. ಪಡಿತರ ವ್ಯವಸ್ಥೆಯ ಮೂಲಕ ಅಕ್ಕಿಯ ಜೊತೆಯಲ್ಲಿ ಕೇರಳ ಮಾದರಿಯ ಅಗತ್ಯ ಆಹಾರ ಪದಾರ್ಥಗಳನ್ನು ನೀಡಬೇಕು. ಆದಾಯ ತೆರಿಗೇತರ ಕುಟುಂಬಗಳಿಗೆ ತಿಂಗಳಿಗೆ 10 ಸಾವಿರ ರೂಗಳನ್ನು ಅವರ ಖಾತೆಗೆ ಜಮಾ ಮಾಡಬೇಕು.

SHG ಮತ್ತು  MFI  ಸಂಘಗಳ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಬೇಕು, ಸಾಲಗಳ ಮೇಲಿನ ಬಡ್ಡಿಯನ್ನು ಕೇಂದ್ರ ಸರ್ಕಾರ 75%, ರಾಜ್ಯ ಸರ್ಕಾರ 25% ಭರಿಸಬೇಕು. ಇದಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ಕೇಂದ್ರ ಸರ್ಕಾರ ಬಿಡುಗಡೆ* ಮಾಡಬೇಕು. ಹೊಸದಾಗಿ ಬಡ್ಡಿ ರಹಿತ ಸಾಲ ನೀಡಬೇಕು. ಉದ್ಯೋಗ ಖಾತರಿ ಯೋಜನೆಗೆ 600 ಕೂಲಿ , 200 ದಿನ ಕೆಲಸ ಹೆಚ್ಚಿಸಿ, ನಗರಕ್ಕೂ ವಿಸ್ತರಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಮಹಿಳೆ ಯರು ಕಳೆದ ಕೋವಿಡ್ ಸಮಯದಿಂದಲೂ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದೆ ಎಂದು  ಪತ್ರಿಕಾ ಹೇಳಿಯಲ್ಲಿ ತಿಳಿಸಿದೆ.

ಆದರೆ ಕೋವಿಡ್ 2 ನೇ ಅಲೆ ವ್ಯಾಪಕವಾಗಿ ವಿಸ್ತರಿಸಿದ್ದು, ಮನೆ ಮನೆಯಲ್ಲಿ ಕುಟುಂಬ ಸಮೇತರಾಗಿ ಕೋವಿಡ್ ಪಾಸಿಟಿವ್ ಆಗಿದ್ದು, ಸರಿಯಾಗಿ  ಅಕ್ಸಿಜನ್ , ಔಷದಿ, ಲಸಿಕೆಗಳು ಸೀಗದೆ  ಪ್ರಾಣ ಉಳಿಸಿ ಕೊಳ್ಳಲು ಪರೆದಾಟ ಮಾಡುತ್ತಿದ್ದಾರೆ.

ಈ. ಸಂಧರ್ಭದಲ್ಲಿ ಮುಖ್ಯ ಮಂತ್ರಿಗಳು  ಕೋವಿಡ್ 2ನೇ ಅಲೆಯ ಸಪೋರ್ಟ್ ಪ್ಯಾಕೇಜ್ ಎಂದು 1250  ಕೋಟಿ  ಘೋಷಣೆ ಮಾಡಿರುವುದು ಏನೇನೂ ಸಾಲದು, ಉದ್ಯೋಗ ಖಾತರಿ ಯೋಜನೆ ಮತ್ತು MFI ಸಂಸ್ಥೆ ನಿಯಂತ್ರಣಗಳ ಬಗ್ಗೆ ಯಾವುದೇ ಚಕಾರವಿಲ್ಲ. SHG ಗಳ ಬಗ್ಗೆ 2 ತಿಂಗಳು ಮುಂದೂಡಲಾಗಿದೆಯೆ ಹೊರತು, ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡುವ ಪ್ರಶ್ನೆಯಾಗಲಿ ,  ಹೊಸ ಸಾಲ ಸೌಲಭ್ಯ ದ ಪ್ರಸ್ತಾಪವೇ ಇಲ್ಲದ ಸುಳ್ಳಿನ ಪ್ಯಾಕೇಜ್, ಮೋಸದಿಂದ ಕೂಡಿದ ತಂತ್ರಗಾರಿಕೆಯ ಪ್ಯಾಕೇಜ್ ಇದಾಗಿದೆ.

ಕಳೆದ ವಷ೯ದ ಪ್ಯಾಕೇಜ್ ನ ಅಧ೯ದಷ್ಟು ಸಹಾ ಇರದ ಪ್ರಸಕ್ತ ಪ್ಯಾಕೇಜ್ ಕೋವಿಡ್ 2ನೇ ಅಲೆಯ ವ್ಯಾಪಕತೆ, ಸಾವು ನೋವಿನ ಪ್ರಮಾಣಕ್ಕೆ ಅನುಗುಣವಾಗಿಲ್ಲ. ಇದೊಂದು ಕಣ್ಣೊರೆಸುವ ತಂತ್ರವಲ್ಲದೆ ಮತ್ತೇನೂ ಅಲ್ಲ. ಕೋವಿಡ್ ನಿಯಂತ್ರಣಕ್ಕೆ ಅಗತ್ಯ  ಕ್ರಮವಹಿಸದ ರಾಜ್ಯ ಬಿಜೆಪಿ ಸಕಾ೯ರವು ಲಾಕ್ಡೌನ್ ಮೂಲಕ ಕೊರೋನಾ ತಡೆಗಟ್ಟುವ ಭ್ರಮೆ ಘೋಷಿಸಿ, ಇದೀಗ ಅರೆ ಬರೆ ಪ್ಯಾಕೇಜ್ ಘೋಷಣೆ ಮೂಲಕ  ಜನರನ್ನು ಮೂರ್ಖರನ್ನಾಗಿ ಮಾಡಲು ಮುಂದಾಗಿದೆಯೆಂದು  ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ  ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ. ಮತ್ತು ಕೂಡಲೇ ಮೇಲಿನ ಹಕ್ಕೊತ್ತಾಯಗಳನ್ನು ಜಾರಿಗೊಳಿಸಿ ಕೋವಿಡ್ ಸಂಕಟದಿಂದ ಆರ್ಥಿಕ ಧಾಳಿಯಿಂದ ನಲುಗುತ್ತಿರುವ ಜನತೆಗೆ ನೆರವಾಗಬೇಕೆಂದು ಆಗ್ರಹಿಸುತ್ತೇವೆ.

ಈ ಹಿನ್ನಲೆಯಲ್ಲಿ ಜನರಿಗೆ ಕಡೆಪಕ್ಷ ಬದುಕುಳಿಯಲು ಬೇಕಾದಷ್ಟಾದರೂ ಪರಿಹಾರವನ್ನು ನೀಡ ಬೇಕೆಂದು ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಂಘಟನೆ ಮೇ 26 ರಂದು ದೇಶವ್ಯಾಪಿ  ಮನೆಯಿಂದಲೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇತರರು  ಭಾಗವಹಿಸಿ ಯಶಸ್ವಿಗೊಳಿಸ ಬೇಕೆಂದು ಸಂಘಟನೆಯ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಕೆ ನೀಲಾ, ಅಧ್ಯಕ್ಷರಾದ ದೇವಿ, ಪ್ರ ಕಾರ್ಯದರ್ಶಿ ಗೌರಮ್ಮ, ನಂದಾದೇವಿಮಂಗೊಂಡಿ, ಅಮೀನಾ ಬೇಗಂ ಮನವಿ ಮಾಡಿದ್ದಾರೆ.

emedialine

Recent Posts

ತಾಜಸುಲ್ತಾನಪುರ: ಶಾಲಾ ಸಂಸತ್ತು ರಚನೆ

ಕಲಬುರಗಿ: ನಗರ ಹೊರವಲಯದ ತಾಜಸುಲ್ತಾನಪುರ ಗ್ರಾಮದ ಕೆಎಸ್ ಆರ್ ಪಿ ಸರಕಾರ ಪ್ರೌಢ ಶಾಲೆ ಕೆ. ಎಸ್. ಆರ್. ಪಿ…

5 seconds ago

“ಸಸ್ಯಾಗ್ರಹ”-ಸಸಿ ನೆಡುವ ಕಾರ್ಯಕ್ರಮಕ್ಕೆ ಡಾ. ತೇಜಸ್ವಿನಿ ಅನಂತಕುಮಾರ ಚಾಲನೆ

ಕಲಬುರಗಿ: ನಗರದ ವಾರ್ಡ್ ನಂಬರ್ 55ರಲ್ಲಿ ಬರುವ ಸಾಯಿರಾಂ ಕಾಲೋನಿ ಉದ್ಯಾನವನದಲ್ಲಿ ಅದಮ್ಯ ಚೇತನ ವತಿಯಿಂದ ಆಯೋಜಿಸಿದ್ದ "ಸಸ್ಯಾಗ್ರಹ"-ಸಸಿ ನೆಡುವ…

4 mins ago

ಪಿಎಸ್ಐ ಯಶೋಧ ಕಟಕೆಗೆ ಸನ್ಮಾನ

ಕಲಬುರಗಿ: ನಗರದ ಬ್ರಹ್ಮಪುರ ಪೆÇಲೀಸ ಠಾಣೆಗೆ ಅಧಿಕಾರ ವಹಿಸಿಕೋಂಡ ಪಿಎಸ್‍ಐ ಯಶೋಧ ಕಟಕೆ ಅವರುನ್ನು ಶ್ರೀ ಶರಣ ಡೋಹರ ಕಕ್ಕಯ್ಯ…

7 mins ago

ಮೇಯರ್ ವಿಶಾಲ ದರ್ಗಯಿಂದ ಪ್ಲೇಟ್ ಬ್ಯಾಂಕ್‍ ಉದ್ಘಾಟನೆ

ಕಲಬುರಗಿ: ಬಸವೇಶ್ವರ ಆಸ್ಪತ್ರೆಯ ಪಕ್ಕದಲ್ಲಿರುವ ಸ್ವಾಭಿಮಾನ್ ಸ್ವದೇಶಿ ಮಾರ್ಟ್‍ನಲ್ಲಿ ಅದಮ್ಯ ಚೇತನ ವತಿಯಿಂದ ಅನಂತ ಪ್ಲೇಟ್ ಬ್ಯಾಂಕ್‍ನ್ನು ಮೇಯರ್ ವಿಶಾಲ…

9 mins ago

ಜೈ ಕನ್ನಡಿಗ ಸೇನೆಯಿಂದ ಸಂಸದ ರಾಧಾಕೃಷ್ಣ ದೊಡ್ಡಮನಿಗೆ ಸನ್ಮಾನ

ಕಲಬುರಗಿ: ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ಜೈ ಕನ್ನಡಿಗ ಸೇನೆ ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸೇನೆ ಸಂಸ್ಥಾಪಕ…

12 mins ago

ಅನಸೂಯಾ ಸುಲೇಕರಗೆ ಶಾಸಕ ಎಂ. ವೈ. ಪಾಟೀಲ ಅಭಿನಂದನೆ

ಕಲಬುರಗಿ: ಅಫಜಲಪೂರ ತಾಲೂಕಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಅನಸೂಯಾ ಸುಲೇಕರ ಇವರಿಗೆ ಇಂಟರ ನ್ಯಾಷನಲ್ ಕ್ಯಾಂಬ್ರಿಜ ವಿಶ್ವವಿದ್ಯಾಲಯ ಯು.ಎಸ್.ಎ ಯುನಿವರ್ಸಿಟಿಯಿಂದ…

15 mins ago