ಬಿಸಿ ಬಿಸಿ ಸುದ್ದಿ

ರಾಜ್ಯವ್ಯಾಪಿಯ ಹೋಬಳಿ ಮಟ್ಟದಲ್ಲಿ ಕೊರೊನಾ ಕೇರ್ ಸೆಂಟರ್ ಸ್ಥಾಪಿಸಿ: ಡಾ. ಸರ್ದಾರ ರಾಯಪ್ಪ

ಕಲಬುರಗಿ: ಕೊರೊನಾ ಮಹಾಮಾರಿ ಹಳ್ಳಿಹಳ್ಳಿಯಲ್ಲಿ ಸಮುದಾಯದ ಹಂತಕ್ಕೆ ವ್ಯಾಪಿಸಿ ಮಾರಣಹೋಮ ನಡೆಸುತ್ತಿದೆ ಕೂಡಲೆ ಸರ್ಕಾರ ಹೋಬಳಿ ಮಟ್ಟದಲ್ಲಿ ರಾಜ್ಯವ್ಯಾಪಿ ಕೊರೊನಾ ಕೇರ್ ಸೆಂಟರ್ ಸ್ಥಾಪಿಸಿ ಗ್ರಾಮೀಣ ಭಾಗದ ಜನರ ಜೀವ ರಕ್ಷಿಸುವ ಕೆಲಸಮಾಡಬೇಕೆಂದು ಹೋರಾಟಗಾರ ಡಾ. ಸರ್ದಾರ ರಾಯಪ್ಪ ಆಗ್ರಹಿಸಿದ್ದಾರೆ.

ಎರಡನೆಯ ಅಲೆಯ ಕರೋನಾ ನಗರ ಪ್ರದೇಶಗಳಿಗಿಂತ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿದ್ದರಿಂದ ರೋಗಿಗಳ ಸಂಖ್ಯೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ಹಳ್ಳಿಗಳಲ್ಲಿ ಕೊರೊನಾ ಸೋಂಕಿತರು ಮತ್ತು ಅದರಿಂದ ಸಾವನ್ನಪ್ಪಿದವರ ಕುರಿತು ಸರ್ಕಾರಕ್ಕೆ ಯಾವುದೇ ಅಂಕಿಅಂಶಗಳು ಗೊತ್ತಿಲ್ಲ.ಪ್ರತಿ ಹಳ್ಳಿಗಳಲ್ಲಿ ಈಗಾಗಲೆ ದಿನಕ್ಕೊಬ್ಬಿಬ್ಬರಂತೆ 20-30 ಜನ ಪ್ರಾಣ ಕಳೆದುಕೊಂಡಿದ್ದಾರೆ, ಹಾಗೆ ಮುಂದುವರೆದಿದೆ. ಊರಿನಲ್ಲಿ ದಿನನಿತ್ಯ ಸಾವು ನೋಡಿ ಜನ ಭಯಬೀತಗೊಂಡು ಮೂಢನಂಬಿಕೆಗೆ ಮೊರೆಹೋಗಿದ್ದಾರೆ.

‘ಜಗತ್ತಿನ್ಯಾಗ ಪಾಪ ಹೆಚ್ಚಾಗ್ಯಾದ ಅದಕ್ ಈ ಮರ್ಗಿ, ದುರ್ಗಿ ಬ್ಯಾನಿ ಬಂದಾದ, ನಮ್ಗ ಆ ದೇವರೆ ಕಾಪಾಡಬೇಕೆಂದು ಜನ ಹೆಚ್ಚಿ ಸಂಖ್ಯೆಯಲ್ಲಿ ಸೇರಿಕೊಂಡು ಇದ್ದ-ಬಿದ್ದ ಗಂಡು, ಹೆಣ್ಣು ದೇವರುಗಳಿಗೆ ಕುರಿ-ಕೋಳಿ ಬಲಿ ಕೊಡುವುದು, ಹೋಮ ಹವನ ಮಾಡಿಸುವುದು ಸೇರಿದಂತೆ ಹಲವಾರು ಹರಕೆ ಹೊತ್ತು ತಿರಿಸುತ್ತಿದ್ದಾರೆ.ಕೊರೊನಾ ರೋಗದ ಗುಣಲಕ್ಷಣ, ಅದರ ಅಪಾಯದ ಗಾಂಭೀರ್ಯತೆ ತಿಳಿಯದೆ ಜನ ಸಾಮಾಜಿಕ ಅಂತರ ಮರೆತು ಹೀಗೆ ಮೂಢನಂಬಿಕೆ ಪ್ರದರ್ಶಿಸುತ್ತಿದ್ದಾರೆ.

ಕೊರೋನಾದ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದವರು ಏನಾದರೂ ಹೇಳಿದರೆ ‘ನಿನಗೇನು ಗೊತ್ತಾದ ಕರೋನಾ ಇಲ್ಲ ಪರೋನಾ ಇಲ್ಲ ಸರ್ಕಾರದವರು ಸುಮ್ನೆ ಹೇಳ್ತಾರ್’, ನಾವು ಸತ್ತರೆ ಸಾಯಲಾಕ್ ಎಂದು ಅವಾಚ್ಯವಾಗಿ ಬೈದು ಹೇಳಿದವರಿಗೆ ಅವಮಾನಿಸುತ್ತಿದ್ದಾರೆ.

ಸರ್ಕಾರ ಕಂಡೂಕಾಣದಂತೆ ಸುಮ್ಮನೆ ಕುಳಿತಿರುವುದು ಇನ್ನೂ ಹೆಚ್ಚಿನ ಅಪಾಯಕ್ಕೆ ಆಹ್ವಾನ ನೀಡಿದಂತೆ ಕಾಣುತ್ತದೆ. ಕೂಡಲೇ ಸರಕಾರ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ದೇವರ ಹರಕೆ ತೀರಿಸುವುದು, ಮದುವೆ-ಮುಂಜಿ ಸೇರಿದಂತೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಿಷೇಧಗೊಳಿಸಬೇಕು.

ಶೀಘ್ರದಲ್ಲೇ ರಾಜ್ಯಾದ್ಯಂತ ಹೋಬಳಿ ಮಟ್ಟದಲ್ಲಿ ಕೊರೊನಾ ಕೇರ್ ಸೆಂಟರ್ ಸ್ಥಾಪಿಸಬೇಕು. ಎಕೆಂದರೆ ಆಸ್ಪತ್ರೆಗಾಗಿ ತಾಲ್ಲೂಕ, ಜಿಲ್ಲಾ ಕೊವಿಡ್ ಕೇರ್ ಸೆಂಟರ್ ಗೆ ಹೋಗಲು ಅಂಬುಲೆನ್ಸ್ ಅಥವಾ ಇತರೆ ವಾಹನ ಸೌಕರ್ಯಗಳಿಲ್ಲ. ಅದೇಗೋ ವಾಹನ ವ್ಯವಸ್ಥೆ ಮಾಡಿಕೊಂಡು ಹೊರಟರೆ ಅದೆಷ್ಟೋ ಜನ ಆಸ್ಪತ್ರೆಗೆ ತಲುಪುವ ಮೊದಲೇ ನಡುದಾರಿಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಹಾಗೇ ಹಳ್ಳಿಯ ಜನರಿಗೆ ಕೊರೊನಾ ರೋಗದ ಬಗ್ಗೆ ಯಾವುದೇ ಬಗೆಯ ಮಾಹಿತಿ ಇಲ್ಲ. ಅದರ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ತರಹದ ಅಭಿಪ್ರಾಯಗಳಿವೆ. ಅದನ್ನು ಹೋಗಲಾಡಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಕೂಡಲೆ ಪ್ರತಿ ಹೋಬಳಿ ಮಟ್ಟದಲ್ಲಿ ರಾಜ್ಯವ್ಯಾಪಿ ಕೊರೊನಾ ಕೇರ್ ಸೆಂಟರ್ ಸ್ಥಾಪಿಸಿ, ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಜನರ ಗಂಟಲ ದ್ರವ ಪಡೆದು ಟೆಸ್ಟ್ ಮಾಡುವುದರ ಜೊತೆಗೆ ಲಸಿಕೆ ಹಾಕುವ ಕಾರ್ಯ ಮಾಡಬೇಕೆಂದು ಪ್ರಕಟಣೆಯಲ್ಲಿ ತಿಳಿದ್ದಾರೆ.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

8 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

8 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

10 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

10 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

10 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

11 hours ago