ಕಲಬುರಗಿ: ಕಾಮ್ರೆಡ ಮಾರುತಿ ಮಾನಪಡೆ ರವರ ೬೬ ನೇ ಜನ್ಮ ದಿನದ ಅಂಗವಾಗಿ ಇಂದು ಅಂಬಲಗಿ ಗ್ರಾಮದಲ್ಲಿ ಮಾನಪಡೇ ರವರ ಸಮಾದಿಯ ಸ್ಥಳದಲ್ಲಿ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು ಮತ್ತು ಜಿಲ್ಲೆಯ ಹಲವಾರು ಗ್ರಾಮ ಪಂಚಾಯತಗಳಲ್ಲಿಯೂ ಅತ್ಯಂತ ಸರಳವಾಗಿ ಮಾಸ್ಕ್ , ಉಪಹಾರ ವಿತರಿಸಿ ಆಚರಿಸಲಾಯಿತು.
ಅಂಬಲಗಾ ಗ್ರಾಮದ ಮಾರುತಿ ಮಾನಪಡೆಯವರ ಸಮಾಧಿ ಸ್ಥಳದಲ್ಲಿ ಸಸಿಗಳನ್ನು ನೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲು ಮಾಚಿ ಮಾತಾಡುತ್ತಾ ಅವರು, ಅನ್ಯಾಯದ ವಿರುದ್ದ ಸದಾ ಹೋರಾಡುತ್ತಿದ್ದರು ಅವರು ಸರಳ ಸಜ್ಜನ ವ್ಯಕ್ತಿಯಾಗಿದ್ದರು ಅಂತ ದೊಡ್ಡ ವ್ಯಕ್ತಿಯನ್ನು ಕಳೆದುಕೊಂಡ ನಾವು ಅನಾಥರು ಆಗಿದ್ದೆವೆ ನಮ್ಮಂತ ಎ? ಯುವಕರು ಅವರ ಕೈಯಲ್ಲಿ ಬೆಳೆದು ರಾಜಕೀಯ ವೆಂದರೆನು ಅಂತ ಕಲಿಸಿಕೊಟ್ಟ ಧೀಮಂತ ನಾಯಕರು ಅವರ ಸ್ಪೂರ್ತಿಯಿಂದಲೆ ನಾನು ಇಂದು ಗ್ರಾಮ ಪಂಚಾಯತ್ ಸದಸ್ಯನಗಿದ್ದೆನೆ ಎಂದು ಹೇಳಿದರು.
ಗ್ರಾಮದ ರೈತ ಸಂಘದ ಮುಖಂಡರಾದ ಬಸವರಾಜ ಸರಡಗಿ ಮಾತನಾಡುತ್ತಾ ಅವರು, ಮಾನಪಡೇ ರವರ ಜೋತೆ ನಾನು ೩೭ ವ?ಗಳ ಕಾಲ ಜೊತೆಯಲ್ಲೇ ಹೋರಾಟ ಮಾಡುತ್ತ ಬಂದಿದ್ದೇನೆ, ಅವರ ವ್ಯಕ್ತಿತ್ವ ಎಂತದು ಅಂದರೆ ನಾನು ಒಬ್ಬನೆ ಬೆಳೆಯಬಾರದು ನನ್ನ ಜೋತೆ ಇರುವ ಜನ ಸಾಮಾನ್ಯರು ಕೂಡ ಅನ್ಯಾಯದ ವಿರುದ್ದ ದ್ವನಿ ಎತ್ತಿ ಮಾತನಾಡಬೇಕು ಅಂತ್ತಿದ್ದರು ಜನರ ಕಷ್ಠಕ್ಕೆ ಬೇಗನೆ ದಾವಿಸುತ್ತಿದ್ದರು ಅವರಂತ ನಾಯಕ ನಮಗೆ ಯಾವ ಜನ್ಮದಲ್ಲು ಸಿಗೋದಿಲ್ಲ ಎಂದು ಹೇಳಿದರು.
ವಿವಿಧ ಗ್ರಾಮ ಪಂಚಾಯತಗಳಲ್ಲಿ ಗ್ರಾಮ ಪಂಚಾಯತ್ ನೌಕರರ ಸಂಘದ ಪಿತಾಮಹ ಮಾರುತಿ ಮಾನಪಡೆಯವರ ಹುಟ್ಟು ಹಬ್ಬದವನ್ನು ಆಚರಿಸಿದರು.ಕಮಲಾಪುರ ತಾಲೂಕ ಪಂಚಾಯತ್ ಕಚೇರಿ ಸಭಾಂಗಣದಲ್ಲಿ , ನಾಗೂರ , ಕಲಮೂಡ , ಹೊಳಕುಂದಾ,ಡೊಂಗುರಗಾಂವ, ವಿ.ಕೆ,ಸಲಗರ ,ಓಕಳಿ, ಕುರಿಕೋಟ ಹಾಗೂ ಚಿಂಚೋಳಿ ತಾಲೂಕಿನ ಸಾಲೇಬಿರನಹಳ್ಳಿಯಲ್ಲಿ ಕೂಲಿ ಕಾರ್ಮಿಕರಿಗೆ ಉಪಹಾರ ,ಹಾಗೂ ಮಾಸ್ಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದಸ್ತಗಿರಿ ಬನ್ನಿಕಾರ ,ವೀರಭದ್ರ ಕಲಬುರಗಿ, ಬಂಡಪ್ಪ ಚಿಲಿ ,ಸುನಿಲ ಮಾರುತಿ ಮಾನಪಡೆ, ಹನಮಂತ ಚಿಂಚೋಳಿ , ದಾಸಪ್ಪ ಚವ್ಹಾಣ , ಸಾಯಿಬಣ್ಣ ಕೊಡದುರ್ , ತಿಮ್ಮಣ್ಣ ಚವ್ಹಾಣ ದುರ್ಗಪ್ಪ ಚವ್ಹಾಣ ,ರಮೇಶ ನಾಯಕ , ಸೋಮು ನಾಯಕ, ಸಿದ್ದಲಿಂಗ್ ಪಾಳಾ, ಸೋಮಶೇಖರ್ ಸಿಂಗೆ ,ಅನಿಲ ಕೊಳ್ಳುರೆ , ಸಂಗಪ್ಪ ಕೊಳ್ಳುರೆ , ಬೀರು ಮಾಳಗಿ , ಅಶೋಕ ನಾಗುರ, ಸುನೀಲ ಸರಡಗಿ,ನಾಗಪ್ಪ ಸರಡಗಿ ಮಾಣಿಕ ಗಡದ ಇನ್ನು ಮುಂತಾದವರು ಇದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…