ಅಂಕಣ ಬರಹ

ಗ್ರಾಮ ಪಂಚಾಯತ್ ಗಳು ಸರಕಾರವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ದಲ್ಲಾಳಿಗಳಾಗಲ್ಲ..!

ಕೆ.ಶಿವು.ಲಕ್ಕಣ್ಣವರ

ಗ್ರಾಮ ಪಂಚಾಯತ್‌ಗಳು ಗ್ರಾಮ ಸರಕಾರವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ರಾಜ್ಯ ಸರಕಾರದ ದಲ್ಲಾಳಿಗಳಾಗಲ್ಲ. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಂವಿಧಾನದ ಆಶಯಕ್ಕೆ ಚ್ಯುತಿ ತರುವ ಇಂತಹ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸುತ್ತದೆ. ಸರಕಾರವು ಈ ಎಲ್ಲಾ ನಡೆಗಳಿಂದ ತಕ್ಷಣವೇ ಹಿಂದೆ ಸರಿಯಬೇಕು ಎಂದು ಒತ್ತಾಯ ಮಾಡುತ್ತಿದೆ.

ಗ್ರಾಮ ಸರಕಾರವನ್ನು ಸ್ಥಳೀಯ ಸ್ವಯಂ ಸರಕಾರವಾಗಿ ರೂಪಿಸುವ ಮೂಲಕ ಗ್ರಾಮ ಸ್ವರಾಜ್ಯದ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವ ಬದಲು ಗ್ರಾಮ ಪಂಚಾಯತ್ ಮತ್ತು ಗ್ರಾಮಸಭೆಯ ಅಧಿಕಾರವನ್ನು ಕಿತ್ತುಕೊಂಡು ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹೊರಟಿರುವ ಕರ್ನಾಟಕ ರಾಜ್ಯ ಸರಕಾರದ ಎಲ್ಲಾ ನಡೆಗಳನ್ನು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ತೀವ್ರವಾಗಿ ಖಂಡಿಸುತ್ತದೆ. ಮತ್ತು ಯಾವಾಗಲೂ ಖಂಡಿಸುತ್ತದೆ.

ಈ ನಿಟ್ಟಿನಲ್ಲಿ ಸರಕಾರವು ಕೆಲವು ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ಕಳೆದ ಕೆಲವು ದಿನಗಳಿಂದ ಪತ್ರಿಕೆಯಲ್ಲಿ ವರದಿಯಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ಕ್ಕೆ ತಿದ್ದುಪಡಿ ತರಲು ಬುಧವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿರುವುದಾಗಿ ವರದಿಯಾಗಿದೆ. ತಿದ್ದುಪಡಿ ತರಬೇಕಾದ ಸುಮಾರು 20 ಅಂಶಗಳ ಬಗ್ಗೆ ಪಂಚಾಯತ್ ರಾಜ್ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿ ಕಾನೂನು ಇಲಾಖೆಗೆ ಅಭಿಪ್ರಾಯ ನೀಡುವಂತೆ ಸೂಚಿಸಿದ್ದು, ಸಂಪುಟದ ಸೂಚನೆಯ ಮೇರೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಮಿತಿ ಸಭೆಯು ತನ್ನ ಅಭಿಪ್ರಾಯವನ್ನು ನೀಡಿದ್ದು, ಕಾನೂನು ಇಲಾಖೆಯ ಅಭಿಪ್ರಾಯದಂತೆ ಮುಂದಿನ ಸಂಪುಟ ಸಭೆಯ ಒಪ್ಪಿಗೆ ಪಡೆದು ಮುಂದಿನ ವಾರ ಸದನದಲ್ಲಿ ಮಂಡಿಸುವುದಾಗಿ ತಿಳಿದು ಬಂದಿರುವ ಬಗ್ಗೆ ವರದಿಯಾಗಿದೆ.

ತಿದ್ದುಪಡಿಗಳು ಮಾಡಲು ಹೊರಟಿರುವ ಅಂಶಗಳು–

1. ತ್ರಿಸ್ಥರ ಪಂಚಾಯತ್‌ಗಳಿಗೆ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ಕಾಯ್ದೆಯ ಪ್ರಕಾರ ನಿಗದಿ ಮಾಡಿದ್ದ ಎರಡು ಅವಧಿಗೆ (10 ವರ್ಷಗಳಿಗೆ) ಇರುವ ಮೀಸಲಾತಿಯನ್ನು ಒಂದೇ ಅವಧಿಗೆ (5 ವರ್ಷಗಳಿಗೆ) ಸಡಿಲ ಮಾಡಲು ಮತ್ತು ಇದರ ಕುರಿತಾಗಿರುವ ನಿಯಮಗಳನ್ನು ತೆಗೆದು ಹಾಕಲು ಸರಕಾರ ತಯಾರಾಗಿದೆ. 2. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರವನ್ನು 5 ವರ್ಷಗಳ ಬದಲಿಗೆ 30 ತಿಂಗಳ ಅವಧಿ ನಿಗದಿ ಪಡಿಸಲು ರಾಜ್ಯ ಸರಕಾರ ನಿರ್ಧಾರ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರ ಅವಧಿಯು ಪೂರ್ಣ 5 ವರ್ಷಗಳು ಎಂದು ಗ್ರಾಮ ಸ್ವರಾಜ್ ಕಾಯ್ದೆ ಸ್ಪಷ್ಟಪಡಿಸಿದ್ದರೂ ಕೂಡ ಸುದೀರ್ಘ ಅವಧಿಯನ್ನು ಒಪ್ಪಿಕೊಳ್ಳದ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ಆಡಳಿತ ವ್ಯವಸ್ಥೆ ಏರುಪೇರಾಗುವಂತೆ ಮಾಡುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿರುವ ಸರಕಾರ ಎಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿಯನ್ನು 30 ತಿಂಗಳ (2.5 ವರ್ಷಗಳ)ಅವಧಿಗೆ ಗೊತ್ತುಪಡಿಸಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.

”ತಳಮಟ್ಟದಲ್ಲಿ ನಾಯಕತ್ವ ಬೆಳೆಸುವ ಉದ್ದೇಶದಿಂದ ಪಂಚಾಯತ್ ಅಧ್ಯಕ್ಷರ ಅವಧಿಯನ್ನು 2 ಅವಧಿಗೆ ಅಥವಾ 10 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಒಂದೇ ಅವಧಿಗೆ ಮೀಸಲಾತಿ ನಿಗದಿಪಡಿಸಿದರೆ ಚುನಾಯಿತ ಪ್ರತಿನಿಧಿಗಳಿಗೆ ಆಯಾ ಪ್ರದೇಶದ ಅಭಿವೃದ್ಧಿ ಆಸಕ್ತಿ ಇಲ್ಲವಾಗಬಹುದು ಅನ್ನುವಕಾರಣಕ್ಕೆ ಎರಡು ಅವಧಿಗೆ ಅವಕಾಶ ಕಲ್ಪಿಸಲಾಗಿತ್ತು” ಎಂಬ ಮಾಜಿ ಸ್ಪೀಕರ್, ಶಾಸಕರು ಹಾಗೂ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿಯ ಅಧ್ಯಕ್ಷರಾದ ರಮೇಶ್‌ಕುಮಾರ್‌ರ ಹೇಳಿಕೆಯು ಕಾಯ್ದೆಯಲ್ಲಿ ಮೀಸಲಾತಿ ನೀಡಿರುವುದರ ಹಿಂದಿನ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸುತ್ತದೆ.ವಸತಿ ಯೋಜನೆಗೆ ಫಲಾನುಭವಿಗಳ ಪಟ್ಟಿಯನ್ನು ಅಂತಿಮ ಗೊಳಿಸುವ ಗ್ರಾಮ ಸಭೆಯ ಅಧಿಕಾರಕ್ಕೇ ಕತ್ತರಿ–

ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸಭೆಯ ಹಕ್ಕು ಮತ್ತು ಅಧಿಕಾರಗಳನ್ನು ಮೊಟಕುಗೊಳಿಸುವಲ್ಲಿ ರಾಜ್ಯ ಸರಕಾರ ಕಳೆದ ಹಲವು ತಿಂಗಳುಗಳಿಂದ ಇಂತಹದೇ ಹಲವಾರು ವ್ಯತಿರಿಕ್ತ ಹಾಗೂ ಆತಂಕಕಾರಿ ಹೆಜ್ಜೆಗಳನ್ನು ಇಡುತ್ತಿರುವ ಬಗ್ಗೆಯೂ ವರದಿಯಾಗಿದೆ. ನಮ್ಮ ರಾಜ್ಯದ ವಸತಿ ಸಚಿವರು, ”ಆಶ್ರಯ ಮನೆಗಳಿಗೆ ಫಲಾನುಭವಿಗಳ ಪಟ್ಟಿ ತಯಾರಿಸಿದ ಬಳಿಕ ಅದಕ್ಕೆ ಗ್ರಾಮ ಸಭೆಯ ಒಪ್ಪಿಗೆ ಇನ್ನು ಮುಂದೆ ಅಂತಿಮವಲ್ಲ. ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ, ತಹಶೀಲ್ದಾರ್, ಪಿಡಿಒಗಳನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸಲಾಗುತ್ತದೆ. ಫಲಾನುಭವಿಗಳು ಅರ್ಹರೇ?, ಅವರಿಗೆ ಮನೆ ದೊರಕಿದೆಯೇ? ಎಂಬುದನ್ನು ಖಾತರಿಪಡಿಸುವ ಜವಾಬ್ದಾರಿಯೂ ಸಮಿತಿಯದು” ಎಂದು ಕೆಲವು ತಿಂಗಳುಗಳ ಹಿಂದೆ ಹೇಳಿಕೆ ನೀಡಿದ್ದಾರೆ.

ರಾಜ್ಯದ ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ನಡೆದ ಅಕ್ರಮವನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿರುವ ಗ್ರಾಮ ಸಭೆಯ ಅಧಿಕಾರಗಳನ್ನು ಕಿತ್ತುಕೊಳ್ಳುವುದು ಈ ಸಮಸ್ಯೆಗೆ ಪರಿಹಾರವಲ್ಲ. ಅಕ್ರಮ ನಡೆದಿರುವ ಪಂಚಾಯತ್‌ಗಳಲ್ಲಿ ಸೂಕ್ತ ತನಿಖೆಯ ಮೂಲಕ ಅದನ್ನು ತಡೆಯಬೇಕೇ ಹೊರತು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳ ಗ್ರಾಮ ಸಭೆಯ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನ ಹಾಗೂ ಕಾನೂನು ಬಾಹಿರ.

ಜವಾಬ್ದಾರಿ ನಕ್ಷೆಯ ಪುನರ್ರಚನೆ ಪ್ರಕ್ರಿಯೆ: & ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಪ್ರಕಟವಾಗುವ ನವೆಂಬರ್ 2019ರ ಕರ್ನಾಟಕ ವಿಕಾಸದಲ್ಲಿ ತಮ್ಮ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಸಲಹೆಗಾರರಾದ ಎಂ.ಕೆ. ಕೆಂಪೇಗೌಡ ಅವರು ಮಾಡಿರುವ ವರದಿಯಲ್ಲಿ ”ದಿನಾಂಕ 19-10-2019ರಂದು ಮಾನ್ಯ ಸಚಿವರ ಜೊತೆ ನಡೆದ ಸಭೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನದ 73ನೇ ತಿದ್ದುಪಡಿಯ ಆಶಯದಂತೆ 29 ವಿಷಯಗಳನ್ನೊಳಗೊಂಡ ಪ್ರಕಾರ್ಯಗಳನ್ನು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಅನುಸೂಚಿ..!

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ವ್ಯಾಖ್ಯೆಯಲ್ಲಿ ‘ಜವಾಬ್ದಾರಿ ನಕ್ಷೆ’ಯು ಸೇರ್ಪಡೆಗೊಂಡಿದೆ. ಅಲ್ಲದೆ ಕಾಯ್ದೆಯಲ್ಲಿ ಅನ್ವಯವಾಗುವ ಹಾಗೂ ಅಗತ್ಯವಿರುವ ಪ್ರಕರಣಗಳಲ್ಲಿ ”ಜವಾಬ್ದಾರಿ ನಕ್ಷೆಗೆ ಅನುಗುಣವಾಗಿ” ಎಂದು ಉಲ್ಲೇಖಿಸಲಾಗಿದೆ. ವಿಷಾದಕರ ಸಂಗತಿಯೆಂದರೆ ಗೆಜೆಟ್ ಅಧಿಸೂಚನೆಯಲ್ಲಿ ಜವಾಬ್ದಾರಿ ನಕ್ಷೆಯನ್ನು ನಿಯಮವಾಗಿ ಕಾಯ್ದೆಯ ಭಾಗವಾಗಿ ಸೇರಿಸುವಲ್ಲಿ ಲೋಪವಾಗಿದೆ.

ತಳಮಟ್ಟದಲ್ಲಿ ಚರ್ಚೆ-ಸಂವಾದಗಳನ್ನು ನಡೆಸಿ ತ್ರಿಸ್ಥರ ಪಂಚಾಯತ್‌ಗಳ ಜವಾಬ್ದಾರಿಯನ್ನು ಸ್ಪಷ್ಟವಾಗಿ, ವಿವರವಾಗಿ ಹೇಳುವ ಈಗಾಗಲೇ ಇರುವ ಜವಾಬ್ದಾರಿ ನಕ್ಷೆಯನ್ನು ಕಾಯ್ದೆಯ ಭಾಗವಾಗಿ ಮಾಡುವುದನ್ನು ಬಿಟ್ಟು ಕೇವಲ ಅಧಿಕಾರಿಗಳ ಹಂತದಲ್ಲಿ ಹೊಸದಾಗಿ ಜವಾಬ್ದಾರಿ ನಕ್ಷೆಯನ್ನು ಪುನರ್ರಚಿಸುವ ಈ ಪ್ರಕ್ರಿಯೆಯನ್ನು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಖಂಡಿಸುತ್ತದೆ.

ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಪ್ರಜಾಪ್ರಭುತ್ವದ ವಿಕೇಂದ್ರೀಕರಣಕ್ಕೆ ಧಕ್ಕೆ ಉಂಟುಮಾಡುವ, ನೈಜ ಪ್ರಜಾಪ್ರಭುತ್ವದ ಸಾಕಾರಕ್ಕೆಂದೇ ಇರುವ ಗ್ರಾಮ ಸಭೆಯ ಹಕ್ಕು ಮತ್ತು ಅಧಿಕಾರಗಳು ಹಾಗೂ ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸ್ವಯಂ ಸರಕಾರವಾಗಿ ಕಾರ್ಯನಿರ್ವಹಿಸಲು ಅಡ್ಡಿಯುಂಟು ಮಾಡುವ ಸರಕಾರದ ಎಲ್ಲಾ ಕ್ರಮಗಳನ್ನು ಖಂಡಿಸಿ, ಕಾಲಕಾಲಕ್ಕೆ ಕಾನೂನಾತ್ಮಕ ಮತ್ತು ಅಹಿಂಸಾತ್ಮಕವಾದ ವಿವಿಧ ಹೋರಾಟಗಳ ಮೂಲಕ ಸರಕಾರದ ನಡೆಗಳನ್ನು ಪ್ರಶ್ನಿಸುತ್ತಾ ಬಂದಿದೆ.

ಆದರೂ ಸಹ ಸರಕಾರ ತನ್ನ ನಿರ್ಣಯಗಳಿಂದ ಹಿಂದೆ ಸರಿಯದೇ, ಈಗ ಇರುವ ಪ್ರಬಲ ಕಾಯ್ದೆಯನ್ನು ತಿದ್ದುಪಡಿಯ ಮೂಲಕ ಪುನಃ ದುರ್ಬಲಗೊಳಿಸಲು ಮುಂದಾಗಿದೆ. ಸರಕಾರ ಕೈಗೊಳ್ಳುತ್ತಿರುವ ಈ ಎಲ್ಲಾ ಪ್ರಯತ್ನಗಳು ಸಂವಿಧಾನಾತ್ಮಕವಾಗಿ ನೀಡಿದ ಕಾಯ್ದೆಯ ಅಂಶಗಳ ಸ್ಪಷ್ಟ ಉಲ್ಲಂಘನೆ. ಇದೆಲ್ಲದರ ದುಷ್ಪರಿಣಾಮವನ್ನು ಅನುಭವಿಸುವುದು ಹಕ್ಕುಗಳಿಂದ ವಂಚಿತರಾಗಿರುವ ಗ್ರಾಮ ಸಭೆ ಹಾಗೂ ಅಧಿಕಾರ ಕಳೆದುಕೊಂಡು ಹೆಸರಿಗಷ್ಟೇ ಸ್ಥಳೀಯ ಸ್ವಯಂ ಸರಕಾರವೆಂದು ಕರೆಯಲ್ಪಡುವ ಗ್ರಾಮ ಸರಕಾರವೆನ್ನುವುದು ದುರದೃಷ್ಟಕರ.

ಗ್ರಾಮ ಪಂಚಾಯತ್ ಪ್ರತಿನಿಧಿಗಳಾಗಿ, ಗ್ರಾಮ ಸಭಾ ಸದಸ್ಯರಾಗಿ ಈ ಮೇಲಿನ ಎಲ್ಲಾ ಪ್ರಯತ್ನಗಳನ್ನು ಒಗ್ಗಟ್ಟಾಗಿ, ಪ್ರಬಲವಾಗಿ ವಿರೋಧಿಸಬೇಕಾದ ಅನಿವಾರ್ಯತೆ ಹಾಗೂ ಅಗತ್ಯತೆ ಇದೆ. ಗ್ರಾಮ ಪಂಚಾಯತ್‌ಗಳು ಗ್ರಾಮ ಸರಕಾರವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ರಾಜ್ಯ ಸರಕಾರದ ದಲ್ಲಾಳಿಗಳಾಗಲ್ಲ. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಂವಿಧಾನದ ಆಶಯಕ್ಕೆ ಚ್ಯುತಹವಣಿಕೆ ಇಂತಹ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸುತ್ತದೆ. ಸರಕಾರವು ಈ ಎಲ್ಲಾ ನಡೆಗಳಿಂದ ತಕ್ಷಣವೇ ಹಿಂದೆ ಸರಿಯಬೇಕು ಎಂದು ಒತ್ತಾಯ ಮಾಡುತ್ತಿದೆ..!

ಹೀಗೆಯೇ ಗ್ರಾಮ ಪಂಚಾಯತ್ ನಲ್ಲಿ ಕೈಯಾಡಿಸುವ ಹವಣಿಕೆಯನ್ನು ಮಾಡುತ್ತಿದೆ ರಾಜ್ಯ ಸರಕಾರ. ಇದು ಖಂಡನಾರ್ಹವಾಗಿದೆ. ಇನ್ನಾದರೂ ರಾಜ್ಯ ಸರಕಾರಕ್ಕೆ ತಪ್ಪು ತಿದ್ದುಕೊಂಡು ಈ ಗ್ರಾಮ ಪಂಚಾಯತ್ ನಲ್ಲಿ ತನ್ನ ರಾಜಕಾರಣದಿಂದ ಹಿಂದೆ ಸರಿದರೆ ತನಗೇ ಒಳಿತು..!

ಮಾಹಿತಿ ಕೃಪೆ– ಶ್ರೀನಿವಾಸ ಗಾಣಿಗ,‌ ಸಂಚಾಲಕರು, ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago