ಸುರಪುರ: ಈಗಾಗಲೇ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸರಕಾರಕ್ಕೆ ಮತ್ತು ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರಿಗೆ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಕೆಜೆಯುನಿಂದ ಮನವಿ ಮಾಡಿದ್ದು,ಶಾಸಕರು ಪತ್ರಿಕಾ ಭವನ ನಿರ್ಮಾಣಕ್ಕೆ ಭರವಸೆಯನ್ನು ನೀಡಿದ್ದಾರೆ ಎಂದು ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿದರು.
ನಗರದ ಟೈಲರ್ ಮಂಜಿಲ್‌ನಲ್ಲಿ ಗುರುವಾರ ನಡೆದ ಕೆಜೆಯು ತಾಲೂಕು ಘಟಕದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಕೆಜೆಯು ವತಿಯಿಂದ ಶೀಘ್ರದಲ್ಲಿ ಪತ್ರಿಕಾ ದಿನಾಚರಣೆಯನ್ನು ಸರಳ ಮತ್ತು ಅರ್ಥಪೂರ್ಣವಾಗಿ ಮಾಡೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ರವಿರಾಜ ಕಂದಳ್ಳಿ ಮಾತನಾಡಿ,ಕೆಜೆಯು ಸಂಘಟನೆಯು ಜಿಲ್ಲೆಯಲ್ಲಿನ ಎಲ್ಲಾ ಪತ್ರಕರ್ತರ ಶ್ರೇಯೋಭಿವೃಧ್ಧಿಗಾಗಿ ಆರಂಭಿಸಿದ್ದು ಇದರ ಮೂಲಕ ಎಲ್ಲಾ ಪತ್ರಕರ್ತರಿಗೆ ಸರಕಾರದ ಸೌಲಭ್ಯಗಳನ್ನು ಮತ್ತು ಹೊಸ ವರಿದಗಾರರಿಗೆ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದು ಸಲಹೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ ಮಾತನಾಡಿ,ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಇದುವರೆಗೂ ಜಿಲ್ಲೆಯಲ್ಲಿನ ಪತ್ರಕರ್ತರ ಏಳಿಗೆಗಾಗಿ ಶ್ರಮಿಸಿದೆ ಮುಂದೆಯೂ ಇದನ್ನು ಮುಂದುವರೆಸುತ್ತಿದ್ದು,ಕೆಲವರು ಪತ್ರಕರ್ತರ ಸಂಘಟನೆಗಳ ಮಾನ್ಯತೆ ಬಗ್ಗೆ ಊಹಾಪೋಹದ ಮಾತುಗಳನ್ನಾಡುತ್ತಿರುವುದು ಕೇಳಿಬಂದಿದ್ದು ಅಂತವರಿಗೆ ಸಂಘಟನೆಯು ಕೆಲಸದ ಮೂಲಕ ಉತ್ತರ ನೀಡುತ್ತಿದೆ.ಯಾವುದೇ ಸಂಘಟನೆ ಸರಕಾರದ ಮಾನ್ಯತೆ ಪಡೆಯದೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಅರಿತು ಮಾತನಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷದ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿದ್ದ ಪತ್ರಕರ್ತರ ಸೋಮಶೇಖರ ನರಬೋಳಿ ಅವರಿಂದ ತೆರವಾಗಿದ್ದ ತಾಲೂಕು ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಹಿರಿಯ ಪತ್ರಕರ್ತ ಕಲೀಂ ಫರೀದಿ ಅವರನ್ನು ನೇಮಕಗೊಳಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮಲ್ಲು ಗುಳಗಿ ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ ಕಾರ್ಯದರ್ಶಿ ಮಲ್ಲಿಕಾರ್ಜುನ ತಳ್ಳಳ್ಳಿ ಮನಮೋಹನ ಪ್ರತಿಹಸ್ತ ಮುರಳಿಧರ ಅಂಬುರೆ ರಾಘವೇಂದ್ರ ಮಾಸ್ತರ ಗಿರೀಶ ಬ್ಯಾಕೋಡ ಪುರುಷೋತ್ತಮ ದೇವತ್ಕಲ್ ಭೀಮಾಶಂಕರ ಕರ್ನಾಳ ಮಾಳಪ್ಪ ಕಿರದಹಳ್ಳಿ ರೇವಣಸಿದ್ದಯ್ಯ ಮಠ ಶ್ರೀಮಂತ ಚಲುವಾದಿ ಇತರರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…