ಸುರಪುರ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ’ನುಡಿನಮನ’ ಕಾರ‍್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಅನೇಕ ಜನ ಸಾಹಿತ್ಯಾಸಕ್ತರು ಮಾತನಾಡಿ,ಕವಿ ಡಾ.ಸಿದ್ಧಲಿಂಗಯ್ಯ ಅವರು ತಮ್ಮ ಕಾವ್ಯದ ಶಕ್ತಿಯಿಂದ ಇಡೀ ಕನ್ನಡ – ಕನ್ನಡ ಸಾಹಿತ್ಯದ ದಿಕ್ಕನ್ನೇ ಬದಲಿಸಿದರು. ದನಿ ಇಲ್ಲದವರಿಗೆ ದನಿಯನ್ನು ಕೊಟ್ಟ ಶ್ರೇಯಸ್ಸು ಸಿದ್ಧಲಿಂಗಯ್ಯನವರಿಗೆ ಸಲ್ಲುತ್ತದೆ’ ಹೇಳಿದರು.
ಕವಿ ಸಿದ್ಧಲಿಂಗಯ್ಯನವರು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳನ್ನು ಸೇರಿಸಿದರು, ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದ ಕೃಷ್ಣಪ್ಪನವರ ಹೆಗಲಿಗೆ ಹೆಗಲಾಗಿ ದುಡಿದು, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಹೋರಾಡಿದರು, ಅವರ ಕಾವ್ಯ ದಲಿತರ ಬಾಳಿನ ಬೆಳ್ಳಿ ಕಿರಣಗಳಾದವು’ ಎಂದು ಹೇಳಿದರು. ’ಪರುಷಮಣಿ’ಯಾಗಿದ್ದರು, ನಟ ಸಂಚಾರಿ ವಿಜಯ ತಮ್ಮ ಅದ್ಭುತ ನಟನೆಯ ಮೂಲಕ, ಮರಣದ ನಂತರವೂ ಅಂಗಾಂಗ ದಾನ ಮಾಡಿ ಜೀವಿಸಿರುವ ’ಚಿರಂಜೀವಿ’, ಜಿ.ವೆಂಕಟಸುಬ್ಬಯ್ಯನವರು ’ನಡೆದಾಡುವ ವಿಶ್ವಕೋಶ’ವಾಗಿದ್ದರು, ಜರಗನಹಳ್ಳಿ ಶಿವಶಂಕರರು ಕನ್ನಡದ ಶ್ರೇಷ್ಠ ಹನಿಗವನದ ಕವಿಯಾಗಿದ್ದರು, ಇವರೆಲ್ಲರ ಕೊರೋನಾ ಸಂದರ್ಭದ ಅಗಲಿಕೆ ತುಂಬ ವೇದನೆ ನೀಡುತ್ತುದೆ ಎಂದರು.
ಇದೇ ಸಂದರ್ಭದಲ್ಲಿ ನಮ್ಮನ್ನು ಅಗಲಿದ ಸಾಹಿತ್ಯ ಲೋಕದ ದಿಗ್ಗಜರಾದ ಪ್ರೊ.ಜಿ.ವೆಂಕಟಸುಬ್ಬಯ್ಯ, ಜರಗನಹಳ್ಳಿ ಶಿವಶಂಕರ, ಪ್ರೊ.ವಸಂತ ಕುಷ್ಟಗಿ, ಅದ್ಭುತ ನಟ ಸಂಚಾರಿ ವಿಜಯ, ಯುವಕವಿ ಶಿವಕುಮಾರ ಅಮ್ಮಾಪುರ ಅವರಿಗೆ ನುಡಿನಮನವನ್ನು ಸಭೆ ಸಲ್ಲಿಸಿ, ಅವರು ನೀಡಿದ ಕೊಡುಗೆಗಳನ್ನು ನೆನೆದು ಭಾವುಕವಾಯಿತು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹಿರಿಯ ನ್ಯಾಯವಾದಿ ನಿಂಗಣ್ಣ ಚಿಂಚೋಡಿ ಅವರು ತಾಲೂಕಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬೀರಣ್ಣ ಆಲ್ದಾಳ, ಕೇದಾರನಾಥ ಶಾಸ್ತ್ರಿ, ಹಿರಿಯ ನ್ಯಾಯವಾದಿ ದೇವೀಂದ್ರಪ್ಪ ಬೇವಿನಕಟ್ಟಿ, ರಾಥೋಡ.ಎಚ್., ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯ ಶರಣಪ್ಪ, ನ್ಯಾಯವಾದಿ ಜಯಲಲಿತಾ ಪಾಟೀಲ ಸಾಹಿತಿ ಪಂಡಿತ ನಿಂಬೂರೆ ಕನಕಪ್ಪ ವಾಗನಗೇರಿ ಮಾತನಾಡಿದರು.
ಗಾಯಕ ಶ್ರೀಹರಿ ಆದೋನಿ ಅವರು ನಾಡಗೀತೆ ಹಾಡಿದರು. ಕಾರ‍್ಯಕ್ರಮದಲ್ಲಿ ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಸೋಮರೆಡ್ಡಿ ಮಂಗಿಹಾಳ, ಕಮಲಾಕರ.ಎ.ಕೆ., ಶರಣಪಸಪ್ಪ ಯಾಳವಾರ, ಮಹಾದೇವಪ್ಪ ಗುತ್ತೇದಾರ, ನಬೀಲಾಲ ಮಕಾನದಾರ, ಆರ್.ಕೆ.ಕೋಡಿಹಾಳ, ಪ್ರಕಾಶ ಅಲಬನೂರ, ರಾಘವೇಂದ್ರ ಭಕ್ರಿ, ದತ್ತಾತ್ರೇಯ ಏವೂರ ಭಾಗವಹಿಸಿದ್ದರು.
ಕಾರ‍್ಯಕ್ರಮದಲ್ಲಿ ಕಸಾಪ ಕೋಶಾಧ್ಯಕ್ಷ ಮುದ್ದಣ್ಣ ಅಪ್ಪಾಗೋಳ ಸ್ವಾಗತಿಸಿದರು, ಕಸಾಪ ಗೌರವ ಕಾರ‍್ಯದರ್ಶಿ ದೇವು ಹೆಬ್ಬಾಳ ನಿರೂಪಿಸಿದರು, ಎಪಿಎಫ್ ಸಂಚಾಲಕ ಅನ್ವರ ಜಮಾದಾರ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…