ಶಹಾಬಾದ: ಅಂತರಾಷ್ಟ್ರೀಯ ಯೋಗ ದಿನಾಚಾರಣೆ ಹಿನ್ನೆಲೆಯಲ್ಲಿ ಜೂನ್ ೨೧ರಂದು ಆಚರಿಸಲಾಗುತ್ತದೆ. ನಗರದ ಅಲಸ್ಟಾಂ ಕಾರ್ಖಾನೆಯ ನಿವೃತ್ತ ಕಾರ್ಮಿಕ ಮತ್ತು ಸಾಹಿತಿಗಳಾದ ಹೆಚ್.ಬಿ.ತೀರ್ಥೆ ಹಾಗೂ ಮೋಹನ ಘಂಟ್ಲಿ ಅವರು ಯೋಗವನ್ನು ಕಲಿತು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಯೋಗವೇ ಪರಿಹಾರ ಎಂಬುದನ್ನು ಅರಿತು ಜನ ಸಮುದಾಯಕ್ಕೆ ಯೋಗದ ಅರಿವು ಮೂಡಿಸುವತ್ತ ಶಿಬಿರಗಳನ್ನು ಆಯೋಜಿಸುತ್ತ ಬಂದಿದ್ದಾರೆ.
ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿ ಪಧಕ,ಪುರಸ್ಕಾರ ಪಡೆಯದೇ ಇದ್ದರೂ ಯೋಗವನ್ನು ಪ್ರತಿಯೊಬ್ಬರಿಗೂ ಕಲಿಸುವ ಮೂಲಕ ಸದೃಢ ಭಾರತವನ್ನು ನಿರ್ಮಾಣ ಮಾಡಬೇಕೆಂಬ ಹಂಬಲದಿಂದ ಸುಮಾರು ವರ್ಷಗಳಿಂದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಹಾಗೂ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅಂತಹವರಲ್ಲಿ ನಗರದ ಅಲಸ್ಟಾಂ ಕಾರ್ಖಾನೆಯ ನಿವೃತ್ತ ನೌಕರ ಹೆಚ್.ಬಿ.ತೀರ್ಥೆ ಅವರು ಸಾಹಿತಿಗಳಾಗಿ ಅನೇಕ ಜನರಿಗೆ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಯುವ ಜನರಲ್ಲಿ ಸಾಹಿತ್ಯದ ರುಚಿಯನ್ನು ಉಣಬಡಿಸಿದ್ದಾರೆ.
ಅಲ್ಲದೇ ಇವರು ಸುಮಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರವಲ್ಲದೇ ಯೋಗ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪತಂಜಲಿ ಯೋಗ ಸಮಿತಿಯ ಒಡನಾಟದೊಂದಿಗೆ ಇವರು ಶಾಲಾ ಕಾಲೇಜುಗಳಲ್ಲಿ ಹಾಗೂ ಕಾರ್ಖಾನೆಯ ಅಧಿಕಾರಿ ವರ್ಗದವರಿಗೆ ಹಾಗೂ ಕಾಲೋನಿಯ ಮಕ್ಕಳಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ.ಈಗ ಕಲಬುರಗಿಯ ನೃಪತುಂಗ ಕಾಲೋನಿಯಲ್ಲಿ ನೆಲೆಸಿದ್ದು, ಯಾರೇ ಕರೆ ಮಾಡಿ ಯೋಗ ತರಬೇತಿ ನೀಡಬೇಕೆಂದರೆ ತಕ್ಷಣವೇ ಹಾಜರಾಗುತ್ತಾರೆ.
ಮೋಹನ.ಹೆಚ್.ಘಂಟ್ಲಿ ಹಾಗೂ ನೀಲಗಂಗಮ್ಮ.ಎಮ್. ಘಂಟ್ಲಿ ದಂಪತಿಗಳು ಹೆಚ್.ಬಿ.ತೀರ್ಥೆ ಅವರಿಂದ ಸುಮಾರು ಒಂದುವರೆ ವರ್ಷ ನಿರಂತರ ಯೋಗ ತರಬೇತಿ ಪಡೆದು, ನಂತರ ಸುಮಾರು ಹತ್ತು ವರ್ಷಗಳ ಹಿಂದೆ ಪತಾಂಜಲಿ ಯೋಗ ಸಮಿತಿ ಹರಿದ್ವಾರ ವತಿಯಿಂದ ಆಯೋಜಿಸಲಾದ ಶಿಬಿರಲ್ಲಿ ರಾಮದೇವ ಬಾಬಾ ಮಾರ್ಗದರ್ಶನದಲ್ಲಿ ಯೋಗ ತರಬೇತಿ ಪಡೆದರು.ಅಂದಿನಿಂದ ಹೆಚ್.ಬಿ.ತೀರ್ಥೆ ಅವರ ಒಡನಾಟದಲ್ಲಿ ಇವರು ನಗರದ ಅಲಸ್ಟಾಂ ಕಾರ್ಖಾನೆಯ ಶಹಾಬಾದ ಲಾಯನ್ಸ ಕ್ಲಬ್ ವತಿಯಿಂದ ಶಿಬಿರ ಏರ್ಪಡಿಸಿ ಯೋಗ ತರಬೇತಿ ನೀಡಿದರು.
ಹೀಗೆ ನಗರದ ಬಸವ ಸಮಿತಿ ಶಾಲೆ ಮಕ್ಕಳಿಗಾಗಿ, ರಾವೂರಿನ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ, ಖಾಸಗಿ ಹಾಗೂ ಸರಕಾರಿ ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗಾಗಿ ತರಬೇತಿ ನೀಡಲಾಗಿದೆ. ಅಲ್ಲದೇ ತಾಲೂಕಿನ ಬಹುತೇಖ ಗ್ರಾಮಗಳಲ್ಲಿ ತೆರಳಿ ಯೋಗ ಶಿಬಿರವನ್ನು ಏರ್ಪಡಿಸಿ ಸೈ ಎನ್ನಿಸಿಕೊಂಡಿದ್ದಾರೆ. ಅಲ್ಲದೇ ಪತಂಜಲಿ ಯೋಗ ಸಮಿತಿ ರಚಿಸಿಕೊಂಡು ದೀಪಾ ಮೆಂಗಜಿ, ನಿರ್ಮಲಾ ರಾಮಪುರಕರ್, ಅನುಪಮಾ ಜಗತಾಪ್, ಸುಕೇಶನಿ ಫಂಡ್ ಅವರೊಂದಿಗೆ ನಗರದ ಮಹಿಳೆಯರಿಗೆ ಹಾಗೂ ಶಾಲೆಯ ಹೆಣ್ಣು ಮಕ್ಕಳಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಶಹಾಬಾದ ತಾಲೂಕಿನ ಸಾರ್ವಜನಿಕರಿಗಾಗಿ ಯೋಗ ಕಲಿಸಿ ನಿರೋಗಿಯಾಗಿ ಮಾಡಲು ಶ್ರಮ ವಹಿಸುತ್ತಿದ್ದಾರೆ.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…