ಹೈದರಾಬಾದ್ ಕರ್ನಾಟಕ

ಹೆಳವರ ಮದುವೆಯಲ್ಲಿ “ಪರಿಸರ ಪ್ರೇಮ, ಕರೋನಾ ಜಾಗೃತಿ”

ಯಾದಗಿರ: ಸುರಪುರ ತಾಲೂಕಿನ ಯಾಳಗಿ ಗ್ರಾಮದ ಹೆಳವರ ಕುಟುಂಬದ ಸ್ವಗೃಹದಲ್ಲಿ ಸರಕಾರದ ಮಾರ್ಗಸೂಚಿಯಂತೆ ಕುಟುಂಬ ಸದಸ್ಯರ ‌ಸಮ್ಮುಖದಲ್ಲಿ ಸೋಮವಾರ ಸರಳವಾಗಿ ಆಂಜನೇಯ ಹೆಳವರ ಮತ್ತು ಲಾವಣ್ಯ (ಲಕ್ಷ್ಮೀ) ಅವರ ವಿವಾಹ ಮಹೋತ್ಸವ ಕಾರ್ಯಕ್ರಮ ವಿಭಿನ್ನ ಮತ್ತು ವಿಶಿಷ್ಟವಾಗಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಮತ್ತು ಹೆಳವ ಸಮಾಜದ ರಾಜ್ಯ ನಿರ್ದೇಶಕರಾದ ಬಸವರಾಜ ಹೆಳವರ ಯಾಳಗಿ ಅವರು ಮಹಾಮಾರಿ ಕರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ನವ ವಧು-ವರರಿಗೆ ಮಾಸ್ಕ್ ನೀಡುವ ಮೂಲಕ ಶುಭಾಶಯ ತಿಳಿಸಿದ್ದು ವಿಶೇಷವಾಗಿತ್ತು.

ಕೋವಿಡ್ ವಿರುದ್ಧ ನಮ್ಮ ಬಳಿ ಇರುವ ಪ್ರಬಲ ಅಸ್ತ್ರ ‘ಲಸಿಕೆ’. ಲಸಿಕೆಯೇ ಸದ್ಯದ ಸಂಜೀವಿನಿ, ಗ್ರಾಮದ ಪ್ರತಿಯೊಬ್ಬರೂ ತಪ್ಪದೇ ಕರೋನಾ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆಯ ಬಗ್ಗೆ ಯಾವುದೇ ತಪ್ಪು ಕಲ್ಪನೆಗಳು ಬೇಡ. ಕರೋನಾ ಸೋಂಕು ತಡೆಗಟ್ಟಲು ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಏನಾದರೊಂದು ಜಾಗೃತಿಯ ಕೆಲಸ‌‌ ಆಗಬೇಕೆಂದು ನವ ದಂಪತಿಗಳು ಸಸಿಗಳನ್ನು ನೇಡುವುದರ ಮೂಲಕ ಪರಿಸರ ಜಾಗೃತಿ ಮೂಡಿಸಿ ಪರಿಸರ ಸಂರಕ್ಷಣೆಯ ಮಹತ್ವ ಸಾರಿದ್ದಾರೆ. ಗಿಡಮರಗಳ ಕೊರತೆಯಿಂದಾಗಿ ಪರಿಸರದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದೆ, ತಾಪಮಾನ ಅತಿಯಾಗುತ್ತಿದೆ ಹಾಗೂ ಮಳೆ ಬಾರದಂತಾಗಿದೆ. ನಿಸರ್ಗವನ್ನು ಆಳಲು ಸಾದ್ಯವಿಲ್ಲ, ಅನುಸರಿಸಬೇಕು. ಗ್ರಾಮದ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಅರೋಗ್ಯವಂತ ಜೀವನ ನಡೆಸಲು ನೆರವಾಗುತ್ತದೆ. ಮದುವೆಯನ್ನು ಸಮಾಜಮುಖಿಯಾಗಿ ಮಾಡುವ ಮೂಲಕ ಪರಿಸರ ಕಾಳಜಿಯ ಸಂದೇಶ ನೀಡಿರುವ ಅರಣ್ಯ ಇಲಾಖೆಯ ನೌಕರ ಮಾನಪ್ಪ ಎಮ್. ಹೆಳವರ ಅವರ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಯಿತು. ಈ ಕಲ್ಯಾಣ ಮಹೋತ್ಸವದಲ್ಲಿ ಸಸಿ ನೆಟ್ಟು ಪರಿಸರ ಪ್ರೇಮದ ಸಂದೇಶ ಸಾರಿದ್ದು ಬಹಳ ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಬಸವರಾಜ ಎಸ್. ಹೆಳವರ, ದ್ರಾಕ್ಷಾಯಿಣಿ, ಯಲ್ಲಪ್ಪ ಎಮ್ ಹೆಳವರ, ಸುಮಿತ್ರಾ, ಮಾನಪ್ಪ, ಲಕ್ಷ್ಮೀಬಾಯಿ, ಭೀಮಣ್ಣ, ರಾಮಮ್ಮ, ಭೀಮರಾಯ ಎಚ್, ದ್ಯಾಮವ್ವ, ಯಲ್ಲಪ್ಪ ಬಿ. ಹೆಳವರ, ಶಂಕ್ರಮ್ಮ, ಮುರಿಗೆಪ್ಪ, ಚಂದ್ರಕಾಂತ ಹೆಳವಿ, ಸುಶೀಲಾಬಾಯಿ, ಪ್ರಭು ಎಸ್. ಯಾಳಗಿ, ಸವಿತಾ ಪಿ, ಶ್ರೀಕಾಂತ ಹೆಳವಿ, ರೇಖಾ, ಜಗದೇವಿ, ಮಲ್ಲಿಕಾರ್ಜುನ ಎಸ್. ಗೋವಾ, ರೇಣುಕಾ, ಅನೀಲಕುಮಾರ ಹೆಳವರ. ಶ್ರೀಕಾಂತ ಎಮ್, ಚೇತನ್, ಕಿರಣ, ಅಕ್ಷಯಕುಮಾರ, ಅವಿನಾಶ್, ವಿದ್ಯಾಶ್ರೀ ಬಿ, ಸುಪ್ರೀತ, ಸುದಿಕ್ಷಾ,ಸ್ವರ, ಸಮೀಕ್ಷಾ, ಶರಣ, ನವೀನ, ಆರಾಧ್ಯ, ಪ್ರೀತಿ, ಯಶ್ ಮತ್ತು ಇತರರು ಪಾಲ್ಗೊಂಡಿದ್ದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

56 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

58 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

1 hour ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

1 hour ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

1 hour ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

1 hour ago