ಬೆಂಗಳೂರು: ಭಾರತದ ಪ್ರಮುಖ ರೋಗನಿರ್ಣಯ ಮತ್ತು ಆರೋಗ್ಯ ಪರಿಹಾರ ಪೂರೈಕೆದಾರರಾಗಿರುವ ಲೈಫ್‌ಸೆಲ್ ಇತ್ತೀಚೆಗೆ ತನ್ನ ರೋಗನಿರ್ಣಯದ ಹೆಜ್ಜೆಗುರುತುಗಳನ್ನು ಕೋಲ್ಕತಾ ಮತ್ತು ಪುಣೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ವಿಸ್ತರಿಸಿದೆ.
ಐಸಿಎಂಆರ್ ಮತ್ತು ಎನ್‌ಎಬಿಎಲ್ ಮಾನ್ಯತೆಯನ್ನು ಪಡೆದಿರುವ ಈ ಪರೀಕ್ಷಾ ಕೇಂದ್ರಗಳು ಕೋವಿಡ್ ಮತ್ತು ಇತರ ಕ್ಷಿಪ್ರ ಜೀವರಾಸಾಯನಿಕ ಮತ್ತು ಸುಧಾರಿತ ಆನುವಂಶಿಕ ಪರೀಕ್ಷೆಗಳನ್ನು ನಡೆಸಲು ಸಜ್ಜುಗೊಂಡಿವೆ. ಇಲ್ಲಿಯವರೆಗೆ 7,00,000 ಕೋವಿಡ್ ಮಾದರಿಗಳನ್ನು ನಿರ್ವಹಿಸುವ ವ್ಯಾಪಕ ಅನುಭವದೊಂದಿಗೆ, ಕಂಪನಿಯು ತಮಿಳುನಾಡು, ಕರ್ನಾಟಕ, ದೆಹಲಿ ಮತ್ತು ಹರಿಯಾಣದ ರಾಜ್ಯ ಸರ್ಕಾರಗಳಿಗೆ ದಿನಕ್ಕೆ 8,000 ಮಾದರಿಗಳನ್ನು ಸಂಸ್ಕರಿಸಿ ಕೊಡುವ ಮೂಲಕ ಬೆಂಬಲ ನೀಡಿದ್ದು, ಈ ಮೂಲಕ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತಿದೆ.
ಈ ಅಭಿವೃದ್ಧಿ ಕುರಿತು ಪ್ರತಿಕ್ರಿಯಿಸಿದ ಲೈಫ್‌ಸೆಲ್ ಇಂಟರ್‌ನ್ಯಾಷನಲ್‌ನ ಸಿಇಒ ಶ್ರೀ ಇಶಾನ್ ಖನ್ನಾ, ‘ಸಮಗ್ರ ಆರೋಗ್ಯ ರಕ್ಷಣೆಯ ಬ್ರಾಂಡ್ ಆಗಿರುವ ಲೈಫ್‌ಸೆಲ್ ಯಾವಾಗಲೂ ವೈದ್ಯಕೀಯ ವಲಯ ಮತ್ತು ಸರ್ಕಾರಕ್ಕೆ ತನ್ನ ಬೆಂಬಲವನ್ನು ನೀಡುತ್ತ ಬಂದಿದೆ. ಭಾರತದಲ್ಲಿ ಕೋವಿಡ್ ಪರೀಕ್ಷೆಯನ್ನು ನಿರ್ವಹಿಸಲು ನಾವು ಮೊದಲಿಗರಾಗಿ ಪ್ರವೇಶಿಸಿದ್ದರೂ, ಎರಡನೆಯ ಅಲೆಯಲ್ಲಿ ತ್ವರಿತ ಪ್ರತಿಕ್ರಿಯೆಯ ತೀವ್ರ ಅಗತ್ಯ ಏರ್ಪಟ್ಟಿದೆ.
ಆದ್ದರಿಂದ, ಕೋವಿಡ್-19 ವಿರುದ್ಧದ ಹೋರಾಟದ ಕಡೆಗೆ ನಮ್ಮ ಬೆಂಬಲ ಮತ್ತು ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಲು ನಮ್ಮ ಪರೀಕ್ಷಾ ಸೇವೆಗಳನ್ನು ವಿಸ್ತರಿಸುತ್ತಿದ್ದೇವೆ. ನಾವು ಇಲ್ಲಿಯವರೆಗೆ 7.3 ಲಕ್ಷ ಮಾದರಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದೇವೆ ಮತ್ತು ಬೆಳೆಯುತ್ತಿರುವ ಅಗತ್ಯವನ್ನು ಪೂರೈಸಲು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಿದ್ದೇವೆ” ಎಂದರು.
ಚೆನ್ನೈ, ಮಾನೇಸರ್, ಬೆಂಗಳೂರು, ಕೋಲ್ಕತಾ, ಮತ್ತು ಪುಣೆ ಸೇರಿದಂತೆ ಲೈಫ್‌ಸೆಲ್ ಐದು ಪರೀಕ್ಷಾ ಕೇಂದ್ರಗಳು ಭಾರತದಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳು ಸುಸಜ್ಜಿತ ವೃತ್ತಿಪರರ ತಂಡದೊಂದಿಗೆ ನಿರಂತರ ಪರೀಕ್ಷೆ ಮತ್ತು ಸಂಗ್ರಹದ ಸಾಮರ್ಥ್ಯವನ್ನು ಹೊಂದಿದ್ದು, ಲೈಫ್‌ಸೆಲ್ ತನ್ನ ಗ್ರಾಹಕರಿಗೆ ಅಂತಹ ಕಷ್ಟದ ಸಮಯದಲ್ಲೂ ತ್ವರಿತ ಸೇವೆ ಮತ್ತು ಪ್ರಾಯೋಗಿಕವಾಗಿ ಅನುಮೋದಿತ ವರದಿಗಳೊಂದಿಗೆ ತಡೆರಹಿತ ಸೇವೆಯನ್ನು ನೀಡಲು ಸಜ್ಜಾಗಿದೆ.
ಹೆಚ್ಚುವರಿಯಾಗಿ, ಕೋವಿಡ್-19 ರೋಗಿಗಳ ಚೇತರಿಕೆಯ ಸಮಯದಲ್ಲಿ ಉತ್ತಮ ಆರೈಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಲೈಫ್‌ಸೆಲ್ ಕಪ್ಪು ಶಿಲೀಂಧ್ರ, ಕೋವಿಡ್ ಅಲೈಡ್ ಮತ್ತು ಸ್ಪೈಕ್ ಪ್ರೋಟೀನ್ ಪ್ರತಿಕಾಯ ಪರೀಕ್ಷೆಯ ಪ್ರಮುಖ ರೋಗನಿರ್ಣಯ ಪೂರೈಕೆದಾರರಾಗಿಯೂ ಹೊರಹೊಮ್ಮಿದೆ.
ವಾಸ್ತವವಾಗಿ, ಪ್ರಸವಪೂರ್ವ ಆರೋಗ್ಯ ಮತ್ತು ನವಜಾತ ಆರೈಕೆ ವಿಭಾಗಗಳಲ್ಲಿ ನಿರಂತರ ರೋಗನಿರ್ಣಯ ಸೇವೆಗಳನ್ನು ನೀಡಲು ಲೈಫ್‌ಸೆಲ್ ಸಹಕಾರಿಯಾಗಿದೆ. ಕೋವಿಡ್-19 ಸಮಯದಲ್ಲಿ ಜೀವರಾಸಾಯನಿಕ ಪರೀಕ್ಷೆಗಳು ಮತ್ತು ಪ್ರಸವಪೂರ್ವ ಹಾಗೂ ಡಿಎನ್‌ಎ ಆಧಾರಿತ ಸುಧಾರಿತ ಸ್ಕ್ರೀನಿಂಗ್ ಸೇರಿದಂತೆ ಹಲವು ಸ್ಯಾಂಪಲ್‌ಗಳನ್ನು ಮನೆಯಿಂದಲೇ ಪಡೆಯುವ ವ್ಯವಸ್ಥೆಯನ್ನು ಪರಿಚಯಿಸಿದೆ.
ಇತ್ತೀಚಿನ ಈ ವಿಸ್ತರಣೆಯೊಂದಿಗೆ, ಲೈಫ್‌ಸೆಲ್ ತನ್ನ ಗ್ರಾಹಕರಿಗೆ ತಮ್ಮ ರೋಗನಿರ್ಣಯದ ಪ್ರಯಾಣವನ್ನು ತ್ವರಿತಗೊಳಿಸಲು ಸಹಾಯಕವಾಗುವಂತೆ ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ಆರೋಗ್ಯ ಸೇವೆಯನ್ನು ಒದಗಿಸುವುದನ್ನು ಮುಂದುವರಿಸುತ್ತದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…