ಬಿಸಿ ಬಿಸಿ ಸುದ್ದಿ

ಶಿಕ್ಷಣದಿಂದ ಮಾತ್ರ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಬಹುದು: ನ್ಯಾಯಧೀಶೆ ತಯ್ಯಬಾ ಸುಲ್ತಾನ

ಸುರಪುರ: ಚಿಕ್ಕಮಕ್ಕಳನ್ನು ವಾಣಿಜ್ಯ ಮತ್ತು ಕೋಲಿಗೆ ಕಳಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಇತಂಹ ಅನಿಷ್ಟ ಪದ್ದತಿಗಳನ್ನು ಹೊಗಲಾಡಿಸುವ ಶಕ್ತಿ ಶಿಕ್ಷಣಕ್ಕಿದೆ ಪ್ರತಿಯೊಬ್ಬ ವಿದ್ಯಾವಂತರಾದಾಗ ಮಾತ್ರ ಬಾಲ ಕಾರ್ಮಿಕ ಪದ್ದತಿಯನ್ನು ಹೊಗಲಾಡಿಸ ಬಹುದು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶೆ ತಯ್ಯಬಾ ಸುಲ್ತಾನ ಹೇಳಿದರು.

ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೆಜು ಆವರಣದಲ್ಲಿ ಶನಿವಾರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಕಛೇರಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರಕಾರವು ಶಿಕ್ಷಣವನ್ನು ವದಗಿಸಲು ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅವುಗಳನ್ನು ಸದ್ಬಳಕೆಮಾಡಿಕೊಂಡು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆ ಸ್ಥಾನಗಳಿಸಕೊಳ್ಳಬೇಕು ಎಂದು ತಿಳಿಸಿದರು.

ನಂತರ ಪ್ರಧಾನ ಸಿವಿಲ್ ನ್ಯಾಯಧೀಶ ಚಿದಾನಂದ ಬಡಿಗೇರ ಮಾತನಾಡಿ ಬಾಲಕಾರ್ಮಿಕ ಪದ್ದತಿಯನ್ನು ಹೊಗಲಾಡಿಸುವುದು ಪೋಷಕರ ಕೈಯಲ್ಲಿ ಮತ್ತು ಮಕ್ಕಳ ಕೈಯಲ್ಲಿದೆ ಮಕ್ಕಳನ್ನು ಕೆಲಸಕ್ಕೆ ಕಳಿಸುವ ಪದ್ದತಿಯನ್ನು ಪೋಷಕರು ಬಿಡಬೇಕು ಮತ್ತು ಮಕ್ಕಳೂ ಕೂಡಾ ವಿದ್ಯಯನ್ನು ಕಲಿಯುವ ಹಂಬಲವನ್ನು ಬೆಳಸಿಕೊಳ್ಳಬೇಕು ಮತ್ತು ಬರಿ ಸರಕಾರದಿಂದ ಸೌಲಭ್ಯಕ್ಕಾಗಿ ಶಾಲೆಯಲ್ಲಿ ಕಲೆಯೋಣ ಎನ್ನುವ ಮನೋಭಾವನೆಯನ್ನು ಬಿಟ್ಟು ಕಠಿಣ ಪರಿಶ್ರಮದಿಂದ ಓದಿ ವಿದ್ಯಾವಂತರಾಗಿ ದೇಶದ ಸೇವೆಗೆ ಹಾಗೂ ಉತ್ತಮ ಸಮಾಜವನ್ನು ಕಟ್ಟಲು ಕಂಕಣ ಬದ್ಧರಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ ಮಾತನಾಡಿ ಬಾಲ ಕಾರ್ಮಿಕ ಪದ್ದತಿಯನ್ನು ಹೊಗಲಾಡಿಸಲು ಸಂಘಟಿತ ಪ್ರಯತ್ನ ವಾಗಬೇಕಿದೆ ಸರಕಾರ ಒಂದರಿಂದ ಮಾತ್ರಾ ಸಾಧ್ಯವಿಲ್ಲ ಇದಕ್ಕೆ ಪೋಷಕರು ಕೂಡ ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳಿಸುವುದನ್ನು ಬಿಟ್ಟು ಶಾಲೆಗೆ ಸೇರಿಸಬೇಕು ಹಾಗೂ ಅಪ್ರಾಪ್ತರನ್ನು ದುಡಿಯಲು ಇಟ್ಟುಕೊಳ್ಳುವುದು ಅಪರಾದವಾಗಿದೆ ಇದರಿಂದ ಮಕ್ಕಳ ಹಕ್ಕುಗಳಿಗೆ ಚ್ಯುತಿಬರಲಿದೆ ಇದರಿಂದ ಮಕ್ಕಳ ಭವಿಷ್ಯದೊಂದಿಗೆ ದೇಶದ ಪ್ರಗತಿಗೆ ಮಾರಕವಾಗಿದೆ ಎಂದು ತಿಳಿಸಿದರು.

ನಂತರ ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದು ಮತ್ತು ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟಲಾಯಿತು ಮತ್ತು ಸಂಪನ್ಮೂಲ ವ್ಯಕ್ತಿ ಜಯಲಲಿತಾ ವಿ ಪಾಟೀಲರಿಂದ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಮರನಾಥ ಬಿ.ಎನ್, ತಹಶಿಲ್ದಾರ ಸುರೇಶ ಅಂಕಲಗಿ ವಕೀಲರ ಸಂಗದ ಅಧ್ಯಕ್ಚ ಮಹ್ಮದ್ ಹುಸೇನ, ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ಹಣಮಂತ್ರಾಯ ಕರಡಿ, ತಾಲೂಕು ವೈದ್ಯಾಧಿಕಾರಿ ರಾಜಾ ವೆಂಕಪ್ಪ ನಾಯಕ, ತಾಲೂಕು ಮಟ್ಟದ ಅಧಿಕಾರಿಗಳಾದ ಸತ್ಯನಾರಾಯಣ ದರಬಾರಿ, ಲಾಲಸಾಬ, ಸುವರ್ಣ, ಯಲ್ಲಪ್ಪ ಕಾಡ್ಲೂರು, ಹಿರಿಯ ಬಕೀಲ ನಂದನಗೌಡ ಎಸ್ ಪಾಟೀಲ ನಿರೋಪಿಸಿ ವಂದಿಸಿದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

5 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

16 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

16 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

18 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

18 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

18 hours ago