ಕಲಬುರಗಿ : ಶಾಲೆಯಲ್ಲಿ ಎಲ್ಲಾ ವಿ?ಯವಾರು ಶಿಕ್ಷಕರಂತೆ ರಂಗ ಶಿಕ್ಷಣದ ಶಿಕ್ಷಕರ ಅವಶ್ಯಕತೆ ಇದೆ. ರಂಗ ಶಿಕ್ಷಣದಿಂದ ಮಕ್ಕಳು ಅಭಿನಯ, ಹಾಡು, ಕಲಿಯವದರೊಂದಿಗೆ ಮಾನಸಿಕ ಹಾಗೂ ದೈಹಿಕ ಸಾsssಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯವೆಂದು ಶಿಕ್ಷಕ ಹಾಗೂ ರಂಗ ನಿರ್ದೇಶಕ, ನೀನಾಸಂ ಪದವೀಧರ ವಿಶ್ವನಾಥ ಭಕರೆಯವರು ಅಭಿಮತ ವ್ಯಕ್ತಪಡಿಸಿದ್ದಾರೆ.
ಸದ್ಯದಲ್ಲಿರುವ ನಾಟಕ, ಕಥೆ, ಹಾಡುಗಳು ಮಕ್ಕಳಿಗೆ ಬೋಧಿಸುವಾಗ ಸ್ವತ ಶಿಕ್ಷಕರು ಹಾವ ಭಾವದಿಂದ ಪ್ರದರ್ಶಿಸಿಸುವಾಗ ಮಕ್ಕಳು ತದೇಕ ಚಿತ್ತದಿಂದ ಆಲಿಸಿ ತಾವೂ ಕೂಡ ಅನುಕರಿಸಿ ಕಲಿಯಲು ಹವಣಿಸುತ್ತಾರೆ. ಇದರಿಂದ ಕಲಿಕೆಯಲ್ಲಿ ಕುತೂಹಲ ಉಂಟಾಗಿ ಸಾಹಿತ್ಯ ಮತ್ತು ಕಲೆಯನ್ನು ಅಳವಡಿಸಿಕೊಳ್ಳುವರು. ಇದಕ್ಕೆ ಶಿಕ್ಷಕರಾಗಿ ತಾವೇ ಸಾಕ್ಷಿಯೆಂದು ವಿಶ್ವನಾಥ ಭಕರೆ ಹೇಳಿದ್ದಾರೆ.
’ನಿನಾಸಂ’ ರಂಗ ಶಿಕ್ಷಣ ಪದವಿ ಪಡೆದುಕೊಂಡ ಮೇಲೆ ಪಠ್ಯದಲ್ಲಿ ಬರುವ ನಾಟಕಗಳನ್ನು ಆಯಾ ತರಗತಿವಾರು ಮಕ್ಕಳಿಗೆ ಕಲಿಸಿದ ಅನುಭವ ತಿಳಿಸಿದ ಭಕರೆಯವರು ಪ್ರತಿ ಶಾಲೆಯಲ್ಲಿ ರಂಗ ಶಿಕ್ಷಕರ ಅವಶ್ಯಕತೆಯನ್ನು ಸರ್ಕಾರ ನೀಗಿಸಬೇಕೆಂದು ಒತ್ತಾಯಿಸಿದ್ದಾರೆ.
ಈಗಾಗಲೇ ೩೭೧ನೇ (ಜೆ) ಕಲಂ ಅಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ೨೦೧೮ ರ ಎಸ್.ಎ.ಟಿ.ಎಸ್. ಆಧಾರದ ಮೇಲೆ ಸರಕಾರಿ ಪ್ರಾರ್ಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರು,ಚಿತ್ರಕಲಾ ಶಿಕ್ಷಕರು ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ತಯ್ಯಾರಿಸಿ ಉಪನಿರ್ದೇಶಕರ ರುಜುವಿನೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ.
ಆದರೆ ರಂಗ ಶಿಕ್ಷಣದ ಶಿಕ್ಷಕರು ಕುರಿತು ಪ್ರಸ್ತಾವನೆ ಮಾಡಿರುವುದಿಲ್ಲ. ಅದಕ್ಕಾಗಿ ಈ ಕರಡು ಅಧಿಸೂಚನೆಯಲ್ಲಿ ಪುನರ್ ಪರಿಶೀಲನೆ ಮಾಡಿ ಅದರಲ್ಲಿ ರಂಗಶಿಕ್ಷಕರ ನೇಮಕಾತಿಯನ್ನು ಸೂಚಿಸಬೇಕು. ಖಾಲಿ ಇರುವ ಅನೇಕ ಶಾಲೆಗಳಲ್ಲಿ ರಂಗಶಿಕ್ಷಕಣ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರೆ ನಿರುದ್ಯೋಗಿ ರಂಗ ಪದವೀಧರರಿಗೆ ಉದ್ಯೋಗ ದೊರಕಿಸಿ ಸರ್ಕಾರ ಅವರ ಬಾಳಿಗೆ ಬೆಳಕು ನೀಡಬೇಕೆಂದು ವಿಶ್ವನಾಥ ಭಕರೆಯವರು ಕೋರಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…