ಶಹಾಬಾದ:ನಗರದ ಇಎಸ್‌ಐ ಆಸ್ಪತ್ರೆಗೆ ಮಂಗಳವಾರ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ.ಆರ್.ನಿರಾಣಿ ಅವರು ಬೇಟಿ ನೀಡಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ನವೀಕರಣ ಕಾರ್ಯವನ್ನು ವೀಕ್ಷಿಸಿದರು.
ಆಸ್ಪತ್ರೆಯ ನೆಲಮಹಡಿ, ಮೇಲ್ ಮಹಡಿ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಸುತ್ತಾಡಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಇಲಾಖೆಯ ಕಾರ್ಯಾನಿರ್ವಾಹಕ ಅಭಿಯಂತರ ಕೃಷ್ಣ ಅಗ್ನಿಹೋತ್ರಿ ಅವರಲ್ಲಿ ಮಾಹಿತಿ ಕೇಳಿದರು.
ಈಗಾಗಲೇ ನವೀಕರಣ ಕಾರ್ಯ ೭೦% ಕಾರ್ಯ ಕೈಗೊಳ್ಳಲಾಗಿದೆ. ನೆಲ ಮಹಡಿ ಹಾಗೂ ಮೇಲಮಹಡಿಯಲ್ಲಿ ಕಾಂಕ್ರೇಟ್ ಬೆಡ್ ಹಾಕಿ ಗ್ರೈನೇಟ್ ನೆಲ ಹಾಸಿಗೆ ಸಂಪೂರ್ಣ ಹಾಕಲಾಗಿದೆ.ಕೋಣೆಗಳಲ್ಲಿನ ನೆಲಹಾಸಿಗೆಯೂ ಹಾಕಲಾಗಿದೆ. ವಿದ್ಯುತ್ತೀಕರಣ ಕಾರ್ಯವೂ ಬಹುತೇಖ ಮುಗಿಯಲು ಬಂದಿದೆ. ಪೆಂಟಿಂಗ್, ಕಂಪೌಂಡ ಗೋಡೆ, ಕಿಟಕಿಗಳನ್ನು ಕೂಡಿಸುವುದು, ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಬೇಕಾಗಿದೆ ಎಂದು ಮಾಹಿತಿ ಒದಗಿಸಿದರು.
ನಂತರ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ.ಆರ್.ನಿರಾಣಿ ಅವರು ಇನ್ನೂ ಉಳಿದಿರುವ ೩೦% ಕಾರ್ಯವನ್ನು ಆದಷ್ಟು ತೀವ್ರಗೊಳಿಸಿ ಮುಗಿಸಿದರೇ, ಜುಲೈ ೭ ರಂದು ಕಟ್ಟಡವನ್ನು ವೀಕ್ಷಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ಕರೆತರುತ್ತೆನೆ. ಜಿಲ್ಲೆಗೆ ೧೦ ಅಂಬುಲೆನ್ಸ್ ಹಾಗೂ ೨೦ ಅತ್ಯಾಧುನಿಕ ವೆಂಟಿಲೇಟರ್ ಬರುತ್ತಿದ್ದು, ಅದರಲ್ಲಿ ವೆಂಟಿಲೇಟರ್‌ಗಳನ್ನು ಹಾಗೂ ಒಂದು ಅಂಬುಲೆನ್ಸ್ ತಾಲೂಕಾಗೆ ನೀಡಲಾಗುವುದು.ಕುಡಿಯುವ ನೀರು, ಡಾಕ್ಟರ್ ಹಾಗೂ ಸಿಬ್ಬಂದಿಗಳ ಕೋಣೆಗಳನ್ನು ದುರಸ್ತಿಗೊಳಿಸಿ ನವೀಕರಿಸಿ, ಅದಕ್ಕೆ ಬೇಕಾದ ಅನುದಾನವನ್ನು ಒದಗಿಸಲಾಗುತ್ತದೆ.ಆಸ್ಪತ್ರೆಯ ಮುಂಭಾಗದ ವಿನ್ಯಾಸ ಮಾತ್ರ ನೀಲನಕ್ಷೆಯಲ್ಲಿರುವಂತೆ ಆಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಅಲ್ಲದೇ ಸದ್ಯದಲ್ಲೇ ಉದ್ಘಾಟನೆಯ ದಿನಾಂಕವನ್ನು ತಿಳಿಸಲಾಗುವುದೆಂದು ಹೇಳಿದರು.
ಎನ್‌ಇಕೆಆರಟಿಸಿ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೇಲ್ಕೂರ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿ?ತ್ ಸದಸ್ಯ ಬಿ.ಜಿ.ಪಾಟೀಲ, ಚಿಂಚೋಳಿ ಶಾಸಕ ಅವಿನಾಶ ಜಾಧವ, ಕೃ? ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಎಸಿ ರಮೇಶ ಕೋಲಾರ, ತಹಸೀಲ್ದಾರ ಸುರೇಶ ವರ್ಮಾ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಅಧಿಸೂಚಿತ ಕ್ಷೇತ್ರ ಸಮಿತಿಯ ಅಧಿಕಾರಿ ಪೀರಶೆಟ್ಟಿ, ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ನಗರಸಭೆಯ ಸದಸ್ಯರಾದ ರವಿ ರಾಠೋಡ, ರಜನಿಕಾಂತ ಕಂಬಾನೂರ, ಸೂರ್ಯಕಾಂತ ಕೋಬಾಳ,ನಿಂಗಣ್ಣ ಹುಳಗೋಳಕರ್, ನಾಗರಾಜ ಮೇಲಗಿರಿ, ,ಭೀಮಯ್ಯ ಗುತ್ತೆದಾರ, ವಿರೇಶ ಬಂದಳ್ಳಿ, ಮಹಾದೇವ ಗೊಬ್ಬೂರಕರ್,ಕಾಶಣ್ಣ ಚನ್ನೂರ್, ದೇವೆಂದ್ರಪ್ಪ ಯಲಗೋಡಕರ್, ಸಂಜಯ ಸೂಡಿ, ಸಿದ್ರಾಮ ಕುಸಾಳೆ, ಬಸವರಾಜ ಬಿರಾದಾರ, ಕಂದಾಯ ಅಧಿಕಾರಿ ವೀರಭದ್ರಪ್ಪ, ಗ್ರಾಮಲೆಕ್ಕಿಗ ಶಿವಾನಂದ್ ಹೂಗಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…