ಕಲಬುರಗಿ: ಅಪ್ಪ, ಏಳು ಅಪ್ಪ, ಮಾತಾಡು ಅಪ್ಪ ಮಕ್ಕಳ ಈ ಆಕ್ರಂದನ ಮನಕಲಕುತ್ತಿತ್ತು. ಈ ದೃಶ್ಯ ಎಂಥವರ ಕಣ್ಣಾಲಿಗಳನ್ನು ಒದ್ದೆಯಾಗುವಂತೆ ಮಾಡಿತು.
ಹೌದು, ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮ ಇಂತಹ ಘಟನೆಗೆ ಸಾಕ್ಷಿಯಾಯಿತು. ಹುತಾತ್ಮ ಯೋಧ ಮಹಾದೇವ ಪೊಲೀಸ್ ಪಾಟೀಲ್ ಅವರ ಮಕ್ಕಳ ರೋಧನ ಹೇಳತೀರದಾಗಿತ್ತು. ಸಂದೀಪ್ ಪಾಟೀಲ್, ಜ್ಯೋತಿ ಹಾಗೂ ಕುಲದೀಪ್ ಪಾಟೀಲ್ ಅವರ ಪಾಲಿಗೆ ನಮ್ಮ ಅಪ್ಪ ಇನ್ನೂ ಬದುಕಿದ್ದಾರೆ ಎಂಬಂತಿದ್ದರು.
ಅಪ್ಪ, ಏಳು ಅಪ್ಪ, ಮಾತಾಡು ಅಪ್ಪ ಅಂತ ನಿರಂತರವಾಗಿ ತಮ್ಮ ನೋವನ್ನು ಹೊರಚೆಲ್ಲುತ್ತಿದ್ದರು. ಹುತಾತ್ಮ ಯೋಧನ ಧರ್ಮಪತ್ನಿ ಮಲ್ಲಮ್ಮ ಅವರ ಗೋಳು ಕೂಡ ಇದೇ ರೀತಿಯದ್ದು.
ಯಾಕಂದ್ರೆ, ಮಗಳು ಜ್ಯೋತಿಯ ಸೀಮಂತ ಕಾರ್ಯಕ್ರಮ ಜುಲೈ ೧ನೇ ತಾರೀಖು ಸೋಮವಾರ ಸ್ವಗ್ರಾಮದ ಮನೆಯಲ್ಲಿ ನಡೆಸಲು ಸಿದ್ಧತೆ ನಡೆದಿತ್ತು. ಮಗಳ ಸಂಭ್ರಮದಲ್ಲಿ ಜೊತೆಗೂಡಲು, ರಜೆ ಪಡೆಯುವುದಕ್ಕಾಗಿ ಸಿಆರ್‌ಪಿಎಫ್ ಕಚೇರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ನಕ್ಸಲ್ ದಾಳಿಯಲ್ಲಿ ಮಹಾದೇವ ಪಾಟೀಲ ಪ್ರಾಣತೆತ್ತಿದ್ದಾರೆ. ಆ ವಿಧಿ ಸಂಭ್ರಮ-ಸಡಗರ ಕಿತ್ತುಕೊಂಡು ಸೂತಕದ ಛಾಯೆ ಮೂಡಿಸಿದೆ ಎಂದು ಹುತಾತ್ಮ ಯೋಧನ ಅಣ್ಣ ಬಿಕ್ಕುತ್ತಾ ಕಣ್ಣೀರಾದ್ರು.
199ನೇ ಬ್ಯಾಟಾಲಿಯನ್ ಸಿಆರ್‌ಫಿಎಫ್ ಯೋಧ ಮಹಾದೇವ ಅವರು ಛತ್ತೀಸ್‌ಗಢದಲ್ಲಿ ಸೇವೆ ಸಲ್ಲಿಸುತ್ತಿದ್ರೂ, ಮಕ್ಕಳು – ಮಡದಿಯರೆಲ್ಲಾ ಹೈದ್ರಾಬಾದ್‌ನಲ್ಲಿ ಪೊಲೀಸ್ ವಸತಿ ಗೃಹದಲ್ಲಿ ನೆಲೆಸಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾದೋರು ಈಗ ದು:ಖದ ಕಡಲಲ್ಲಿ ಮುಳಿಗಿದ್ದಾರೆ. ಆದರೆ, ದೇಶಕ್ಕಾಗಿ ಪ್ರಾಣಕೊಟ್ಟಿದ್ದಾರೆ ಹೆಮ್ಮೆ, ಮುಂದಿನ ದಿನಗಳಲ್ಲಿ ಕಟುಂಬದ ದು:ಖ ಮರೆಸೋದಂತೂ ಸತ್ಯ.
ಮಹಾದೇವ ಹುತಾತ್ಮರಾಗಿರಬಹುದು, ಆದರೆ, ಅವರ ದೇಶ ಸೇವೆ ನಾಡಿನ ಯುವಕರೂ ಸೇರಿದಂತೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಮಹಾದೇವ ಅಮರ್ ರಹೇ, ಅಮರ್ ರಹೇ ಎಂದು ಶಾಲಾ ಮಕ್ಕಳು ರಾಷ್ಟ್ರ ಧ್ವಜ ಹಿಡಿದು ಕೂಗುತ್ತಿದ್ದ ಘೋಷಣೆ ಇಡೀ ಪರಿಸರದಲ್ಲಿ ಮಾರ್ಧನಿಸುತ್ತಿದ್ದುದು ಇದಕ್ಕೆ ಸಾಕ್ಷಿ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…