ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ ಸಾಗರ ಬಣ)ಕ್ಕೆ ನೂತನ ಪದಾಧಿಕಾರಿಗಳ ನೇಮಕಕ್ಕೆ ಸಭೆಯನ್ನು ನಡೆಸಲಾಯಿತು.
ನಗರದ ಟೈಲರ್ ಮಂಜಿಲ್‌ನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಭಾಗವಹಿಸಿ ಎಲ್ಲಾ ಪದಾಧಿಕಾರಿಗಳನ್ನು ನೇಮಕ ಅನುಮೋದಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ದಲಿತರಿಗೆ ಯಾವುದೇ ಸಮಸ್ಯೆ ಉಂಟಾದಲ್ಲಿ ಮೊದಲು ಧ್ವನಿ ಎತ್ತುವ ಸಂಘಟನೆ ಎಂದರೆ ಅದು ನಮ್ಮ ಸಮಿತಿಯಾಗಿದೆ.ನಮ್ಮ ನಾಯಕರಾದ ಡಿ.ಜಿ ಸಾಗರಜಿ ಅವರು ನಾಡಿನ ಅನೇಕ ದಲಿತ ಹೋರಾಟಗಾರರಲ್ಲಿ ಮುಂಚುಣಿಯವರಾಗಿದ್ದಾರೆ.ಅವರ ಮಾರ್ಗದರ್ಶನದಲ್ಲಿ ಅನೇಕ ಹೋರಾಟಗಳನ್ನು ಮಾಡುವ ಮೂಲಕ ನಾಡಿನ ದೀನ ದಲಿತ ಶೋಷಿತರ ಮನದಲ್ಲಿ ಸಂಘಟನೆ ಅಚ್ಚಾಗಿದೆ.ಇಂತಹ ಸಂಘಟನೆಗೆ ಇಂದು ತಾವೆಲ್ಲರು ಸೇರುವ ಮೂಲಕ ತಾಲೂಕಿನಲ್ಲಿ ಮತ್ತಷ್ಟು ಶಕ್ತಿ ಹೆಚ್ಚಿಸಿದ್ದೀರಿ.ತಾವೆಲ್ಲರು ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಜನರ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ನಂತರ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.ತಾಲೂಕು ಸಂಘಟನಾ ಸಂಚಾಲಕರನ್ನಾಗಿ ಮರಿಲಿಂಗ ಗುಡಿಮನಿ,ತಾಲೂಕು ಖಜಾಂಚಿಯನ್ನಾಗಿ ಮಾನಪ್ಪ ಶೆಳ್ಳಗಿ ಹಾಗು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ತಿಪ್ಪಣ್ಣ ಶೆಳ್ಳಗಿ ಚನ್ನಪ್ಪ ತಳವಾರ ಹಾಗು ಅಂಬೇಡ್ಕರ ಕೆಂಭಾವಿಯವರನ್ನು ನೇಮಕಗೊಳಿಸಲಾಯಿತು.
ಅಲ್ಲದೆ ಅಲ್ಪಸಂಖ್ಯಾತರ ಘಟಕದ ತಾಲೂಕು ಸಂಚಾಲಕರನ್ನಾಗಿ ಎಮ್.ಪಟೇಲ್ ಅವರನ್ನು ಮತ್ತು ಸುರಪುರ ಹೋಬಳಿ ಸಂಚಾಲಕರನ್ನಾಗಿ ಹುಸನಪ್ಪ ದೇವಾಪು ಮತ್ತು ಸಂಘಟನಾ ಸಂಚಾಲಕರನ್ನಾಗಿ ಮಹಾದೇವಪ್ಪ ಚಲವಾದಿಯವರನ್ನು ಮತ್ತು ಭೀಮಣ್ಣ ಮಂಗಳೂರು ಆಕಾಶ ಕಟ್ಟಿಮನಿ ಶಿವಪ್ಪ ಶೆಳ್ಳಗಿಯವರನ್ನು ಪದಾಧಿಕಾರಿಗಳನ್ನಾಗಿ ನೇಮಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ವೀರಭದ್ರ ತಳವಾರಗೇರಾ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…