ಬಿಸಿ ಬಿಸಿ ಸುದ್ದಿ

ಉತ್ತಮ ಕೆಲಸದಿಂದ ಗುರುತಿಸಿಕೊಂಡವರು ಮ್ಯಾನೇಜರ್ ವಿ.ನಾಗರಾಜ-ಮದ್ರಕಿ

ಶಹಾಬಾದ: ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕರಾಗಿ ವಿ.ನಾಗರಾಜ ಆಗಮಿಸಿದಾಗಿನಿಂದಲೂ ಅವರು ಒಳ್ಳೆಯ ಕೆಲಸ ಮಾಡುವ ಮೂಲಕ ತಾಲೂಕಿನಲ್ಲಿ ಜನಮನ್ನಣೆ ಪಡೆದವರು ಎಂದು ಓಂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಮದ್ರಕಿ ಹೇಳಿದರು.

ಅವರು ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿ.ನಾಗರಾಜ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದ ಅತಿಥಿಗಳಾಗಿ ಮಾತನಾಡಿದರು.

ಯಾವತ್ತಿಗೂ ಬೇಸರವಿಲ್ಲದೇ ಗ್ರಾಹಕರಿಗೆ ಸ್ಪಂದಿಸುತ್ತ ಕೆಲಸ ಮಾಡಿದವರು. ಅವರು ವರ್ಗಾವಣೆಗೊಂಡಿರುವುದು ನಮಗೆಲ್ಲ ಬೇಸರ ತಂದಿದೆ. ತಮ್ಮ ಉತ್ತಮ ಕೆಲಸದ ಮೂಲಕ ಗುರುತಿಸಿಕೊಂಡವರು.ಬ್ಯಾಂಕಿನಲ್ಲಿ ಸಾಲವನ್ನು ಪಡೆಯಲು ಗ್ರಾಹಕರೇ ಬಂದು ಬೇಟಿ ಮಾಡಿ.ದಲ್ಲಾಳಿಗಳ ಮೂಲಕ ಬರಬೇಡಿ ಎಂದು ಜಾಗೃತಿ ಮೂಡಿಸಿದಲ್ಲದೇ, ದಲ್ಲಾಳಿಗಳಿಗೆ ಬ್ಯಾಂಕಿನಲ್ಲಿ ಜಾಗ ಇಲ್ಲದಂತೆ ಮಾಡಿ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟದ್ದರು.ಎಲ್ಲಾ ಜನರ ಕಷ್ಟಗಳಿಗೆ ಮಿಡಿಯುವ ಹೃದಯವಂತಿಕೆ ಅವರಲ್ಲಿ ಇತ್ತು. ವರ್ಗಾವಣೆ ಎಂಬುದು ಅನಿವಾರ್ಯ.ಇಲಾಖೆಯ ಆದೇಶ ಪಾಲಿಸುವುದು ಅವರ ಕರ್ತವ್ಯ.ಅವರು ಎಲ್ಲೇ ಹೋದರೂ ತಾಲೂಕಿನ ಜನರು ಅವರನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದ ಎಸ್‌ಬಿಹೆಚ್ ಶಾಖೆಯ ವ್ಯವಸ್ಥಾಪಕ ವಿ.ನಾಗರಾಜ, ಸೇವೆಯೆಂದರೆ ಬರಿ ವೇತನಕ್ಕಾಗಿ ಮಾಡುವುದಲ್ಲ.ಅಲ್ಲದೇ ನಮ್ಮ ಜೀವನೋಪಾಯಕ್ಕಾಗಿ ಕೆಲಮಾಡುವುದಲ್ಲ.ಅದರ ಬದಲಾಗಿ ಸಂಸ್ಥೆಯ ಅಭಿವೃದ್ಧಿ ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ ಸೇವೆ ಮಾಡಿದಾಗ ನಾವು ವೇತನ ಪಡೆದದ್ದು ಸಾರ್ಥಕವಾಗುತ್ತದೆ.ಜನರಿಗೆ ಬೇಕಾದ ಅಗತ್ಯ ಸೇವೆ ಒದಗಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಿದ ತೃಪ್ತಿ ಭಾವ ನನ್ನಲ್ಲಿದೆ. ಈ ಶಾಖೆಗೆ ಬಂದ ಮೇಲೆ ಒಳ್ಳೆಯ ಕಾರ್ಯ ಮಾಡಲು ತಾಲೂಕಿನ ಮುಖಂಡರು, ಗ್ರಾಹಕರು, ಸಿಬ್ಬಂದಿ ವರ್ಗವದರು ಒಳ್ಳೆಯ ಸಹಕಾರ ನೀಡಿದ್ದಾರೆ.ಅದೇ ರೀತಿಯಾಗಿ ಮುಂದೆ ಬರುವ ಅಧಿಕಾರಿಗಳಿಗೂ ಕೂಡ ಇದೇ ಸಹಾಯ ಸಹಕಾರ ನೀಡಿ. ಕೆಲಸ ಮಾಡುವ ಸಂಸ್ಥೆಯ ಪ್ರಗತಿಗೆ ಕಾರಣಿಭೂತರಾಗಬೇಕೆಂದು ಹೇಳಿದರು.

ಮರಲಿಂಗ ಗಂಗಭೋ, ಬೆಳ್ಳಪ್ಪ ಕಣದಾಳ, ಶೇಖ ಚಾಂದ್ ವಾಹೀದಿ, ನಾಗರಾಜ ದಂಡಾವತಿ ಮಲ್ಲಿನಾಥ ಪಾಟೀಲ, ವಿವಿಧ ಶಾಲೆಯ ಶಿಕ್ಷಕರು, ಸರಕಾರಿ ನೌಕರರು, ಉದ್ದಿಮೆದಾರರು ಹಾಗೂ ಗ್ರಾಹಕರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago