ಕಲಬುರಗಿ: ಬರಹಗಾರರ ಬಳಗ ಕಲಬುರಗಿ ಉತ್ತರ ವಲಯದ ವತಿಯಿಂದ ಆಯೋಜಿಸಿದ ‘ಕನಸು’ ಎಂಬ ಆನ್ ಲೈನ್ ಕವನ ರಚನಾ ಸ್ಪರ್ಧೆ ಏರ್ಪಡಿಸಲಾಗಿತ್ತು.
ಇದರಲ್ಲಿ ಶಿಕ್ಷಕ ಉಮೇಶ (ಪ್ರಥಮ), ಕಸ್ತೂರಬಾಯಿ ರಾಜೇಶ್ವರ (ದ್ವಿತೀಯ) ಮತ್ತು ಕೊಪ್ಪಳದ ಎಸ್ ಎಸ್ ಮುದ್ಲಾಪೂರ(ತೃತೀಯ) ಸ್ಥಾನಗಳನ್ನು ಪಡೆದು ವಿಜೇತರಾದರು. ಜಗದೀಶ ಎಂ. ರಸ್ತಾಪುರ, ನಾಗರತ್ನ, ಕವಿತಾ ಪಿ. ಮೋರಾ ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದವು ಎಂದು ಜಿಲ್ಲಾ ಸಂಚಾಲಕ, ಸಾಹಿತಿ ಧರ್ಮಣ್ಣ ಧನ್ನಿ ತಿಳಿಸಿದ್ದಾರೆ.
ತೀರ್ಪುಗಾರರಾಗಿ ಶಿಕ್ಷಣ ಇಲಾಖೆಯ ಬಿಆರ್ ಪಿ ಉಷಾ ಗೊಬ್ಬೂರ ಭಾಗವಹಿಸಿದರು. ಇದರಲ್ಲಿ ರೇಷ್ಮಾ ಅಜಾದ,ನೇತ್ರಾವತಿ,ಶಂಕರ ಬಗಲೂರ,ಅಶ್ವೀನಿ ಕೆ ಎಂ,ಭಾರತಿ ಗುತ್ತೇದಾರ,ಗುರುಬಸಪ್ಪ ರಕ್ಕಸಗಿ,ಮಹಾನಂದ ಸಿಬ್ಬಶೆಟ್ಟಿ ಕವಿಗಳು ಪಾಲ್ಗೊಂಡು ಸ್ವರಚಿತ ಕವನ ಮಂಡಿಸಿದರು.ಬದುಕಿನ ಕನಸುಗಳನ್ನು ಕಟ್ಟಲು ಯಾವ ರೀತಿ ಶ್ರಮಿಸಬೇಕು.ಅಂಥ ಕನಸು ನನಸಾಗುವ ಕೆಲ ಘಳಿಗೆಗಳನ್ನು ಯುವ ಬರಹಗಾರರು ತಮ್ಮ ಕಾವ್ಯ ಕುಂಚದಲ್ಲಿ ಅಭಿವ್ಯಕ್ತ ಪಡಿಸಿದರು.
ಬಳಗದ ನಿರ್ವಾಹಕರಾದ ರೇಣುಕಾ ಶ್ರೀಕಾಂತ ಅವರ ನೇತೃತ್ವದಲ್ಲಿ ಕವಿಗೋಷ್ಠಿ ಸ್ಪರ್ಧೆ ನಡೆಯಿತು.15 ಜನ ಕವಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…