ಬಿಸಿ ಬಿಸಿ ಸುದ್ದಿ

ಪಿ.ಡಿ.ಎ. ಕಾಲೇಜಿನಲ್ಲಿ ದಿನಗೂಲಿ ನೌಕರರಿಗೆ ಆಹಾರ ಕಿಟ್ ವಿತರಣೆ

ಕಲಬುರಗಿ: ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ನೇಮಕಾತಿ ಅಧಿಕಾರಿ ಸಿರಾಮಿಕ ಮತ್ತು ಸಿಮೆಂಟ್ ವಿಭಾಗದ ಪ್ರಾಧ್ಯಾಪಕರಾದ ಡಾ. ಮಹಾದೇವಪ್ಪ ಜಿ. ಗಾದಗೆ ಅವರು ತಮ್ಮ ತಾಯಿಯವರಾದ ಶ್ರೀಮತಿ ಚಂದ್ರಮ್ಮಾ ಭೀಮರಾಯ ಗಾದಗೆಯವರ ಸ್ಮರಣಾರ್ಥ ಕೋವಿಡ್ ೧೯ ಸಂದರ್ಭದಲ್ಲಿ ಕಷ್ಟದಲ್ಲಿರುವ ಕಾಲೇಜಿನ ಸುಮಾರು ೧೪೦ ಜನ ದಿನಗೂಲಿ ನೌಕರರಿಗೆ ಆಹಾರ ಕಿಟ್ ಗಳನ್ನು ವಿತರಿಸಿದರು.

ಕಾಲೇಜಿನ ಉಪಪ್ರಾಚಾರ್ಯರಾದ ಡಾ. ಎಸ್. ಎಸ್. ಕಲಶೆಟ್ಟಿಯವರು ಮಹಾದೇವಪ್ಪ ಗಾದಗೆಯವರ ಉದಾರತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೋವಿಡ್ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವುದು ಮಾನವಿಯತೆಗೆ ನೀಡಿದ ಗೌರವ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಡೀನ್ ಡಾ. ಎಸ್. ಆರ್. ಪಾಟೀಲ, ಡಾ. ಶರಣಬಸಪ್ಪ ಬಿ. ಪಾಟೀಲ, ಡಾ. ಬಾಬುರಾವ ಸೇರಿಕಾರ, ಕಲ್ಯಾಣಿ ಎಸ್. ಬಿರಾದಾರ, ರಾಜಶೇಖರ ಉಪಾಸೆ, ಸಂಗಶೆಟ್ಟಿ, ರಾಜಶೇಖರ ಬೇಳಕೇರಿ, ಶಿವಶರಣ ದೇಗಾಂವ್, ಶರಣು ಫುಲಾರಿ ಉಪಸ್ಥಿತರಿದ್ದರು.

emedialine

Recent Posts

ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರ ತೆಗೆದುಕೊಳ್ಳಿ; ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…

25 mins ago

ಅಖಿಲ ಭಾರತ ವೀ.ಲಿಂ ಮಹಾಸಭಾ ನೂತನ ಅಧ್ಯಕ್ಷ ನಿದೇರ್ಶಕರ ನೇಮಕ

ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…

28 mins ago

ಡೆಂಘೀ ವಿರೋಧಿ ಮಾಸಾಚರಣೆ | ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಯಾವ ಕಾಯಿಲೆ ಬರದು

ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…

31 mins ago

ಶಾಸಕ ಅಲ್ಲಮಫ್ರಬು ಪಾಟೀಲರಿಂದ ಕಂಪ್ಯೂಟರ್ ಪ್ರಮಾಣ ಪತ್ರ ವಿತರಣೆ

ಕಲಬುರಗಿ: ನಗರದ ಬಸವ ಸಿರಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಭಾನುವಾರ ಮುಂಜಾನೆ. 11 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷ ಮತ್ತು…

37 mins ago

ತೊಗರಿ ಮತ್ತು ಹತ್ತಿ ಬೆಳೆಗಳ ಸಸ್ಯ ಸಂರಕ್ಷಣಾ ತರಬೇತಿ 18ಕ್ಕೆ

ಕಲಬುರಗಿ; ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಉದ್ದು, ಹೆಸರು ಮತ್ತು ಸೋಯಾಬಿನ್ ಬೆಳೆಯಲಾಗಿದ್ದು, ಇದರಲ್ಲಿ ಕಂಡು ಬರುವ ಹುಳು,…

54 mins ago

ಡೆಂಗ್ಯೂ ,ಝಿಕಾ, ಚಿಕನ್ ಗುನ್ಯಾ ತಡೆಗಟ್ಟಲು ಸರಕಾರಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

  ಕಲಬುರಗಿ : "ಜಿಲ್ಲೆಯಲ್ಲಿ ಡೆಂಗಿ ಜ್ವರ ಹಾವಳಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಝಿಕಾ ವೈರಾಣು ಸೋಂಕು, ಚಿಕನ್ ಗುನ್ಯಾ…

1 hour ago