ಬಿಸಿ ಬಿಸಿ ಸುದ್ದಿ

ಝಳಕಿ (ಬಿ)ಯಲ್ಲಿ ಸಸಿ ನೆಡುವ ಕಾರ್ಯಕ್ಕೆ ಸೇಡಂ ಚಾಲನೆ

ಆಳಂದ: ತಾಲೂಕಿನ ಝಳಕಿ (ಬಿ) ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕøತಿಕ ಸಂಘ ಹಾಗೂ ಎಸ್‍ಆರ್‍ಜಿ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಿದ್ದ ವೃಕ್ಷಾರೋಹಣವನ್ನು ರಾಜ್ಯ ಸಭಾ ಸದಸ್ಯ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರು ಸಸಿ ನೆಟ್ಟು ನೀರುಣಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಗ್ರಾಮಾಭಿವೃದ್ಧಿಗೆ ಪಕ್ಷಭೇದ ಮರೆತು ಎಲ್ಲರು ಒಂದಾಗಿ ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳಬೇಕು. ಪರಿಸರ ಸಂರಕ್ಷಣೆ, ಕೃಷಿ ಚಟುವಟಿಕೆ ಮೂಲಕ ಗ್ರಾಮದಲ್ಲಿ ದುಶ್ಚಟಗಳನ್ನು ಹತ್ತಿಕ್ಕಿ ಮಾದರಿ ಗ್ರಾಮವನ್ನಾಗಿಸಲು ಪಣತೊಡಬೇಕು. ಯುವಕರು ದಾರಿ ತಪ್ಪದೆ ಕೃಷಿ, ಹೈನುಗಾರಿಕೆ ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಜೀವನ ಸಾಗಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಯಳಸಂಗಿ ಮಠದ ಶ್ರೀ ಪ್ರಣಾವನಂದ ಮಹಾಸ್ವಾಮಿಗಳು ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಏನೆಲ್ಲ ಬೇಕಾಗಿದೆ ಅದನ್ನು ಮಾಡಲು ಇಂದು ಪ್ರತಿಯೊಬ್ಬರು ಮುಂದಾಗಬೇಕಾಗಿದೆ. ಹಸಿರು ಪರಿಸರ, ಹೈನುಗಾರಿಕೆ, ಕೃಷಿ ಮೂಲಕ ಆರ್ಥಿಕ ಅಭಿವೃದ್ಧಿಗೆ ಹೆಜ್ಜೆ ಹಾಕಬೇಕು. ಇಂಥ ಕಾರ್ಯಗಳಿಗೆ ಬಸವರಾಜ ಪಾಟೀಲ ಸೇಡಂ ಅವರು ಕಲ್ಯಾಣ ಕರ್ನಾಟಕದಲ್ಲಿ ಸದಾ ಪ್ರಯತ್ನಿಸುತ್ತಲೇ ಬಂದಿದ್ದಾರೆ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಕಾರ್ಯಗಳಾಗುತ್ತಿದ್ದು ಸಾರ್ವಜನಿಕರು ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಎಸ್‍ಆರ್‍ಜಿ ಫೌಂಡೇಷನ್ ಕಾರ್ಯದರ್ಶಿ ಹರ್ಷಾನಂದ ಗುತ್ತೇದಾರ ಅವರು ಮಾತನಾಡಿ, ಈ ಎರಡು ಸಂಸ್ಥೆಗಳಡಿ ಜನಪಯೋಗಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ನೆಟ್ಟಗಿಡಗಳನ್ನು ಸಂರಕ್ಷಣೆ ಮಾಡುವ ಮೂಲಕ ಸ್ಥಳೀಯರು ಗ್ರಾಮದ ಪರಿಸರವನ್ನು ಹಸಿರೀಕರಣಗೊಳಿಸಲು ಮುಂದಾಗಬೇಕು ಎಂದರು.

ವೇದಿಕಯ ಮೇಲೆ ಶಿವಶಾಂತ ರೆಡ್ಡಿ, ಪ್ರಾದೇಶಿಕ ಅರಣ್ಯಾಧಿಕಾರಿ ಜಗನಾಥ ಕೊರಳ್ಳಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಚಂದ್ರಶೇಖರ ಹೇಮಾ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

emedialine

Recent Posts

ಹೂಗಾರ ಅಭಿವೃಧ್ಧಿ ನಿಗಮಕ್ಕೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಸುರಪುರ: ರಾಜ್ಯದಲ್ಲಿ ನೂತನವಾಗಿ ಆರಂಭಗೊಂಡಿರುವ ಹೂಗಾರ ಅಭಿವೃಧ್ಧಿ ನಿಗಮಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ಹೂಗಾರ…

33 seconds ago

ಅಖಂಡ ಕರ್ನಾಟಕ ವೀ.ಲಿಂ ಸಮಾಜ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ವೀಣಾ ಹಿರೇಮಠ

ಸುರಪುರ: ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆಯನ್ನಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಹಿಳೆ ಹೋರಾಟಗಾರ್ತಿ…

6 mins ago

ಅಗಲಿದ ಪತ್ರಕರ್ತ ಶಿವಶರಣ ಕಟ್ಟಿಮನಿ ವೆಂಕಟೇಶ ಮಾನುಗೆ ಶ್ರದ್ಧಾಂಜಲಿ

ಸುರಪುರ: ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯ ದಿಂದ ನಿಧನರಾದ ಕೊಡೇಕಲ್ ಹೋಬಳಿಯ ಪ್ರಮುಖ ಪತ್ರಿಕೆ ವರದಿಗಾರ ಹಾಗೂ ಶಹಾಪುರದ…

9 mins ago

ಕಲಬುರಗಿ ಯುನೈಟೆಡ್ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ; ಚಿಕಿತ್ಸೆಯಲ್ಲಿ ಲೋಪ ಆರೋಪ

ಕಲಬುರಗಿ: ವೈದ್ಯರ ನಿರ್ಲಕ್ಷ್ಯ ಮತ್ತು ಚಿಕಿತ್ಸೆಯಲ್ಲಿ ಏರುಪೇರು ಸಂಭವಿಸಿ ವಕ್ತಿ ಮೃತಪಟ್ಟಿದ್ದಾರೆಂದು ಆರೋಪಿಸಿ ಧೀಡಿರನೇ ಇಲ್ಲಿನ ಯುನೈಟೆಡ್ ಆಸ್ಪತ್ರೆ ವಿರುದ್ಧ…

26 mins ago

ಕಲಬುರಗಿಯಲ್ಲಿ ಕೆ.ಇ.ಎ ಪರೀಕ್ಷೆ ಸುಸೂತ್ರ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ…

4 hours ago

ತಿಪಟೂರು ಕೃಷ್ಣಗೆ ” ಕಾಯಕ ರತ್ನ ಪ್ರಶಸ್ತಿ ” ಪ್ರದಾನ

ಬೀದರ್: ಮಾಧ್ಯಮ ಮತ್ತು ಸಾಮಾಜಿಕ ಸಂಘಟನೆ ಕ್ಷೇತ್ರದಲ್ಲಿ ದೀರ್ಘ ಸೇವೆಯನ್ನು ಗುರ್ತಿಸಿ ತಿಪಟೂರು ಕೃಷ್ಣ ಅವರಿಗೆ " ಕಾಯಕ ರತ್ನ…

4 hours ago