ಬಿಸಿ ಬಿಸಿ ಸುದ್ದಿ

ಟೊಮ್ಯಾಟೋಬೆಳೆ: ಮುಖ್ಯರೋಗಗಳ ಸಮಗ್ರ ನಿರ್ವಹಣೆ

ಟೊಮ್ಯಾಟೋ ಮುಖ್ಯ ಜೀವಸತ್ವಗಳನ್ನು ಹೊಂದಿರುವಜನಪ್ರಿಯತರಕಾರಿ ಬೆಳೆಯಾಗಿದ್ದು, ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದು.ನೀರು ಬಸಿದು ಹೋಗುವ ಮಧ್ಯಮಕಪ್ಪು ಹಾಗೂ ಮರಳು ಮಿಶ್ರಿತ ಜೇಡಿ ಮಣ್ಣುರಸಸಾರ ೬ ರಿಂದ ೭ ಇದ್ದಲ್ಲಿ ಬೆಳೆಗೆ ಸೂಕ್ತ.ಅಧಿಕ ಮಳೆ ಬೀಳುವ ಕರಾವಳಿ, ಮಲೆನಾಡು ಹೊರತುಪಡಿಸಿ ಮೈದಾನ ಪ್ರದೇಶಗಳಲ್ಲಿ ಇದನ್ನು ವರ್ಷದ ಮೂರು ಮುಖ್ಯ ಕಾಲಗಳಲ್ಲಿ ಬೆಳೆಯಬಹುದು.ಇತ್ತೀಚಿನ ದಿನಗಳಲ್ಲಿ ಉತ್ತಮ ಇಳುವರಿ ಕೊಡಬಲ್ಲ ತಳಿಗಳು ಲಭ್ಯವಿದ್ದು, ಹೆಕ್ಟರ್‌ಗೆ ೧೦೦ ರಿಂದ ೨೫೦ ಗ್ರಾಂ ಬಿತ್ತನೆ ಬೀಜಅವಶ್ಯಕತೆಇರುತ್ತದೆ.

ಸಸಿಮಡಿ ತಯಾರಿಕೆ: ಸಸಿಮಡಿ ತಯಾರಿಕೆ ವೇಳೆ ಕೊಟ್ಟಿಗೆಗೊಬ್ಬರ ಹಾಗೂ ೨ ಕಿಲೋ ಗ್ರಾಂಕ್ಯಾಲ್ಸಿಯಂ ಮ್ಯಗ್ನಿಷಿಯಮ್ ಗಂಧಕವುಳ್ಳ ಗೊಬ್ಬರ ಸೆಟ್‌ರೈಟ್ ಪ್ರತಿ ಮಡಿಗಳಿಗೆ ಕೊಟ್ಟಲ್ಲಿ ಮಣ್ಣಿನ ಫಲವತ್ತತೆಉತ್ತಮಗೊಂಡುಟ್ರೈಕೋಡರ್ಮಾ ಶಿಲೀಂಧ್ರ ನಾಶಕದಿಂದ ಬೀಜೋಪಚರಿಸಿದ ಬೀಜಗಳ ಬಿತ್ತನೆ ಮಾಡಿ ತೆಳುವಾಗಿ ಮಣ್ಣಿನಿಂದ ಮುಚ್ಚಬೇಕು. ಮೊಳಕೆ ಒಡೆದ ೪ ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ.

ಎಲೆ ಚುಕ್ಕೆ ರೋಗ ಹಾಗೂ ಅಂಗಮಾರಿ: ಅಲ್ಟರ್‌ನೇರಿಯ, ಸೆಪ್ಟೋರಿಯ ಶಿಲೀಂಧ್ರಗಳು ಈ ರೋಗವನ್ನು ಪೋಟಾಷ್‌ಕೊರತೆಇರುವ ಭೂಮಿಗಳಲ್ಲಿ ಯಥೇಚ್ಛವಾಗಿ ಹರಡುತ್ತವೆ. ಸಣ್ಣ ಸಣ್ಣಕಂದು ಬಣ್ಣದ ಚುಕ್ಕೆಗಳು ಪರಿವರ್ತನೆಗೊಂಡು ಎಲೆ ಅಂಗಮಾರಿರೋಗ ಸೃಷ್ಠಿಯಾಗಿ ಎಲೆಗಳು ಒಣಗುತ್ತವೆ. ಮ್ಯಾಂಕೋಜಿಬ್ ೨ ಗ್ರಾಂ. ಹಾಗೂ ಬಯೋ ೨೦ ಅಥವಾ ಬಯೋವಿಟಾ೨ ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದಲ್ಲಿ ರೋಗ ನಿರ್ವಹಣೆ ಸಾಧ್ಯ.

ಎಲೆ ಮುದುಡುರೋಗ: ಗಿಡಗಳ ಎಲೆಗಳು ಪೊದೆಯಾಕಾರಗೊಂಡುಎಲೆಯ ಬೆಳವಣಿಗೆ ಕುಂಠಿತಗೊಂಡು, ಎಲೆ ಗಾತ್ರಕಡಿಮೆಯಾಗಿ ಕಾಯಿ ಕಟ್ಟುವಿಕೆಕ್ಷೀಣಿಸುವುದು ಬೇಸಿಗೆ ಕಾಲದಲ್ಲಿರಸ ಹೀರುವ ಕೀಟಗಳಲ್ಲಿ ಉದ್ಭವಗೊಂಡ ಮಾರಕ ವೈರಸ್‌ರೋಗವುಗಿಡದಿಂದ ಗಿಡಗಳಿಗೆ ಹರಡುತ್ತದೆ. ಭೂಮಿಯಲ್ಲಿಜಿಂಕ್ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಹುಳಿ ಮಜ್ಜಿಗೆಅಥವಾಗೋಮೂತ್ರ ೭೫೦ ಮೀ.ಲೀ ಪ್ರತಿ ೧೫ ಲೀಟರ್‌ಟ್ಯಾಂಕ್‌ಗೆ ಬೆರೆಸಿ ಸಿಂಪಡಿಸಬೇಕು. ಅತಿಯಾದ ಮುದುಡು ಪೀಡಿತಗಿಡವನ್ನು ಹೊಲದಿಂದತೆಗೆದು ನಾಶಪಡಿಸಬೇಕು.

ಸೊರಗುರೋಗ: ಈ ರೋಗದಲ್ಲಿಎರಡು ವಿಧಗಳಿವೆ ಪ್ಯಸೇರಿಯಂ ಸೊರಗುರೋಗ ಹಾಗೂ ದುಂಡಾಣು ಸೊರಗುರೋಗ.ಶಿಲೀಂಧ್ರ ಸೊರಗುತುತ್ತಾದ ಗಿಡಗಳು ಎಲೆಗಳು ಕಂದು ಬಣ್ಣಕ್ಕೆತಿರುಗಿ ಕೆಳಗೆ ಬಾಗುತ್ತವೆ ನಂತರಗಿಡದ ಎಲೆಗಳು ಪೂರ್ತಿಒಣಗುತ್ತವೆ. ರೋಗ ಪೀಡಿತ ಗಿಡಗಳನ್ನು ನಾಶಪಡಿಸಬೇಕು.ಸೊರಗು ಪೀಡಿತ ಹಾಗೂ ಸುತ್ತಲಿರುವಆರೋಗ್ಯ ಗಿಡಗಳಿಗೆ ಸಿಓಸಿ (ತಾಮ್ರದಅಕ್ಸಿಕ್ಲೋರೈಡ್) ೦.೩ ಗ್ರಾಂ.ಅಥವಾಕಾರ್ಬೇನಡೆಂಜಿಮ್ ೦.೨% ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ನೆನೆಯುವಂತೆ ಸುರಿಯಬೇಕು.

ಹಣ್ಣುಕೊರೆಯುವ ಹುಳ: ಮರಿ ಹುಳುಗಳು ಹಣ್ಣನ್ನುಕೊರೆದು ಒಳ ಭಾಗವನ್ನುತಿನ್ನುತ್ತವೆ. ನಂತರ ಹಣ್ಣು ಕೊಳೆಯಲು ಆರಂಭಿಸುತ್ತದೆ. ಕಾರ್ಬರಿಲ್ ೩ ಗ್ರಾಂ.ಅಥವಾ ಬೇವಿನ ಎಣ್ಣೆ ೫ ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.

ಪೋಷಕಾಂಶ ನ್ಯೂನತೆಗಳು: ಭೂಮಿಯಲ್ಲಿ ಸುಣ್ಣದ ಅಂಶ ಕಡಿಮೆಯಾದಾಗ ಸಸ್ಯಗಳಲ್ಲಿ ಇಳುವರಿ ಕೊಡಬಲ್ಲ ಕಾಯಿ ಹಣ್ಣುಗಳು ಕ್ಯಾಲ್ಸಿಯಂಕೊರತೆಯಿಂದಕಪ್ಪುಕಂದುಬಣ್ಣಕ್ಕೆತಿರುಗುತ್ತವೆ. ಕ್ಯಾಲ್ಸಿಯಂಯುಕ್ತ ಪೋಷಕಾಶ೦.೨% ನೀರಿನಲ್ಲಿಬೆರೆಸಿ ಕಾಯಿ ಕಟ್ಟುವ ಸಂದರ್ಭದಲ್ಲಿ ಸಿಂಪಡಿಸಿದಲ್ಲಿ ಈ ನ್ಯೂನತೆ ನಿವಾರಿಸಬಹುದು.

-ಜಹೀರ್‌ಅಹಮದ್ ಬಿ., ಮತ್ತುಬಿಂದುಕೆ.ಜಿ,
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು.
emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

4 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

5 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

5 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

5 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

6 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

7 hours ago