ದಿನದಿಂದ ದಿನಕ್ಕೆ ಭಾರತ ಅಸಿಹಿಷ್ಣುಗಳ ತಾಣವಾಗುತ್ತಿರುವುದು ಕಳವಳದ ಸಂಗತಿಯಾಗಿದೆ. ಧರ್ಮದ ಮುಖಂಡರು (?) ನಾವು ಹೇಳಿದಂತೆಯೇ ನಡೆಯಬೇಕು. ಇಲ್ಲದಿದ್ದರೆ ನಿಮ್ಮನ್ನು ಧರ್ಮದಿಂದಲೇ ಭಹಿಷ್ಕರಿಸಲಾಗುತ್ತದೆ ! ಎಂದು ಫತ್ವಾ ಹೊರಡಿಸುತ್ತಿದ್ದಾರೆ. ನಮ್ಮ ದೇಶವನ್ನು ಸಂವಿಧಾನಾತ್ಮಕ ಶಾಸನಗಳು ಇದ್ದರೂ ಧರ್ಮಾಂಧರ ಅನಾರ್ಕಿ ಮಾತುಗಳಿಗೆ ಕಡಿವಾಣ ಇಲ್ಲವಾಗಿದೆ. ಜನ ಸಾಮಾನ್ಯನೂ ಸಹ ಧರ್ಮಾಂಧರ ಮಾತಿಗೆ ಹೆಜ್ಜೆ ಹಾಕುತ್ತ ನಡೆದಿರುವುದು ನಿಜಕ್ಕೂ ಶೋಚನೀಯ ಸಂಗತಿ. ಬಹುಶಃ ಇದು ಹೀಗೆ ಮುಂದುವರೆದರೆ ನಮ್ಮ ಭಾರತವೂ ಮತ್ತೊಂದು ಪಾಕಿಸ್ತಾನವಾಗಿ ತನ್ನ ಘನತೆ ಗೌರವವನ್ನು ಕಳೆದುಕೊಳ್ಳಲಿದೆ.
ಪಶ್ಚಿಮ ಬಂಗಾಳದ ಬಸಿಹಾರ್ತ್ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ನಿಂದ ಆಯ್ಕೆಯಾದ ನುಸ್ರತ್ ಜಹಾನ್ ಗುರುತರವಾದ ತಪ್ಪು ಮಾಡೇ ಇಲ್ಲ. ಆಕೆ ಸಂಸತ್ತ ಕಲಾಪದಲ್ಲಿ ಭಾಗವಹಿಸುವಾಗ ಮಂಗಲ ಸೂತ್ರ, ಹಾಗೂ ಸಿಂಧೂರ ಹಚ್ಚಿಕೊಂಡದ್ದೆ ಮೂಲಭೂತ -ವಾದಿಗಳ ಕೆಂಗಣ್ಣಿಗೆ ಕಾರಣವಾಗಿದೆ. ಹೆಣ್ಣು ಮಕ್ಕಳು ಸೀರೆಯನ್ನೆ ಉಟ್ಟುಕೊಳ್ಳಬೇಕು. ಸಲ್ವಾರ್ ಕಮೀಜ್ ಉಡಬಾರದು ಎಂದು ಹೇಳುವ ಧರ್ಮಾಂಧರಂತೆ ಈ ಮಾತಾಗಿದೆ. ಜಾತ್ಯತೀತ ಭಾರತ ಎಂದು ಸಂವಿಧಾನವನ್ನು ಅಂಗೀಕರಿಸಿದ ದಿನ ನಾವು ಹೇಳಿಕೊಂಡಿದ್ದರೂ ಧರ್ಮಾಂಧರು ಇದನ್ನು ಅರಿತುಕೊಂಡಿಲ್ಲ.
ಉತ್ತರ ಪ್ರದೇಶದ ದಿಯೋಬಂದ್ ನ ಜಾಮಿಯಾ ಶೇಖ್ ಉಲ್ ಹಿಂದ್ ನ ಧರ್ಮ ಗುರು (?) ಮುಪ್ತಿ ಅಸಾದ್ ಕಾಜ್ಮಿಯ ಆಕ್ಷೇಪಕ್ಕೆ ನುಸ್ರತ್ ಜಹಾನ್ ಬೆದರಿಲ್ಲ. ಬದಲಾಗಿ ಆಕೆ: “ನನ್ನ ದೇಶ ಭಾರತ. ನಾನು ಹೇಗೆ ಬದುಕಬೇಕೆಂದು ನಿರ್ಧರಿಸುವ ಹಕ್ಕು ನನಗೆ ಇದೆ.
ನಾವು ಬಳಸುವ ಸಂಕೇತಗಳು ನನ್ನ ಆಯ್ಕೆ. ಜಾತ್ಯತೀತ ಭಾರತದ ಪ್ರಜೆ ನಾನು. ನನ್ನ ಧರ್ಮ ನನಗೆ ದೇವರ ಹೆಸರಲ್ಲಿ ಜನರನ್ನು ವಿಭಜಿಸಲು ಕಲಿಸಿಲ್ಲ” ಎಂದು ಹೇಳುವ ಮೂಲಕ ಕಾಜ್ಮಿಗೆ ಸರಿಯಾಗಿ ಟಾಂಗ್ ನೀಡಿದ್ದಾರೆ. ಹಿಂದೆಯೂ ನುಸ್ರತ್ ಜೈನ ಧರ್ಮದ ನಿಖಿಲ್ ಅವರನ್ನು ಮದುವೆಯಾಗಿದ್ದರು. ಸಂಸತ್ತಿನಲ್ಲಿ ವಂದೆ ಮಾತರಂ ಹೇಳಿದ್ದರು. ಇದೆಲ್ಲ ಮೌಲ್ವಿಗಳ ಪ್ರತಿಕ್ರಿಯೆಗೆ ಕಾರಣವಾಗಿದೆ.
ಸಂಸದೆ ನುಸ್ರತ್ ಳ ನಡೆಯನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿದೆ. ದೇಶವ್ಯಾಪಿಯಾಗಿಯೂ ಹಲವರು ಅವಳ ನಡೆಯನ್ನು ಪ್ರಶಂಶಿಸಿವೆ. ಭಾರತೀಯರಾದ ನಾವೆಲ್ಲ ಸತ್ಯ ಅರಿಯಬೇಕು. ನಾವು ಆಯ್ಕೆ ಮಾಡಿಕೊಂಡ ಸಂವಿಧಾನ ನಮಗೆ ಸ್ವತಂತ್ರವಾಗಿ ಬದುಕಲು ಹೇಳಿದೆ. ನಮಗೆ ಇಷ್ಟವಾಗುವ ಉಡುಗೆ ತೊಡುಗೆಯನ್ನು ಉಡಬಹುದು. ನಾವು ಇಷ್ಟಪಟ್ಟ ಧರ್ಮವನ್ನು ಸ್ವೀಕರಿಸಬಹುದು. ಯಾವ ಧರ್ಮವನೂ ಸ್ವೀಕರಿಸದೆಯೂ ಇರಬಹುದು. ದೇವರನ್ನು ಒಪ್ಪಬಹುದು. ಒಪ್ಪದೆಯೂ ಇರಬಹುದು. ನನ್ನ ಬದುಕು ನನ್ನ ಆಯ್ಕೆ ಎಂಬ ತತ್ವ ಭಾರತೀಯ ಸಂವಿಧಾನ ನಮಗೆ ಕಲ್ಪಸಿಕೊಟ್ಟಿದೆ.
ಒಂದು ಮಾತು: ನನ್ನ ಆಚಾರ ವಿಚಾರ ನಡಾವಳಿಗಳು ಸಂವಿಧಾನಬಾಹಿರವಾಗಬಾರದು. ಕಾನೂನಿಗೆ ಅಗೌರವ ತೋರುವವರು ಕಂಬಿಗಳ ನಡುವೆ ಇರಬೇಕಾಗುತ್ತದೆ ಎಂಬ ಸತ್ಯ ಅರ್ಥ ಮಾಡಿಕೊಳ್ಳಬೇಕು. ಭಾರತದ ಕಾನೂನಿಗೆ ಯಾರೂ ಹೊರತಲ್ಲ. ರಾಜಕಾರಣಿ, ಧಾರ್ಮಿಕ ಮುಖಂಡ, ಸಮಾಜದ ಮುಖಂಡ ಯಾರೇ ಆದರೂ ಘನತೆಯಿಂದ ವರ್ತಿಸಬೇಕು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…