ಕಲಬುರಗಿ: ವಿಶ್ವದ ಶ್ರೇಷ್ಠ ವಿಜ್ಞಾನಿ ರಾಮಾನುಜಂ ಅವರ ದಿನದಂದೇ ಹುಟ್ಟಿರುವ ದೀಪ್ತಿ ವಿಶ್ವದ ಬೆಳಕಾಗಲಿ ಎಂದು ನಾಡಿನ ಚಿಂತಕರು ಹಾಗೂ ಸಂಸ್ರ್ಕತ ವಿಶ್ವವಿದ್ಶಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ಹಾರೈಸಿದರು.
ನಗರದ ಯಶ್ ಕೊಠಾರಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ದೀಪ್ತಿ ಹುಟ್ಟುಹಬ್ಬ ಹಾಗೂ ಡಾ.ಎಂ.ಬಿ.ಕಟ್ಟಿ ಸೇರಿ ವಿವಿಧ ಲೇಖಕರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಮಗಳ ಹುಟ್ಟುಹಬ್ಬದ ದಿನ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಡಾ.ಎಂ.ಬಿ.ಕಟ್ಟಿ ಬಹುಮುಖ ವ್ಶಕ್ತಿತ್ವ ಹೊಂದಿದ್ದು ಇನ್ನು ಉನ್ನತ ಸ್ಥಾನಕ್ಕೇರಲಿ ಎಂದರು. ಕಟ್ಟಿ ಈಗಾಗಲೇ ನಾಡಿಗೆ ಹಲವು ಕ್ರತಿಗಳನ್ನು ಅರ್ಪಿಸಿದ್ದಾರೆ. ಸಮಾಜದಲ್ಲಿರುವ ಹಲವು ವಿಚಾರಗಳನ್ನು ಕಟ್ಟಿ ತಮ್ಮ ಬರಹದಲ್ಲಿ ಕಾಣಬಹುದು.
ಇಂತಹ ವಿಚಾರಗಳು ಇನ್ನಷ್ಟು ಪುಸ್ತಕಗಳ ಮೂಲಕ ಹೊರಬರಲಿ ಎಂದು ಹಾರೈಸಿದರು. ನಂತರ ಮಾತನಾಡಿದ ಕನ್ನಡ ಅಧ್ಶಯನ ವಿಭಾಗದ ಡೀನರು ಹಾಗೂ ಪ್ರಸರಾಂಗದ ನಿರ್ದೇಶಕ ಡಾ.ಎಚ್.ಟಿ. ಪೋತೆˌ ಹೆಣ್ಣುಮಕ್ಕಳಿಗೆ ಶಿಕ್ಷಣ ಅಗತ್ಶ. ಹೆಣ್ಣುಮಕ್ಕಳು ಶಿಕ್ಷಣ ಕಲಿತರೆ ಮೌಢ್ಶವು ದೂರ ಹೋಗುತ್ತದೆ. ಮಗಳ ಹುಟ್ಟುಹಬ್ಬದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದ ಡಾ.ಎಂ.ಬಿ.ಕಟ್ಟಿ ಮುಂದೆ ಬಹುದೊಡ್ಡ ಲೇಖಕರಾಗಿ ಹೊರಹೊಮ್ಮಲಿ ಎಂದು ಹಾರೈಸಿದರು. ಈ ವೇಳೆ ಕಟ್ಟಿ ತಂದೆ ತಾಯಿಗಳಿಗೆ ಸನ್ಮಾನಿಸಲಾಯಿತು.
ಸಂದರ್ಭದಲ್ಲಿ ಪ್ರೊ. ಶ್ರೀಶೈಲ್ ನಾಗರಾಳˌ ಸಿಂಡಿಕೇಟ್ ಮಾಜಿ ಸದಸ್ಶ ಈಶ್ವರ ಇಂಗಿನ್ˌ ಸಂಗಪ್ಪ ಹೊಸಮನಿˌ ಎಇಇ ಬಿ.ಆರ್.ಬುದ್ಧಾˌ ಡಾ.ಗುಬ್ಬಿˌ ಸುಜಾತಾ ಜಂಗಮಶೆಟ್ಟಿˌ ಬಿ.ಹೆಚ್.ನಿರಗುಡಿˌ ಪಿ.ಪರಶುರಾಮ್ˌ ಡಾ.ಎಂ.ಬಿ.ಕಟ್ಟಿˌ ಗೀತಾ ಕಟ್ಟಿˌ ಡಾ. ದಿಲಿಪ್ ನವಲೆˌ ಹಣಮಂತ ಮೇಲ್ಕೇರಿˌ ಮಹಾಲಿಂಗ ಮಂಗಳೂರುˌ ರವಿಕುಮಾರ ಬುರ್ಲೆˌ ನಿಜಲಿಂಗ ದೊಡ್ಮನಿˌ ರವಿಕುಮಾರ ಬಿಳವಾರˌ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…