ಗ್ರಾಹಕ ಇಂಟರ್ನೆಟ್‌ ವ್ಯವಸ್ಥೆಯ ಅಭಿವೃದ್ಧಿಗೆ ಫ್ಲಿಪ್‌ಕಾರ್ಟ್‌ನಿಂದ 3.6 ಬಿಲಿಯನ್‌ ಅಮೆರಿಕನ್ ಡಾಲರ್‌ ಸಂಗ್ರಹ

ಬೆಂಗಳೂರು: ಭಾರತದ ಪ್ರಮುಖ ಗ್ರಾಹಕ ಇಂಟರ್ನೆಟ್‌ ವ್ಯವಸ್ಥೆಯಾದ ಫ್ಲಿಪ್‌ಕಾಟ್‌F ಗ್ರೂಪ್‌, ಭಾರತದಲ್ಲಿ ಡಿಜಿಟಲ್‌ ವಾಣಿಜ್ಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನೆಲೆಗೆ ತರುವ ಉದ್ದೇಶದಿಂದ ಇಂದು $3.6 ಬಿಲಿಯನ್‌ ಹೂಡಿಕೆಯನ್ನು ಸಂಗ್ರಹಿಸಿದ್ದಾಗಿ ಹೇಳಿದೆ. ಈ ಹೂಡಿಕೆಯನ್ನು ಪ್ರಮುಖ ಹೂಡಿಕೆದಾರರದಾದ ಜಾಗತಿಕ ಹೂಡಿಕೆದಾರರಾದ ಸವರಿನ್‌ ಫಂಡುಗಳು, ಖಾಸಗಿ ಈಕ್ವಿಟಿ ಮತ್ತು ವಾಲ್‌ಮಾಟ್‌Fನ ಪೂರಕ ಹೂಡಿಕೆ ವ್ಯವಸ್ಥೆಗಳ ಮೂಲಕ ಮಾಡಲಾಗಿದೆ. ಈ ಹೂಡಿಕೆ ಕ್ರೋಡೀಕರಣವನ್ನು ಹಣಕಾಸು ಹೂಡಿಕೆದಾರರಾದ ಜಿಐಸಿ, ಕೆನಡಾದ ನಿವೃತ್ತಿ ವೇತನ ಹೂಡಿಕೆ ಮಂಡಳಿ (ಸಿಪಿಪಿ ಇನ್‌ವೆಸ್ಟ್‌ಮೆಂಟ್ಸ್‌), ಸಾಫ್ಟ್‌ ಬ್ಯಾಂಕ್‌ ವಿಷನ್‌ ಫಂಡ್‌ 2 ಮತ್ತು ವಾಲ್‌ಮಾಟ್‌F ಮತ್ತು ಡಿಸ್‌ರಪ್ಟ್‌ ಎಡಿಯ ಸವರಿನ್‌ ಫಂಡಗಳು, ಖತಾರ್‌ ಇನ್‌ವೆಸ್ಟ್‌ ಮೆಂಟ್‌ ಅಥಾರಿಟಿ, ಖಝಾನಾ ನಾಸಿನಲ್‌ ಬೆರ್ಹಾದ್, ಮರ್ಕ್ಯೂಯಿ ಇನ್‌ವೆಸ್ಟರ್ಸ್‌ ಟೀಸೆಂಟ್‌, ವಿಲ್ಲೋಗ್ಬಿ ಕ್ಯಾಪಿಟಲ್‌, ಅಂತಾರಾ ಕ್ಯಾಪಿಟಲ್‌, ಫ್ರಾಂಕ್ಲಿನ್‌ ಟೆಂಪ್ಲೆಟನ್‌ ಮತ್ತು ಟೈಗರ್‌ ಗ್ಲೋಬಲ್‌ಗಳ ಮೂಲಕ ಸಂಗ್ರಹಿಸಲಾಗಿದೆ. ಈ ಗುಂಪುಗಳ ಒಟ್ಟು ಹೂಡಿಕೆ ಅನಂತರದ ಮೊತ್ತವು $37.6 ಬಿಲಿಯನ್‌ ಆಗಿರಲಿದೆ.

ಈ ಬೆಳವಣಿಗೆಯ ಕುರಿತಾಗಿ ಪ್ರತಿಕ್ರಿಯಿಸಿದ ಫ್ಲಿಪ್‌ಕಾರ್ಟ್‌ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಕಲ್ಯಾಣ್‌ ಕೃಷ್ಣಮೂರ್ತಿ ಅವರು, “ಗ್ರಾಹಕರಿಗೆ ಸುಲಭ ಲಭ್ಯತೆ ಮತ್ತು ಮೌಲ್ಯಗಳೊಂದಿಗೆ ಭಾರತದಲ್ಲಿ ಗ್ರಾಹಕ ಅಂತರ್ಜಾಲ ಪರಿಸರ ವ್ಯವಸ್ಥೆಯನ್ನು ಪರಿವರ್ತನೆಗೊಳಿಸಲು ಫ್ಲಿಪ್‌ಕಾರ್ಟ್‌ ಬದ್ಧವಾಗಿದೆ. ಹೂಡಿಕೆದಾರರ ಹೂಡಿಕೆಯು ಭಾರತದಲ್ಲಿ ಡಿಜಿಟಲ್‌ ವಾಣಿಜ್ಯದ ಮೇಲಿನ ಭರವಸೆ ಮತ್ತು ಫ್ಲಿಪ್‌ಕಾರ್ಟ್‌ ಮೇಲಿನ ಭರವಸೆಯನ್ನು ಪ್ರತಿಬಿಂಬಿಸುತ್ತದೆ. ನಾವು ಗ್ರಾಹಕರ ಸೇವೆಯಲ್ಲಿ ತೊಡಗಿಕೊಂಡಿರುವಂತೆ ಇದು ಕಿರಾಣಿ ಅಂಗಡಿಗಳೂ ಸೇರಿದಂತೆ ಭಾರತದ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ವ್ಯಾಪಾರ ನಡೆಸುವ ಉದ್ಯಮದಾರರ ಅಭಿವೃದ್ಧಿಗೆ ನೆರವು ನೀಡಲಿದೆ. ಇದರೊಂದಿಗೆ ನಾವು ಮೇಡ್‌ ಇನ್‌ ಇಂಡಿಯಾ ತಂತ್ರಜ್ಞಾನದೊಂದಿಗೆ ಹೊಸ ಹೊಸ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ಗ್ರಾಹಕರ ಅನುಭವಗಳನ್ನು ಪರಿವರ್ತಿಸುವುದರೊಂದಿಗೆ ವಿಶ್ವದರ್ಜೆಯ ಪೂರೈಕೆ ವ್ಯವಸ್ಥೆಯೊಂದನ್ನು ನಡೆಸುವಲ್ಲಿ ಮುಂದುವರಿಯಲಿದ್ದೇವೆ” ಎಂದು ಹೇಳಿದ್ದಾರೆ.

ಭಾರತದ ಡಿಜಿಟಲ್‌ ವಾಣಿಜ್ಯಿಕ ವ್ಯವಸ್ಥೆಯ ಮೇಲೆ ಜಾಗತಿಕ ಹೂಡಿಕೆದಾರರಿಗಿರುವ ನಂಬಿಕೆಯನ್ನು ಇದು ಪ್ರತಿಬಿಂಬಿಸುತ್ತಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್‌, ಭಾರತದಲ್ಲಿ ತ್ವರಿತವಾಗಿ ಬೆಳವಣಿಗೆಯಾಗುತ್ತಿರುವ ಗ್ರಾಹಕ ವಲಯಕ್ಕೆ ಬೇಕಾದ ರೀತಿಯಲ್ಲಿ ಜನರು, ತಂತತ್ರಜ್ಞಾನ, ಪೂರೈಕೆ ವ್ಯವಸ್ಥೆ, ಮೂಲಸೌಕರ್ಯ ವ್ಯವಸ್ಥೆಗಳನ್ನು ಸ್ಥಾಪಿಸುವತ್ತ ಮುಂದುವರಿಯಲಿದೆ. ಅನೌಪಚಾರಿಕ ವಾಣಿಜ್ಯ ವಿಭಾಗಗಳಿಗೆ ತಂತ್ರಜ್ಞಾನದ ಶಕ್ತಿಯನ್ನು ಬಳಸುವುದಕ್ಕಾಗಿ ಈ ಗುಂಪು ನೆರವು ನೀಡಲಿದೆ. ಅಂದರೆ ಫ್ಯಾಶನ್‌ ಕ್ಷೇತ್ರದೊಂದಿಗೆ ಕೆಲಸ ಮಾಡುವುದರೊಂದಿಗೆ ಈವರೆಗೆ ತಂತ್ರಜ್ಞಾನದ ಅವಕಾಶಗಳನ್ನು ಪಡೆಯದ ಸಣ್ಣ ಉದ್ದಿಮೆದಾರರಿಗೆ ಅವಕಾಶವನ್ನು ನೀಡಲಿದೆ. ವಿಸ್ತೃತ ದಿನಸಿ ವಹಿವಾಟಿನಿಂದ ತೊಡಗಿ, ಕಟ್ಟ ಕಡೆಯ ಪ್ರದೇಶದ ತನಕ ವಿತರಣೆಯೊಂದಿಗೆ ಗುಂಪು, ಕಿರಾಣಿ ಅಂಗಡಿಗಳನ್ನು ಡಿಜಟಲೀಕರಣ ಮಾಡುವ ಮತ್ತು ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಹೇಳಿದ್ದಾರೆ.

“ಸಿಪಿಪಿ ಹೂಡಿಕೆಯ ಮೂಲ ಉದ್ದೇಶ ಏಷ್ಯಾದ ಗೃಹ ಬಳಕೆಯ ಮೇಲೆ ಕೇಂದ್ರೀಕೃತವಾಗಿದೆ. ಮುಂದಿನ ದಶಕಗಳಲ್ಲಿ ಮಧ್ಯಮ ವರ್ಗದ ಬೆಳವಣಿಗೆ, ಹೆಚ್ಚಿದ ಇಂಟರ್ನೆಟ್‌ ಬಳಕೆಯ ಮೂಲಕ ಭಾರತವು ಜಾಗತಿಕ ಮಟ್ಟದಲ್ಲಿ ಈ ಬೆಳವಣಿಗೆಯ ಪ್ರಮುಖ ನೇತಾರನಾಗಲಿದೆ ಎಂದು ನಾವು ನಂಬಿದ್ದೇವೆ” ಎಂದು ಸಿಪಿಪಿ ಇನ್‌ವೆಸ್ಟ್‌ ಮೆಂಟ್‌ನ ಏಷ್ಯಾದ ಫಂಡಮೆಂಟಲ್‌ ಈಕ್ವಿಟೀಸ್‌ನ ಮುಖ್ಯಸ್ಥರು ಮತ್ತು ಆಡಳಿತ ನಿರ್ದೇಶಕರಾದ ಆಗಸ್‌ ಟ್ಯಾಂಡಿಯೊನೊ ಅವರು ಹೇಳಿದ್ದಾರೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಹೂಡಿಕೆಯು ಉದ್ಯಮದ ಮುಖ್ಯಸ್ಥರಿಗೆ ದೀರ್ಘಕಾಲ ಬಂಡವಾಳವನ್ನು ಒದಗಿಸಲು ನೆರವು ನೀಡುತ್ತದೆ. ಇದರೊಂದಿಗೆ ನಾವು ಭಾರತದ ಬೆಳೆಯುತ್ತಿರುವ ಇ ಕಾಮಸ್‌F ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್‌ನ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ” ಎಂದು ಹೇಳಿದ್ದಾರೆ.

ಸಾಫ್ಟ್‌ ಬ್ಯಾಂಕ್‌ನ ಹೂಡಿಕೆ ಸಲಹೆಗಾರರ ಪಾಲುದಾರರಾದ ಲ್ಯಾಡಿಯಾ ಜೆಟ್‌ ಅವರು ಹೇಳುವಂತೆ ಏಷ್ಯಾದ ಅತಿ ದೊಡ್ಡ ಇ-ಕಾಮರ್ಸ್‌ ಹೂಡಿಕೆಯ ನಮ್ಮ ವೇದಿಕೆ ಮೂಲಕ ಈ ಪ್ರದೇಶದಲ್ಲಿ ಡಿಜಿಟಲ್‌ ವಾಣಿಜ್ಯವು ಬೆಳವಣಿಗೆ ಪಥದಲ್ಲಿರುವುದನ್ನು ಸಾಫ್ಟ್‌ ಬ್ಯಾಂಕ್‌ ಮಂಡಳಿ ಗಮನಿಸಿದೆ. ಇದು ಯುವ ಗ್ರಾಹಕರ ಬಯಕೆಯಂತೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಯ್ಕೆಯನ್ನು ಮಾಡಲು ಪೂರಕವಾಗಿದ್ದು, ಈ ಮೂಲಕ ಫ್ಲಿಪ್‌ಕಾರ್ಟ್‌ ಭಾರತ 5 ಟ್ರಿಲಿಯನ್‌ ಆರ್ಥಿಕತೆಯನ್ನು ಹೊಂದಬೇಕೆನ್ನುವ ಕನಸಿಗೆ ಪೂರಕವಾಗಿದೆ” ಎಂದಿದ್ದಾರೆ.

“ಫ್ಲಿಪ್‌ಕಾರ್ಟ್‌ನಲ್ಲಿ ನಾವೇಕೆ ಹೂಡಿಕೆ ಮಾಡಿದ್ದೇವೆ ಮತ್ತು ಅದನ್ನು ಇನ್ನೂ ಮುಂದುವರಿಸಿದ್ದೇವೆ ಎಂದರೆ, ಫ್ಲಿಪ್‌ಕಾರ್ಟ್‌ನ ವ್ಯವಹಾರವು ದೊಡ್ಡ ವ್ಯವಹಾರವಾಗಿದ್ದು ಅಪೂರ್ವ ಬೆಳವಣಿಗೆಯನ್ನು ಹೊಂದಿದೆ. ಜತೆಗೆ ಇದು ಒಟ್ಟಾರೆಯಾಗಿ ಭಾರತದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ” ಎಂದು ವಾಲ್‌ಮಾರ್ಟ್ ಇಂಟರ್ ನ್ಯಾಷನಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರಾದ ಜ್ಯೂಡಿತ್‌ ಮೆಕೆನ್ನಾ ಅವರು ಹೇಳಿದ್ದಾರೆ.

“ಭಾರತದಲ್ಲಿ ಡಿಜಿಟಲೀಕರಣ ಮತ್ತು ಇ ಕಾಮರ್ಸ್‌ನ ಅದ್ಭುತ ಬೆಳವಣಿಗೆಯ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ. ಈ ಬೆಳವಣಿಗೆಯಿಂದ ಲಾಭ ಪಡೆಯಲು ಫ್ಲಿಪ್‌ಕಾರ್ಟ್‌ ಉತ್ತಮ ಸ್ಥಾನದಲ್ಲಿದೆ ಎಂಬುದನ್ನು ನಾವು ನಂಬಿದ್ದೇವೆ” ಎಂದು ಫ್ರಾಂಕ್ಲಿನ್‌ ಟೆಂಪಲ್ಟನ್‌ ಎಮರ್ಜಿಂಗ್‌ ಮಾರ್ಕೆಟ್ಸ್‌ ಈಕ್ವಿಟಿಯ ಅಧಿಕಾರ ಕ್ಷೇತ್ರ ನಿರ್ವಹಣೆಯ ನಿರ್ದೇಶಕ ಸುಕುಮಾರ್‌ ರಾಜಾಹ್‌ ಹೇಳಿದ್ದಾರೆ.

ಭಾರತದಾದ್ಯಂತ ಫ್ಲಿಪ್‌ಕಾರ್ಟ್‌ 350 ಮಿಲಿಯನ್‌ ನೋಂದಾಯಿತ ಬಳಕೆದಾರರನ್ನು ಹೊಂದಿದ್ದು, ಪ್ರಮುಖ ವಿಭಾಗಗಳಾದ ಫ್ಯಾಶನ್‌, ಪ್ರವಾಸ, ದಿನಸಿ ವಸ್ತುಗಳು ಮುಂತಾದುವುಗಳಲ್ಲಿ ಹೂಡಿಕೆ ಮಾಡುತ್ತಿದೆ. ಇದು ಭಾರತದ ಪ್ರಬುದ್ಧಗೊಳ್ಳುತ್ತಿರುವ ಡಿಜಿಟಲ್‌ ವಾಣಿಜ್ಯ ಉದ್ಯಮ ಕ್ಷೇತ್ರವನ್ನು ಪ್ರತಿಬಿಂಬಿಸುತ್ತದೆ. ಸಮೂಹದ ಫ್ಯಾಶನ್‌ ಘಟಕವಾದ ಮಿಂತ್ರಾ, ಈ ವಿಭಾಗದಲ್ಲಿ ನಾಯಕನಾಗಿ ಹೊರಹೊಮ್ಮಿದ್ದು, ಫ್ಲಾಶನ್‌ ಕ್ಷೇತ್ರದಲ್ಲಿ ಸಮಗ್ರ ಮತ್ತು ಅತ್ಯಾಧುನಿಕ ಆಯ್ಕೆಗಳೊಂದಿಗೆ ಇತ್ತೀಚಿನ ಸಂಗ್ರಹಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಇದರೊಂದಿಗೆ ಗುಂಪಿನ ಮೂಲ ಸಾಮರ್ಥ್ಯವಾದ ಫ್ಲಿಪ್‌ಕಾರ್ಟ್‌ನ ಪೂರೈಕೆ ವ್ಯವಸ್ಥೆ ಇಕಾರ್ಟ್‌, ವೇರ್‌ಹೌಸ್‌ಗಳಿಗೆ ಮೂಲಸೌಕರ್ಯ ಹೂಡಿಕೆಯೊಂದಿಗೆ 1ಲಕ್ಷಕ್ಕೂ ಮಿಕ್ಕಿ ಉದ್ಯೋಗಿಗಳನ್ನು ಹೊಂದಿದ್ದು, ಭಾರತದ ಶೇ.90ಕ್ಕೂ ಹೆಚ್ಚಿನ ಪಿನ್‌ಕೋಡ್‌ಗಳಿಗೆ ಸಮರ್ಥವಾಗಿ ಪೂರೈಕೆ ಮಾಡುತ್ತಿದೆ.

ಫ್ಲಿಪ್‌ಕಾರ್ಟ್‌ ಮಾರುಕಟ್ಟೆ ತಾಣದಲ್ಲಿ 3 ಲಕ್ಷಕ್ಕೂ ಅಧಿಕ ನೋಂದಾಯಿತ ಮಾರಾಟಗಾರರಿದ್ದು, ಇವರಲ್ಲಿ ಶೇ. 60ರಷ್ಟಕ್ಕೂ ಹೆಚ್ಚಿನವರು 2ನೇ ಹಂತದ ನಗರದವರು. ಜತೆಗೆ ಭಾರತಾದ್ಯಂತ 1.6 ಮಿಲಿಯನ್‌ಗೂ ಅಧಿಕ ಕಿರಾಣಿ ಅಂಗಡಿಯವರೊಂದಿಗೆ ಪ್ಲಿಪ್‌ಕಾರ್ಟ್‌ ಸಂಯೋಜನೆ ಹೊಂದಿದ್ದು, ಕೊನೆಯವರೆಗೆ ಪೂರೈಕೆ ವ್ಯವಸ್ಥೆ, ಕಿರಾಣಿಗಳಿಗೆ ಪೂರಕ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ. ಸಣ್ಣ ಉದ್ದಿಮೆದಾರರಿಗೆ, ಸಣ್ಣ ಸಮುದಾಯ ಇತ್ಯಾದಿ 7.5 ಲಕ್ಷಕ್ಕೂ ಅಧಿಕ ಕುಶಲಕರ್ಮಿಗಳಿಗೆ `ಫ್ಲಿಪ್‌ಕಾರ್ಟ್‌ ಸಮರ್ಥ್’ ಕಾರ್ಯಕ್ರಮದ ಮೂಲಕ ನೆರವು ನೀಡುತ್ತಿದೆ.

ಪ್ರಮುಖ ಪೇಮೆಂಟ್‌ ಆಪ್‌ ಆದ ಫೋನ್‌ಪೇಯಲ್ಲಿ ಕೂಡ ಗುಂಪು ಹೆಚ್ಚಿನ ಪಾಲುದಾರಿಕೆಯನ್ನು ಹೊಂದಿದೆ. ಇದರಲ್ಲಿ 300 ಮಿಲಿಯನ್‌ಗೆ ಮಿಕ್ಕಿ ಬಳಕೆದಾರರಿದ್ದು 2, 3ನೇ ಹಂತದ ನಗರಗಳಲ್ಲೇ ಮಾಸಿಕ 1 ಬಿಲಿಯನ್‌ ವಹಿವಾಟು ನಡೆಯುತ್ತಿದೆ.

ಫ್ಲಿಪ್‌ಕಾರ್ಟ್‌ ಬಗ್ಗೆ: ಭಾರತದ ಪ್ರಮುಖ ಡಿಜಿಟಲ್‌ ವಾಣಿಜ್ಯ ವಹಿವಾಟು ವ್ಯವಸ್ಥೆಗಳಲ್ಲಿ ಫ್ಲಿಪ್‌ಕಾರ್ಟ್‌ ಒಂದಾಗಿದೆ. ಈ ಕಂಪೆನಿ ಗ್ರೂಪ್‌ ಫ್ಲಿಪ್‌ಕಾರ್ಟ್‌, ಮಿಂತ್ರಾ, ಫ್ಲಿಪ್‌ಕಾರ್ಟ್‌ ಹೋಲ್‌ಸೇಲ್‌ ಮತ್ತು ಕ್ಲಿಯರ್‌ ಟ್ರಿಪ್‌ಗಳನ್ನು ಹೊಂದಿದೆ. ಈ ಗ್ರೂಪ್‌ ಭಾರತದ ಪ್ರಮುಖ ಪೇಮೆಂಟ್‌ ಆಪ್‌ ಆದ ಫೋನ್‌ಪೇನಲ್ಲಿ ಹೆಚ್ಚಿನ ಗರಿಷ್ಠ ಹೂಡಿಕೆಯನ್ನು ಹೊಂದಿದೆ.

2007ರಲ್ಲಿ ಆರಂಭವಾದ ಫ್ಲಿಪ್‌ಕಾರ್ಟ್ ಲಕ್ಷಾಂತರ ಗ್ರಾಹಕರು, ಮಾರಾಟಗಾರರು, ವ್ಯಾಪಾರಿಗಳು, ಮತ್ತು ಸಣ್ಣ ಉದ್ದಿಮೆಗಳಿಗೆ ಭಾರತದ ಡಿಜಿಟಲ್‌ ಕ್ರಾಂತಿಯ ಭಾಗವಾಗಿಸಲು ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿ 350 ಮಿಲಿಯನ್‌ಗೂ ಅಧಿಕ ನೋಂದಾಯಿತ ಗ್ರಾಹಕರಿದ್ದು, ಸುಮಾರು 80 ಕ್ಕೂ ಹೆಚ್ಚು ವಿಭಾಗಗಳಲ್ಲಿ 150 ಮಿಲಿಯನ್‌ಗಿಂತ ಮೇಲ್ಪಟ್ಟು ಉತ್ಪನ್ನಗಳನ್ನು ಹೊಂದಿದೆ. ತನ್ನ ಗುಂಪಿನ ಕಂಪೆನಿಗಳೊಂದಿಗೆ ಫ್ಲಿಪ್‌ಕಾರ್ಟ್‌ ತಂತ್ರಜ್ಞಾನದ ಮೂಲಕ ವಾಣಿಜ್ಯ ವಹಿವಾಟನ್ನು ಪರಿವರ್ತಿಸಲು ಬದ್ಧವಾಗಿದೆ. ಹೆಚ್ಚಿನ ಮಾಹಿತಿಗಾಗಿ media@flipkart.com ಗೆ ಇಮೇಲ್‌ ಮಾಡಿ.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

15 mins ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

3 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

8 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

8 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

10 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420