ಶಹಾಬಾದ:ನಗರದಲ್ಲಿ ಡೆಂಗ್ಯೂ ಕಂಡ ಬಂದ ಹಿನ್ನೆಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಸಿಬ್ಬಂದಿಗಳ ಜತೆಗೆ ಹಾಗೂ ಆಶಾ ಕಾರ್ಯಕರ್ತರ ಜತೆಗೆ ಡೆಂಗ್ಯೂ ನಿಯಂತ್ರಣದ ಕುರಿತು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಸೊಳ್ಳೆಗಳ ಕಡಿತದಿಂದ ಜನರಿಗೆ ಡೆಂಗ್ಯೂ ಬಂದಿದ್ದು, ಕೂಡಲೇ ಇದನ್ನು ನಿಯಂತ್ರಣ ಮಾಡಲು ನಿತ್ಯ ಬಡಾವಣೆಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ನೀರು ನಿಲ್ಲದಂತೆ , ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ನಗರದಲ್ಲಿ ಕರಪತ್ರಗಳನ್ನು ಹಂಚಬೇಕು.ಶುದ್ಧವಾದ ಕುಡಿಯುವ ನೀರನ್ನು ಒದಗಿಸಬೇಕು.ಕುಡಿಯುವ ನೀರಿನ ಟ್ಯಾಂಕ್‌ನ ಕ್ಲೋರಿನೇಷನ್ ಅರಿವು ಮೂಡಿಸಲು ನಗರಸಭೆಯ ಪೌರಾಯುಕ್ತರಿಗೆ ತಿಳಿಸಲಾಗುವುದು.
ನಗರದ ಡೆಂಗ್ಯೂ ಬಾಧಿತ ಪ್ರದೇಶಗಳ ಪ್ರತಿ ಮನೆಮನೆಗೆ ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಭೇಟಿ ನೀಡಿ ಡೆಂಗ್ಯೂ ರೋಗ ನಿಯಂತ್ರಣ ನಿಮಿತ್ತ ಲಾರ್ವಾ ಸಮೀಕ್ಷೆ ಮಾಡಿ ಲಾರ್ವಾ ಪತ್ತೆ ಮಾಡಿ ನಾಶಪಡಿಸುವ ಬಗ್ಗೆ ಆರೋಗ್ಯ ಶಿಕ್ಷಣ ನೀಡುತ್ತಾ ಡೆಂಗ್ಯೂ ನಿಯಂತ್ರಣ ಕುರಿತು ಅರಿವು ಮೂಡಿಸಬೇಕು. ಮನೆ ಭೇಟಿ ಸಮಯದಲ್ಲಿ ಸಾರ್ವಜನಿಕರ ಮನೆಯಲ್ಲಿ ನೀರಿನ ಡ್ರಮ್ ಇತರ ನೀರು ತುಂಬಿಡುವ ಸಾಧನಗಳಿದ್ದರೆ ಅವುಗಳಲ್ಲಿ ಕ್ಲೋರಿನ್ ಗುಳಿಗೆಗಳನ್ನು ಹಾಕಲು ತಿಳಿಸಿದರು.
ಅಲ್ಲದೇ ಮನೆಯ ಸುತ್ತಮುತ್ತಲಿನ ಆವರಣದಲ್ಲಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕು. ಏಳು ದಿನಗಳ ಒಳಗಾಗಿ ನೀರನ್ನು ಬದಲಾವಣೆ ಮಾಡಬೇಕೆಂದು ಅವರಿಗೆ ಮನದಟ್ಟು ಮಾಡಿ.ಒಂದು ವೇಳೆ ಏಳು ದಿನಗಳಿಗಿಂತ ಹೆಚ್ಚು ದಿನಗಳ ವರೆಗೆ ನೀರು ಇದ್ದರೇ ಸೊಳ್ಳೆಗಳ ಸಂತಾನ್ಪೋತ್ತಿಗೆ ಕಾರಣವಾಗುತ್ತದೆ.ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕಾಗಿ ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಇತರ ವಸ್ತುಗಳನ್ನು ಬಳಸಿ ಡೆಂಗ್ಯೂ ರೋಗವನ್ನು ಬಾರದಂತೆ ತಡೆಗಟ್ಟಬಹುದು. ಈ ಎಲ್ಲಾ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸಬವಾಗಬೇಕೆಂದು ಹೇಳಿದರು. ಅಧೀಕ್ಷಕ ಮೋಹನ ಗಾಯಕವಾಡ, ಯೂಸುಫ್ ನಾಕೇದಾರ, ಆಶಾ ಕಾರ್ಯಕರ್ತೆಯರು ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…