ಬಿಸಿ ಬಿಸಿ ಸುದ್ದಿ

ತಲೆಬುಡವಿಲ್ಲದ ಪಂಚಾಂಗವೆಂಬುದೊಂದು‌ಬೆದರು ಗೊಂಬೆ

ಜೇವರ್ಗಿ: ಸುಳ್ಳುಗಳಿಂದ ತುಂಬಿರುವ, ವೈಜ್ಞಾನಿಕತೆಯೇ ಇಲ್ಲದ ತಲೆ ಬುಡ ಇಲ್ಲದ ಸಂಗತಿಗಳ ಶೇಖರಣೆಯೇ ಪಂಚಾಂಗ. ದುರ್ಬಲ ಮನಸ್ಸಿನ ವ್ಯಕ್ತಿಯನ್ನು ತಮ್ಮೆಡೆಗೆ ಸೆಳೆದು ಅವರಿಂದ ಹಣ ವಸೂಲಿ ಮಾಡಿಕೊಂಡು ಬದುಕುವವರ ಸಹವಾಸ ಸಾಕು, ನಿಮ್ಮ ಪಂಚೇಂದ್ರೀಯಗಳ ಬಗೆಗೆ ಗಮನ ಹರಿಸಿ ಎಂದು ಖ್ಯಾತ ಪವಾಡ ಬಯಲು ತಜ್ಞ, ವಿಚಾರವಾದಿ ಡಾ. ಹುಲಿಕಲ್ ನಟರಾಜ ನುಡಿದರು.

ಜೇವರ್ಗಿಯ ಬಸವ ಕೇಂದ್ರದವರು ಏರ್ಪಡಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಭಾಗವಹಿಸಿದ್ದರು. ಮಕ್ಕಳಿಗೆ ಮೋಬೈಲ್ ಕೊಡಬೇಡಿ. ಟಿ.ವಿ. ಎಂಬ ರಾಕ್ಷಸನ ಹತ್ತಿರ ಬಿಡಬೇಡಿ. ಸಿನೇಮಾ ಗೀಳು ಅನಾರೋಗ್ಯಕರ. ಹಾಗೂ ಕ್ರಿಕೇಟ್ ಹುಚ್ಚು ಬೆಳೆಯದಂತೆ ನೋಡಿಕೊಳ್ಳಿರಿ.

ತಂದೆ ತಾಯಿಗಳೆ ಮಗುವಿಗೆ ಮಾರ್ಗದರ್ಶಕರು ಎಂಬುದು ಮರೆಯದಿರಿ. ನಮ್ಮ ಚಟುವಟಿಕೆಗಳನ್ನು ನೋಡಿ ಮಕ್ಕಳು ಅವನ್ನು ಅನುಕರಿಸುತ್ತವೆ. ಆದ್ದರಿಂದ ಪಾಲಕರು ಮಕ್ಕಳ ಜೊತೆ ಸರಿಯಾಗಿ ವರ್ತಿಸಿ. ಮಕ್ಕಳ ಮಾರ್ಗದರ್ಶಕತನ ಬೆಳೆಸಿಕೊಳ್ಳಿ. ಸಕಾರಾತ್ಮಕ ಚಿಂತನೆಗಳು ನಮ್ಮನ್ನು ಹೆದ್ದಾರಿಗೆ ಕರೆದುಕೊಂಡು ಹೋಗಬಲ್ಲವು ಎಂಬುದು ನೆನಪಿರಲಿ. ಬುದ್ದ ಬಸವ ಅಂಬೇಡ್ಕರ್ ಸಕಾರಾತ್ಮಕ ಚಿಂತನೆಗಳಿಂದಲೆ ಸತ್ತೂ ಜೀವಂತವಾಗಿದ್ದಾರೆ ಎಂದು ವಿವರಿಸಿದರು.  ವಿದ್ಯಾವಂತ, ಬುದ್ದಿವಂತಿಕೆಗಿಂತ ನಮ್ಮ ಸಮಾಜಕ್ಕೆ ಇಂದು ಪ್ರಜ್ಞಾವಂತಿಕೆ ಅಗತ್ಯವಾಗಿದೆ. ಯಾವುದೆ ಸಂಗತಿಯನ್ನು ವಿದ್ಯಾವಂತ ಅರಿತುಕೊಳ್ಳುತ್ತಾನೆ. ಬುದ್ದಿವಂತ ಅದನ್ನು ಗಮನಿಸಿ ದೂರ ಸರಿದು ಹೋಗುತ್ತಾನೆ.‌ಆದರೆ ಪ್ರಜ್ಣಾವಂತ ಆ ಕೆಟ್ಟ ಸಂಗತಿಯನ್ನು ದೂರ ಸರಿಸಿ ಜನರ ದಾರಿಗೆ ಅಡ್ಡಿಯಾಗಿರುವುದನ್ನು ತಪ್ಪಿಸುತ್ತಾನೆ ಎಂದು ಸಭೆಗೆ ತಿಳಿಸಿದರು.

ದೇವರು ದೆವ್ವಗಳ ಗೊಡವೆಯೇ ಬೇಡ. ಅವು ಇಲ್ಲವೇ ಇಲ್ಲ. ದೇವರು ನಮ್ಮನ್ನು ಸೃಷ್ಟಿಸಿದ್ದಾನೋ ಇಲ್ಲವೋ ಆದರೆ ಅವುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನಾವು ಹುಟ್ಟಿಸಿದ್ದೇವೆ. ಭಯ ಬಿಸಾಕಿ. ಕುಟುಂಬವನ್ನು ಪ್ರೀತಿಸಿ. ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಿ, ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ. ಯಾವುದಕ್ಕೂ ಹೆದರದೆ ಮುನ್ನುಗ್ಗಿ ನಡೆಯಿರಿ. ಬದುಕು ನಿಮ್ಮದಾಗುತ್ತದೆ. ಭಯದ ಬದುಕು ಬದುಕಲ್ಲ. ಜೀವನ ನಿಮಗೆ ಪ್ರಕೃತಿಕೊಟ್ಟ ಅಪರೂಪದ ಅವಕಾಶ. ಚೆನ್ನಾಗಿ ಜೀವಿಸಿ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಬುದ್ದ ಬಸವ ಅಂಬೇಡ್ಕರರ ಹೆಸರನ್ನು ಸಾಕಷ್ಟು ಹೇಳಿದ್ದಾಯ್ತು. ಇನ್ನಾದರೂ ಅವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಪಂಚಾಂಗ,ವಾಸ್ತು, ತಿಥಿ, ನಕ್ಷತ್ರ ಹೇಳುವವರನ್ನು ನಿಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳಬೇಡಿ ಎಂದವರು ಸಲಹೆ ನೀಡಿದರು. ವಸ್ತುಸ್ಥಿತಿ ಅರಿತುಕೊಳ್ಳದ ಮನ ಭಯಭೀತವಾಗುತ್ತದೆ. ಅಲ್ಲಿ ಯೋಚನೆಗೆ ಅವಕಾಶವೇ ಇರೋದಿಲ್ಲ. ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿ.‌ಪ್ರಶ್ನಿಸಿ. ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡಿ . ಜ್ಞಾನವನ್ನು ಬೆಳೆಸಿಕೊಳ್ಳಿ. ಬೌದ್ಧಿಕ ದಾರಿದ್ರ್ಯ ತೊಲಗುತ್ತದೆ. ಮುಲ್ಲಾ ಪಾದ್ರಿ ಪೂಜಾರಿಗಳು ಸಮಾಜ ಕಂಟಕರು. ಅವರೊಂದಿಗೆ ಯಾವುದೆ ಸಂಬಂಧ ಇಟ್ಟುಕೊಳ್ಳಬೇಡಿ ಎಂದವರು ಮಾರ್ಮಿಕವಾಗಿ ತಿವಿದರು.

ತಮ್ಮ ಬಾಲ್ಯದ ಹಲವು ಘಟನೆಗಳ ಮೂಲಕ ಅಜ್ಞಾನದಿಂದ ಅರಿವುಗೆಟ್ಟ ಪ್ರಸಂಗಗಳನ್ನು ತಿಳಿಸಿದರು. ವಚನಗಳು ನಮ್ಮ ಅಜ್ಞಾನವನ್ನು ತೊಲಗಿಸುತ್ತವೆ. ಮಕ್ಕಳಿಗೆ ವಚನಗಳನ್ನು ಒತ್ತಾಯದಿಂದಾದರೂ ಕಲಿಸಿ. ಅವು ಅವರ ಬದುಕಿಗೆ ಬುತ್ತಿಯಾಗುತ್ತವೆ ಎಂದು‌ಮನಂಬುಗುವಂತೆ ಸಭೆಗೆ ವಿವರಿಸಿದರು.

ಬಸವ ಕೇಂದ್ರದ ಶರಣಬಸವ ಕಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಮಲ್ಲಿಕಾರ್ಜುನ, ಬಸವರಾಜ ಶಿವನಗೌಡ ಹಂಗರಗಿ ,ವಿಶ್ವನಾಥ ಡೋಣೂರ ಇದ್ದರು. ಸಭೆಯಲ್ಲಿ ನೀಲಾಂಬಿಕೆ ಅಕ್ಕನ ಬಳಗದ ಸರ್ವ ಸದಸ್ಯರು ಹಾಜರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago