ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಸೆಮಿಸ್ಟರ್‌ ರದ್ದುಗೊಳ್ಳಿಸಲು ಆಗ್ರಹಿಸಿ ಪ್ರತಿಭಟನೆ

ಅಫಜಲಪೂರ: ಇಂದು ತಾಲುಕಿನಲ್ಲಿ ಪದವಿ, ಸ್ನಾತಕೋತ್ತರ, ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳ ಫಲಕ ಹಿಡಿದು ಅಂಬೇಡ್ಕರ್ ವೃತ್ ದಿಂದ ತಹಸಲ್ದಾರ್ ಕಛೇರಿ ವರಗೂ ಪ್ರತಿಭಟನಾ ಮೇರವಣಿಗೆ ನಡೆಸಿ, ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಸಬಾರದು ಹಾಗೂ ಎರಡು ಡೋಸ್ ಉಚಿತ ಲಸಿಕೆ ನಂತರವೆ ಆಫ್ ಲೈನ್ ತರಗತಿಗಳು/ ಪರೀಕ್ಷೆ ನಡೆಸಬೇಕಾಗಿ ಮಾನ್ಯ ತಹಸಿಲ್ದಾರ ರವರ ಮುಖಾಂತರ ಮನವಿ ಪತ್ರ್ರ ಸಲ್ಲಿಸಿ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಒಂದು ಹೋರಾಟವನ್ನು ಉದ್ದೇಶಿಸಿ ಎಐಡಿಎಸ್‌ಓ ತಾಲುಕ ಸಂಚಾಲಕರದ ತುಳಜಾರಾಮ ಎನ್.ಕೆ ರವರು ಮಾತನಾಡುತ್ತ ಕಳೆದ ತಿಂಗಳಿಂದ ರಾಜ್ಯಾದಾದಂತ್ಯ ಸಾವಿರಾರು ವಿದ್ಯಾರ್ಥಿಗಳು ಹಲವಾರು ಹಂತದ ಹೋರಾಟಗಳು ನಡೆಸುತ್ತಿದ್ದು ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ ರವರಿಗೆ, ರಾಜ್ಯದ ಹಲವಾರು ಸಚಿವರಿಗೆ ಹಾಗೂ ಎಮ್ ಎಲ್ ಎ ಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ, ರಾಜ್ಯಾದ್ಯಾಂತ ನಡೆದ ಗೂಗಲ್ ಫಾರ್ಮ್ ಸಮೀಕ್ಷೆಯಲ್ಲಿ ಸುಮಾರು ೫೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು, ಕಳೆದ ಸೆಮಿಸ್ಟರ್ ಪರೀಕ್ಷೆಯನ್ನು ಪ್ರಚಲಿತ ಸೆಮಿಸ್ಟರ್ ನಡುವೆ ನಡೆಸುವುದು ಬೇಡ ಎಂಬ ಅಭಿಪ್ರಾಯ ಮಂಡಿಸಿದರು. ಈ ಒಂದು ಹೋರಾಟಕ್ಕೆ ರಾಜ್ಯದ ಹಲವಾರು ಪೋಷಕರು,ಶಿಕ್ಷಕರು, ವೈದ್ಯರು, ಶಿಕ್ಷಣ ಪ್ರೇಮಿಗಳು ೧ಲಕ್ಷ ಕ್ಕೂ ಹೆಚ್ಚು ಸಹಿ ಮಾಡಿ ಬೆಂಬಲ ಸೂಚಿಸಿದ್ದಾರೆ. ಹಾಗೂ  ವಿಶ್ವವಿದ್ಯಾಲಯಗಳ ಮಾಜಿ ಕುಲಪತಿಗಳು ಸಹ ಬೆಂಬಲಿಸಿದ್ದಾರೆ.

ಈ ಎಲ್ಲಾ ಹಂತದ ಹೋರಾಟ ನಡೆಸಿದಾಗಿಯೂ  ವಿದ್ಯಾರ್ಥಿಗಳ ಆತಂಕವನ್ನು ಅರಿಯದ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳೂ ಇಲ್ಲಿವರೆಗೂ ವಿದ್ಯಾರ್ಥಿಗಳ ಬೇಡಿಕೆಗಳ ಪರವಾಗಿ ಯಾವುದೇ ನೀರ್ಧಾರವನ್ನು ಕೈಗೊಳ್ಳದೆ ಜಾಣ ಮೌನ ವಹಿಸಿದ್ದಾರೆ ಹಾಗೂ ಎಲ್ಲಾ ರೀತಿಯಾ ಪರೀಕ್ಷೆ ತಯಾರಿಯಲ್ಲಿ ವಿಶ್ವವಿದ್ಯಾಲಯಗಳು ಮುಳುಗಿವೆ. ವಿದ್ಯಾರ್ಥಿಗಳ ಜೀವಗಳನ್ನು ಲೆಕ್ಕಿಸದೇ  ಪರೀಕ್ಷೆಗಳನ್ನು ನಡೆಸುವುದೇ ಇವರ ಪ್ರಮುಖ ಗುರಿಯಾಗಿದೆ. ಇದೆಲ್ಲವನ್ನು ಗಮನಿಸಿದರೆ ವಿದ್ಯಾರ್ಥಿಗಳ  ಬಗ್ಗೆ ಇವರಿಗಿರುವ ಕಾಳಜಿ ಸ್ಪಷ್ಟವಾಗುತ್ತದೆ.

ಈ ಕೂಡಲೇ ಹಿಂದಿನ ೧,೩,ಮತ್ತು೫ನೇ ಸೆಮಿಸ್ಟರನ್ನು ರದ್ದುಗೊಳಿಸಿ. ಮುಂದಿನ ೨,೪,ಮತ್ತು೬ನೇ ಸೆಮಿಸ್ಟರನ್ನು ಎರಡು ಡೋಸ್ ಉಚಿತ ಲಸಿಕೆಗಳನ್ನು ನೀಡಿದ ನಂತರವೆ ಆಫ್ ಲೈನ್ ತರಗತಿಗಳು/ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದರು. ಈ ಹೋರಾಟದಲ್ಲಿ ಸಿದ್ದು ಹುಗರ್, ಸುನಿಲ್, ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.

emedialine

Recent Posts

ಕಲಬುರಗಿ: ಹಜರತ್ ಲಾಡ್ಲೆ ಮಶಾಕ(ರ.ಅ) ದರ್ಗಾದ 669ನೇ ಉರುಸ್ 13 ರಿಂದ

ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…

1 hour ago

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

2 hours ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

2 hours ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

2 hours ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ: ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

2 hours ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420