ಬಿಸಿ ಬಿಸಿ ಸುದ್ದಿ

ಕಲಬುರಗಿ: ಕಾವ್ಯ ಸಂಭ್ರಮಕ್ಕೆ ಚಾಲನೆ

ಕಲಬುರಗಿ: ಸಾಹಿತ್ಯ, ಕಲೆ ಸಂಸ್ಕೃತಿ ಕೇಂದ್ರ ಬಿಂದುವಾದ ‘ಅವಧಿ’ ಅಂತರ್ಜಾಲ ತಾಣ ತನ್ನ ೧೫ನೆಯ ವಸಂತವನ್ನು ಆಚರಿಸುತ್ತಿದೆ.ಈ ಅಂಗವಾಗಿ ಇಡೀ ವರ್ಷ ಸಾಹಿತ್ಯ ಸಂಬಂಧಿ ಉತ್ಸವವನ್ನು ಆಚರಿಸುತ್ತಿದ್ದು ಕಲಬುರ್ಗಿಯಿಂದ ಇದು ಆರಂಭವಾಗಲಿದೆ.

ಕಲಬುರ್ಗಿ ಕವಿಗಳ ಕವಿಗೋಷ್ಠಿಯ ಮೂಲಕ ‘ಕಾವ್ಯ ಯಾನ’ ಆರಂಭವಾಗಲಿದ್ದು ಇದು ನಾಡಿನಾದ್ಯಂತ ಸಂಚರಿಸಲಿದೆ. ಈ ಯಾನವನ್ನು ಖ್ಯಾತ ಸಾಹಿತಿ, ಪತ್ರಕರ್ತ ಜೋಗಿ ಅವರು ಉದ್ಘಾಟಿಸಲಿದ್ದಾರೆ.

ಕಲಬುರ್ಗಿಯ ಈ ಕಾವ್ಯ ಯಾನವನ್ನು ಕಥೆಗಾರರಾದ ಸಂಧ್ಯಾ ಹೊನಗುಂಟಿಕರ್ ಅವರು ಸಂಘಟಿಸಿದ್ದು ಸಾಹಿತಿ, ಅಂಕಣಕಾರ ಮಹಿಪಾಲರೆಡ್ಡಿ ಮುನ್ನೂರ್ ಮತ್ತು ಪ್ರಭಾಕರ ಜೋಶಿ ಅವರು ಆಶಯ ಭಾಷಣ ಮಾಡಲಿದ್ದಾರೆ. ಹಿರಿಯ ಚಿಂತಕ ಡಾ ಬಸವರಾಜ ಕೊಡಗುಂಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

೨೪ ಜುಲೈ ೨೦೨೧, ಶನಿವಾರದಂದು ಸಂಜೆ ೫ ಗಂಟೆಗೆ ಈ ಕವಿಘೋಷ್ಠಿಯು ನೂತನ ಆಡಿಯೋ ವೇದಿಕೆಯಾದ ‘ಕ್ಲಬ್ ಹೌಸ್’ ನಲ್ಲಿ ಜರುಗಲಿದೆ ಎಂದು ‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ತಿಳಿಸಿದ್ದಾರೆ..

ಶಂಕ್ರಯ್ಯ ಘಂಟಿ, ಪ್ರೇಮಾ ಹೂಗಾರ, ವಿಜಯಭಾಸ್ಕರ್ ರೆಡ್ಡಿ, ರುಕ್ಮಿಣಿ ನಾಗಣ್ಣವರ್, ದಸ್ತಗೀರ್ ಸಾಬ್ ನದಾಫ, ಜೋತ್ಸ್ನಾ ಹೇರೂರ್, ಸಂಗಮೇಶ ಸಜ್ಜನ್, ಕಾವ್ಯಶ್ರಿ ಮಹಾಗಾಂವಕರ್, ಸಿದ್ಧು ಛಲವಾದಿ, ಭೀಮರಾವ್ ಹೇಮನೂರ್ ಹಾಗೂ ಕಲಬುರ್ಗಿಯ ಆಸಕ್ತ ಕವಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

‘ಅವಧಿ’ ಅಂತರ್ಜಾಲ ತಾಣವು ಡಿಜಿಟಲ್ ಮಾಧ್ಯಮದಲ್ಲಿ ಸಾಹಿತ್ಯ ಪ್ರೀತಿಯನ್ನು ಹರಡಿದ ಕಾರಣಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅವಧಿಗೆ ಪ್ರಶಸ್ತಿ ನೀಡಿ ಗೌರವಿಸಿದೆ, ಅವಧಿ – ಈ ರೀತಿ ಪ್ರಶಸ್ತಿ ಪಡೆದ ಏಕೈಕ ಅಂತರ್ಜಾಲ ತಾಣ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago