ಕಲಬುರಗಿ: ಅಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣ ತಡೆದು ಗ್ರಾಮದಲ್ಲಿ ಶಾಂತಿ ಭಂಗ ಉಂಟು ಮಾಡುತ್ತಿರುವವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ನಿಂಬರ್ಗಾ ಗ್ರಾಮದಲ್ಲಿ 2017-18ನೇ ಸಾಲಿನ ಹೆಚ್.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ಡಾ. ಬಿ.ಆರ್. ಅ೦ಬೇಡ್ಕರರವರ ವೃತ್ತದಿಂದ ಕಂಬಾರ ಆ೦ಗಡಿಯವರೆಗೆ ರಸ್ತೆಗೆ ಡಾಂಬರೀಕರಣ ಮಂಜೂರು ಆಗಿದ್ದು. ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ರಸ್ತೆಗೆ ಕಾಮಗಾರಿ ನಡೆಸಬೇಕು, ಆದರೆ ಗ್ರಾಮ ಪಂಚಾಯತ ಅಡಳಿತ ಮಂಡಳಿ ರಸ್ತೆ ಅಗಲಿಕರಣದ ವಿಷಯದಲ್ಲಿ ರಾಜಕೀಯ ಬೇರಸಿ, ಠರಾವ್ಪ ಮಾಡಿ ಇಡೀ ಗಾಮದಲ್ಲಿ ಅಶಾಂತಿ ಮೂಡಿಸಿದ್ದಾರೆ ಎಂದು ಹೋರಾಟದ ನೇತೃತ್ವ ವಹಿಸಿದ ಭೀಮಶ್ಯಾ ಕಲ್ಲಪ್ಪ ವಗ್ದರ್ಗಿ ಅವರು ತಿಳಿಸಿದರು.
ತಾಂತ್ರಿಕ ಮಂಜೂರಾತಿ ಪಡೆದಷ್ಟು ರಸ್ತೆ ಅಗಲೀಕರಣ ಮಾಡದೇ ಸುಮಾರು ಬಡವರ, ದಲಿತರ ಮನೆಗಳಿಗೆ ಧಕ್ಕೆ ತರುವ ಮತ್ತು ಬಡವರಿಗೆ ಬೀದಿ ಪಾಲು ಮಾಡಲು ಗ್ರಾಮದ ಕೆಲರಾಜಕೀಯ ಪುಡಾರಿಗಳು ಹೊಂಜು ಹಾಕುತ್ತಲಿದ್ದಾರೆ ಎಂದು ಅವರು ಆರೋಪಿಸಿದರು.
ರಸ್ತೆ ಅಗಲೀಕರಣದ ವಿಷಯದಲ್ಲಿ ವಾಸ್ತವಿಕ ಅಂಶವನ್ನು ಬಜ್ಪಿಟ್ಟು ಕೆಲವರು ತಮ್ಮ ಹಿತಾಸಕ್ತಿಗೋಸ್ಕರ ಹುಸಿ ಧರಣಿ ಸತ್ಯಾಗಹ ಮಾಡಿ ಜನರಿಗೆ ಮತ್ತು ಸರಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲಾ ಆಡಳಿತ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕೆಂದು ಪ್ರತಿಭಟನಾ ಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಾದೇವ ಚಂದ್ರಪ್ಪ ಚಿಂಚೋಳಿ, ಪ್ರಕಾಶ ಬಸವಂತರಾಯ, ಬಸವರಾಜ ನಾಗಣ್ಣ ಬೀಬರಾಣಿ, ಶಾಮರಾವ ಚಂದ್ರಪ್ಪ ಜಿಡಗಿ, ಬಂಡಪ್ಪ ನಿಂಗಪ್ಪ ಬಣಗಾರ, ಇಸ್ಮಾಯಿಲ್ ಸಾಬ ಚೌದರಿ, ಶಂಕರ ಜವಳಿ, ಭೀಮಣ್ಣ ದೊಡ್ಡಮನಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…