ಕಲಬುರಗಿ: ಜಿಲ್ಲೆಯ ವಿವಿಧಭಾಗಗಳಲ್ಲಿ ಬೆಳೆದ ಉದ್ದು, ಹೆಸರು ಬೆಳೆಗಳಲ್ಲಿ ಮಳೆ ನಂತರ ಎಲೆಗಳಲ್ಲಿ ಚಿಬ್ಬು ಹಾಗೂ ಇಟ್ಟಂಗಿ ರೋU ಕಂಡು ಬಂದಿದ್ದು ಹೂ ಹಂತ ತಲುಪುತ್ತಿರುವ ವೇಳೆಯಲ್ಲಿ ಬೆಳೆಗಳ ಸಸ್ಯ ಸಂರಕ್ಷಣೆಯನ್ನು ಸೂರ್ಯನ ಬಿಸಿಲಿನ ಅವದಿಯಲ್ಲಿ ಕೈಗೊಳ್ಳಬೇಕು ಎಂದು ಕಲಬುರಗಿ ಕೃಷಿ ವಿಜ್ಞಾನಕೇಂದ್ರದ (ಸಸ್ಯರೋಗಶಾಸ್ತ್ರ) ವಿಜ್ಞಾನಿ ಡಾ. ಜಹೀರ್‌ಅಹೆಮದ್ ತಿಳಿಸಿದ್ದಾರೆ.
ಮೋಡಕವಿದ ವಾತಾವರಣ ಹಾಗೂ ಮಳೆ ದಿನಗಳು ಬೆಳೆದ ಉದ್ದು, ಹೆಸರು ಹೊಲಗಳಲ್ಲಿ ಈ ರೋಗ ಕಂಡು ಬಂದಿದೆ. ಬೇರು ವ್ಯಾಪ್ತಿ ಉಸಿರಾಡುವಂತೆ ಹಾಗೂ ಸಸ್ಯ ಬೆಳೆಯುವಂತೆ ಸಂರಕ್ಷಣಾ ಕ್ರಮಗಳನ್ನು ರೈತರು ಕೈಗೊಳ್ಳಬೇಕು .ಉದ್ದು ಮತ್ತು ಹೆಸರು ಎರಡು ಬೆಳೆಗಳಲ್ಲಿ ಎಲೆಚುಕ್ಕಿ, ಚಿಬ್ಬುರೋಗ, ಇಟ್ಟಂಗಿ ರೋಗ ಕಂಡು ಬಂದಲ್ಲಿ ಹೆಕ್ಸಾಕೋನಾಜಾಲ್ ೧ ಮಿ.ಲಿ. ಅಥವಾ ಕಾರ್ಬಡೈಜಿಂ ೧ ಗ್ರಾ. ಅಥವಾ ಮ್ಯಾಂಕೋಜೆಬ್ ೨ ಗ್ರಾ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.
ಬದಲಾಗುತ್ತಿರುವ ಹವಾಮಾನ ದಿನಗಳಲ್ಲಿ ಗಿಡದ ಆರೋಗ್ಯಕ್ಕೆ ಒತ್ತು ನೀಡಬೇಕು. ಹೊಲಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೂಕ್ತ ಬಸಿಗಾಲುವೆ ನಿರ್ಮಿಸಿ ದ್ವಿದಳ ಧಾನ್ಯ ಬೆಳೆಗಳಾದ ಉದ್ದು, ಹೆಸರು ತೊಗರಿ ಬೆಳೆಗಳಿಗೆ ಪಲ್ಸ್ ಮ್ಯಾಜಿಕ್ ಎಕರೆಗೆ ೨ ಕಿ.ಗ್ರಾ.೨೦೦ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ಉತ್ತಮ ಹೂ ಮತ್ತು ಕಾಯಿ ರಚನೆಯಿಂದ ಇಳುವರಿ ಪಡೆಯಬಹುದು- ಡಾ.ರಾಜು ಜಿ. ತೆಗ್ಗಳ್ಳಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕಲಬುರಗಿ ಏಕ ಕಾಲಕ್ಕೆ ಸುರಿದ ಮಳೆಯಿಂದ ವಾತಾವರಣದ ಹಾಗೂ ಭೂಮಿಯ ಆರ್ದ್ರತೆ, ತೇವಾಂಶ ಹೆಚ್ಚಾಗಿದ್ದು, ದಟ್ಟ ಮೋಡದ ದಿನಗಳು ಇಟ್ಟಂಗಿ ತಾಮ್ರರೋಗ ಹಾಗೂ ಚಿಬ್ಬುರೋಗ ಪ್ರಸಾರಕ್ಕೆ ಸೂಕ್ತ ಸನ್ನಿವೇಶವಾಗಿರುತ್ತದೆ.
ಉದ್ದು ಮತ್ತು ಹೆಸರು ಹೊಲಗಳಲ್ಲಿ ರೋಗ ಭಾದೆ ೫ ರಿಂದ ೨೦ ಶೇಕಡ ಇರುವಾಗಲೆ ಸೂಕ್ತ ಸಸ್ಯ ಸಂರಕ್ಷಣೆ ಕೈಗೊಳ್ಳಬೇಕು ಮುನ್ನೆಚ್ಚರಿಕಯಾಗಿಯೂ ಮೇಲ್ಕಂಡ ಸಸ್ಯ ಸಂರಕ್ಷಣಾ ಔಷದೀಯನ್ನು ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…