ಕಲಬುರಗಿ: ವಿನಯವಿಲ್ಲದ ವಿದ್ಯೆ, ಗುಣವಿಲ್ಲದ ರೂಪ, ಸಮಯಕ್ಕೆ ಉಪಯೋಗಕ್ಕೆ ಬಾರದ ಹಣ, ಹರಿತವಿಲ್ಲದ ಆಯುಧ, ಹಸಿವಿಲ್ಲದ ಊಟ ಹಾಗೂ ಪರೋಪಕಾರವಿಲ್ಲದ ಜೀವನ ವ್ಯರ್ಥ ಅದಕ್ಕಾಗಿ ನಾವೆಲ್ಲರೂ ಒಳ್ಳೆಯ ಕಾರ್ಯ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಪ್ರಕಾಶ ರಜಪೂತ ಹೇಳಿದರು.
ಇ೦ದು ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ ನಗರದ ರಿಂಗ್ ರೋಡ ಪಕ್ಕದಲ್ಲಿರುವ ಮಹಾದೇವಿ ವೃದ್ಧಾಶ್ರಮದಲ್ಲಿ ಹಿರಿಯರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೆಶದಿ೦ದ ಹಣ್ಣುಗಳನ್ನು ವಿತರಿಸುವ ಸಮಾರಂಭದಲ್ಲಿ ಮಾತನಾಡುತ್ತಾ ಹಿರಿಯ ಜೀವಿಗಳು ಸಮಾಜದ ಆಸ್ತಿ, ಅವರನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವರ ಮಾರ್ಗದರ್ಶನದ ಬದುಕು ಸುಂದರ, ಸಂಸ್ಕಾರದ ಸಮಾಜ ಕಟ್ಟಬಲ್ಲದು ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾದ ಖ್ಯಾತ ಪ್ರವಚನಕಾರರಾದ ಸಂಗಮೇಶ ಶಾಸ್ತ್ರಿ ಮಾಷಾಳ ಮಾತನಾಡುತ್ತಾ ಬಾಳುವುದಾದರೆ ಸಮುದ್ರದಂತೆ ಬಾಳಿ ಬೇಕಾದವರೂ ನದಿಯಂತೆ ಬಂದು ನಿಮ್ಮನ್ನು ಸೇರುತ್ತಾರೆ. ಹುಟ್ಟು ಸಹಜ ಸಾವು ಅನಿವಾರ್ಯ ಹುಟ್ಟು ಸಾವಿನ ಮಧ್ಯೆ ಮಾಡಿದ ಒಳ್ಳೆಯ ಕಾರ್ಯಗಳೆ ಶಾಶ್ವತ ಇಂಥ ಕಾರ್ಯ ಮಾಡಿದಾಗ ಮಾತ್ರ ನಾವು ಇತಿಹಾಸ ಪುಟ ಸೇರಬಲ್ಲೆವು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವೃದ್ಧಾಶ್ರಮದ ಮುಖ್ಯಸ್ಥರಾದ ಭಾಗೀರಥಿ, ಕೆಎಸ್ ಆರ್ ಪಿ ಪೊಲೀಸ್ ಸಿಬ್ಬಂದಿಯಾದ ಪ್ರೇಮ ಕುಮಾರ ರಾಥೋಡ, ಯುವ ಮುಖಂಡರಾದ ಆನಂದ ಖೇಳಗಿ, ಆಗಮಿಸಿದರು.
ಇದೇ ಸಂದರ್ಭದಲ್ಲಿ ಉಪ ಆಯುಕ್ತರ ಧರ್ಮಪತ್ನಿಯಾದ ಶ್ರೀಮತಿ ನಿಖಿತಾ ಪ್ರಕಾಶ ಅವರು ಎಲ್ಲಾ ಹಿರಿಯರಿಗೆ ಹಣ್ಣುಗಳನ್ನು ವಿತರಿಸಿ ಕಾಲಿಗೆ ಬಿದ್ದು ನಮಸ್ಕರಿಸಿ ನಿನ್ನ ಮಗಳಿಗೆ ಆಶೀರ್ವಾದ ಮಾಡಿ ಎಂದು ಹೇಳಿದಾಗ ಎಲ್ಲ ಹಿರಿಯ ಜೀವಿಗಳ ಕಣ್ಣಲ್ಲಿ ನೀರು ಹರಿದಾಗ, ಕಾರ್ಯಕ್ರಮ ಕೆಲವು ನಿಮಿಷ ಸ್ತಬ್ಧವಾಯಿತು ಏಕೆಂದರೆ ಹಿರಿಯ ಜೀವಿಗಳು ತಮ್ಮ ಮಕ್ಕಳನ್ನು ಬಿಟ್ಟು ವೃದ್ಧಾಶ್ರಮದಲ್ಲಿ ಇರುವದು ನೆನಪಿಗೆ ಬಂದಾಗ ಕಣ್ಣಲ್ಲಿ ನೀರು ಹರಿಯಿತು ಅದಕ್ಕೆ ಅವರಿಗೆ ನಾವಿದ್ದೇವೆ ನಿಮ್ಮ ಜೊತೆ ಧೈರ್ಯವಾಗಿರಿ ಎಂದು ಮಾನಸಿಕ ಧೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಎಚ್. ಅಟ್ಟೂರ, ದರ್ಶನ, ಪಣೀಂದ್ರ, ಕಲ್ಪನಾ ರಜಪುತ, ರಾಹುಲ ರಾಠೋಡ, ಮಂಜುನಾಥ ಖೇಳಗಿ,ಶಂಕರ ಸಂಗೊಳಗಿ, ಮಲ್ಲಿನಾಥ ಕುಮಸಿ, ಬಸ್ಸಮ್ಮ ಇತರರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…