ಕಲಬುರಗಿ: ಚಿಂತನ-ಮಂಥನವನ್ನು ಪ್ರತಿಪಾದಿಸುವ ಪ್ರವಚನಗಳು ಸಂಕಲನವಾಗಿ ರೂಪಗೊಳ್ಳುತ್ತವೆ ಎಂದು ಭಾರತ ಸರಕಾರ ಸಾಲ ವಸೂಲಾತಿ ನ್ಯಾಯಾಧೀಕರಣ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಚನ್ನಮಲ್ಲಪ್ಪ ಬೆನಕನಳ್ಳಿ ರಟಕಲ್ ಹೇಳಿದರು.
ನಗರದ ಜಯನಗರದ ಅನುಭವ ಮಂಟಪದಲ್ಲಿ ಕಲಬುರಗಿ ಬಸವ ಸಮಿತಿಯ ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಸೋಮವಾರ ಆಯೋಜಿಸಲಾಗಿದ್ದ ವಚನ ಆಷಾಡ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಚನ ಆಲಿಸಬೇಕು. ಇದರಿಂದ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದರು.
ಪರಿವರ್ತನೆ ಎಲ್ಲರಿಗೂ ಬರಬೇಕು ಎನ್ನುವ ಆಶಯ ಪ್ರವಚನದ ಮೂಲ ಉದ್ಧೇಶವಾಗಿದೆ. ವೃದ್ಧಾಶ್ರಮಗಳು ದೇಶಕ್ಕೆ ಮಾರಕ ಎಂದು ಹೇಳುವಂತಾಗಿದೆ. ತಂದೆ-ತಾಯಿಗಳ ಪುಣ್ಯಸ್ಮರಣೆಯಡಿ ಅನ್ನದಾಸೋಹ ಮಾಡುವ ಪುಣ್ಯದ ಕಾರ್ಯಕ್ರಮ ಇಲ್ಲಿ ಆಗಿದೆ. ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ ಎನ್ನುವುದು ಆತಂಕವಾಗಿದೆ. ಶರಣರು ಹಾಕಿಕೊಟ್ಟ ವಿಚಾರಗಳು ಪ್ರಸ್ತುತವಾದವುಗಳಾಗಿವೆ. ಅವರ ವಿಚಾರಗಳು ಅಳವಡಿಸಿಕೊಳ್ಳಬೇಕು. ಅವರ ವೈಚಾರಿಕೆಯನ್ನು ಅರಿತುಕೊಳ್ಳಬೇಕು. ಸಮಾಜದಲ್ಲಿನ ಎಲ್ಲ ವಾದಗಳು ಗಮನಿಸಿದಾಗ ಶರಣರ ಮಾರ್ಗಗಳು ಕಂಡುಕೊಳ್ಳುವುದು ಅರ್ಥಗರ್ಭಿತವಾದವುಗಳಾಗಿವೆ ಎಂದು ಅವರು ಪ್ರಸ್ತಾಪಿಸಿದರು.
ಬೆಂಗಳೂರು ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿ, ದತ್ತಿ ಉಪನ್ಯಾಸ ಕೈಗೊಳ್ಳುವುದು ಪ್ರಯತ್ನವಾಗಿದೆ. ಪೂರಕವಾಗಿ ಪರಿವರ್ತನೆಯಾಗಿದ್ದರೆ ಸಾರ್ಥಕ ಹೊಂದುತ್ತದೆ. ಯುವ ಜನಾಂಗ ಪರಿವರ್ತನೆಯಾಗಲಿದೆ ಎನ್ನುವ ಪ್ರಯತ್ನ ಪ್ರವಚನ ಮಾಡಲಿದೆ. ಶರಣಶ್ರೀ ಡಾ.ಈಶ್ವರ ಮಂಟೂರರ ೨೪ ದಿವಸಗಳ ಕಾಲ ಕೇಳುವ ಪ್ರವಚನ ಮನತುಂಬಿಕೊಳ್ಳಿ, ವಚನ ಸಂಗೀತಕ್ಕೆ ಮಾತನಾಡುವ ಕಲೆ ಸಭೆ ಒದಗಿಸಿಕೊಟ್ಟಿದೆ. ಶರಣನ ಜೀವನ ದರ್ಶನ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ. ಇದರ ಪರಿಪೂರ್ಣತೆಯನ್ನು ಹೊಂದಿ ಸದುಪಯೋಗ ಪಡೆದುಕೊಳ್ಳಿ ಎಂದು ಅವರು ಹೇಳಿದರು.
ಶಿವದರ್ಶನ, ಲಿಂಗ ಧಾರಣೆ ಯಾರು ಹೇಳಿಕೊಡಬೇಕಿಲ್ಲ. ಎಲ್ಲವೂ ಆಧ್ಯಾತ್ಮಿಕ ನೆಲೆಯಿಂದ ಕಂಡುಕೊಳ್ಳಬೇಕು. ವಿಶ್ವದಲ್ಲಿ ಬಸವಣ್ಣನವರನ್ನು ಪರಿಚಯಿಸುವ ಕೆಲಸ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಶರಣಶ್ರೀ ಡಾ.ಈಶ್ವರ ಮಂಟೂರ ಅವರ ಪ್ರವಚನ ‘ಬಸವಟವಿ’ ಮೂಲಕ ಪ್ರಸಾರ ಮಾಡುವ ವ್ಯವಸ್ಥೆ ಕಲಬುರಗಿ ಬಸವ ಸಮಿತಿ ಮಾಡಿರುವುದಕ್ಕೆ ಶ್ಲಾಘಿಸಿದರು. ವಚನ ಆಷಾಡ ಪ್ರವಚನ ಸಂಪೂರ್ಣವಾಗಿ ಅರ್ಥೈಸಿಕೊಂಡು ಪರಿವರ್ತನೆಯಾದರೆ ಆಗುವ ಕಾರ್ಯಕ್ರಮಕ್ಕೆ ಯಶಸ್ವಿ ತಂದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮಹಾಮಹಿಮ ಸಂಗನಬಸವಣ್ಣನವರು ಸಾನ್ನಿಧ್ಯ ವಹಿಸಿದ್ದರು. ಕಲಬುರಗಿ ಬಸವ ಸಮಿತಿ ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ, ಸಹಾಯಕ ವಾಣಿಜ್ಯ ತೆರಿಗೆ ಅಧಿಕಾರಿ ನೀಲಕಂಠರಾವ ಮಾಲಿಪಾಟೀಲ, ಕೃಷಿ ಅಧಿಕಾರಿ ಶ್ರೀಗೂಳಪ್ಪ ಯೋಗಪ್ಪನವರ್, ನಂದಿ ಬಸವೇಶ್ವರ ಟ್ರಸ್ಟ್ ಗೌರವಾಧ್ಯಕ್ಷ ಶಾಂತಪ್ಪ ಭೋಗಶೆ, ಬಸವಂತರಾವ ಏರಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಜಮಖಂಡಿ ತಾಲೂಕಿನ ಹುನ್ನೂರ-ಮಧುರಖಂಡಿ ಬಸವಜ್ಞಾನ ಗುರುಕುಲ ಸಂಸ್ಥಾಪಕ ಶರಣಶ್ರೀ ಡಾ.ಈಶ್ವರ ಮಂಟೂರ ಅವರಿಂದ ಶರಣರ ಜೀವನ ದರ್ಶನ: ಆಧ್ಯಾತ್ಮಿಕ ಪ್ರವಚನ ವಿಷಯ ಕುರಿತು ಪ್ರವಚನ ನಡೆಯಿತು.
ಶಂಕ್ರಯ್ಯ ಆರ್.ಗುರುಮಠ ಮತ್ತು ಸಿದ್ದೇಶಕುಮಾರ ಲಿಂಗನಬಂಡಿ ಅವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ವೀರಣ್ಣ ದಂಡೆ, ಬಂಡಪ್ಪ ಕೇಸೂರ ಮುಂತಾದವರು ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಉದ್ದಂಡಯ್ಯ ನಿರೂಪಿಸಿದರು. ಅಧ್ಯಕ್ಷೆ ವಿಲಾಸವತಿ ಖೂಬಾ ಸ್ವಾಗತಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…