ಬಿಸಿ ಬಿಸಿ ಸುದ್ದಿ

ಜಿಲ್ಲಾ ವೀರಶೈವ ಸಮಾಜದ ಸಭೆ ಯಶಸ್ವಿ

ಕಲಬುರಗಿ: ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಸಮಾಜದ ಸಭೆ ನಡೆಯಿತು.

ವಿರಶೈವ ಸಮಾಜ ಜಿಲ್ಲಾ ಗೌರವಾದ್ಯಕ್ಷ ಬಸವರಾಜ ದೇಶಮುಖ ಸಭೆಯ ನೇತೃತ್ವವಹಿಸಿ, ವೀರಶೈವ ಸಮಾಜದ ಸದಸ್ಯತ್ವವನ್ನು ಜಿಲ್ಲೆಯಾದ್ಯಂತ ಮನೆ ಮನೆಗೂ ಎಲ್ಲರೂ ಸ್ವಾಭಿಮಾನದಿಂದ ಆಗುವುದರ ಮೂಲಕ ಜಿಲ್ಲೆಯಲ್ಲಿ ಬಲಿಷ್ಟ ಸಂಘಟನೆ ಮಾಡಲೂ ಕರೆಕೊಟ್ಟರು.

ಅಧ್ಯಕ್ಷತೆವಹಿಸಿದ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಅವರು ಮಾತನಾಡಿ ತಕ್ಷಣದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಗಳಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಲ್ಲಾ ತಾಲೂಕಗಳಲ್ಲಿ ವೀರಶೈವ ಲಿಂಗಾಯತ ಭವನ ಮಾಡಲು ಸರಕಾರಕ್ಕೆ ಮನವಿ ಸಲ್ಲಿಸಿ ಸೂಕ್ತ ನಿವೇಶನ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು ಸಮಾಜದ ಬಡವರ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ಮಾಡಲು ಅನುಕೂಲಮಾಡಿಕೊಡಲಾಗುವುದು ಎಂದು ತಿಳಿಸಿದ್ದರು.

ಈದೆ ಸಂದರ್ಭದಲ್ಲಿ ಕಲ್ಯಾಣಪ್ಪಾ ಪಾಟೀಲ ಮಳಖೇಡ ಉಪಾಧ್ಯಕ್ಷರು, ಚಂದ್ರಶೇಖರ ತಳ್ಳಳ್ಳಿ ಕೊಶಾಧ್ಯಕ್ಷರು, ಸಂಗನಗೌಡ ಪಾಟೀಲ , ವೀರೆಶ ಪಾಟೀಲ ಜಗತ್, ಶರಣು ಪಪ್ಪಾ, ಸಂಗಮೇಶ ಸ್ವಾಮಿ ಜೆವರ್ಗಿ, ಇನ್ನಿತರರು ಮಾತನಾಡಿದರು, ಡಾ. ಶ್ರೀಶೈಲ ಘೂಳಿ ಕಾರ್ಯದರ್ಶಿಗಳು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಸಂಗನಗೌಡ ಸರಕನೂರ ವಂದಿಸಿದರು  ಸಭೆಯಲ್ಲಿ ಎಸ್.ವ್ಹಿ ಮಠಪತಿ ಸುಭಾಶ ಬಿಜಾಪೂರೆ, ಶ್ರೀದೇವಿ ಸಗಸನಗೇರಿ, ಸಾತಪ್ಪಾ ಪಟ್ಟಣಕರ್, ಶಿವಪುತ್ರಪ್ಪಾ ಡೆಂಕಿ, ಕಲ್ಯಾಣಪ್ಪಾ ಗೋದಿ, ಜಿ.ಡಿ. ಅಣಕಲ್, ಚಂದ್ರಶೇಖರ ಬಿಜಾಪೂರೆ, ಹಣಮಂತ ಪಾಟೀಲ ಜಗತ್ತ್, ಪರಮೇಶ್ವರ ಗುಡ್ಡಾ  ಮುಂತಾದವರು.

ಸಭೇಯ ನಿರ್ಣಯ: ೧) ಶ್ರೀ ಭಸವರಾಜ ಬೊಮ್ಮಾಯ ನೂತನ ಮುಖ್ಯಮಂತ್ರಿಗಳನ್ನಾಗಿ ಮಾಡಿದಕ್ಕೆ ಸಮಾಜದಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು, ೨) ಕಲಬುರಗಿ ಜಿಲ್ಲಾ ವೀರಶೈವ ಸಮಾಜದ ಸದಸ್ಯತ್ವ ಅಭಿಯಾನ ವಾರ್ಡ/ಗ್ರಾಮ ಮಟ್ಟದಿಂದ ಹಿಡಿದು ಜಿಲ್ಲಾದ್ಯಂತ ಮಾಡಲೂ ನಿರ್ಣಾಯಿಸಲಾಯಿತು.

೩) ದಿನಾಂಕ ೩೦ ಅಗಷ್ಟರೊಳಗಾಗಿ ಎಲ್ಲ ತಾಲ್ಲೂಕ ಪದಾಧಿಕಾರೊಗಳನ್ನು ಆಯ್ಕೆಮಾಡಲು ನಿರ್ಣಾಯಿಸಲಾಯಿತು. ೪) ನಮ್ಮ ಜಿಲ್ಲೆಗೆ ಕನಿಷ್ಠ ೨ (ಇಬ್ಬರು) ಲಿಂಗಾಯತರಿಗೆ ಸಚಿವಸ್ಥಾನ ನಿಡಲು ಹಕ್ಕೂತ್ತಾಯ ಮಾಡಲಾಯಿತು. ಈನೂತನ ಸರಕಾರ ಈ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ  ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ವಾನು ಮತದ ನಿರ್ಣಯ ಕೈಗೊಳ್ಳಲಾಯಿತು.

೫) ೯ನೇ ಪಿಠಾಧಿಪತಿಗಳಾದ ಚಿ. ಪೂಜ್ಯ ದೊಡ್ಡಪ್ಪಾ ಅಪ್ಪಾ ಅವರ ಹುಟ್ಟು ಹಬ್ಬವನ್ನು ದಿನಾಂಕ : ೦೧-೧೧- ೨೦೨೧ ರಂದು ಜಿಲ್ಲಾ ವೀರಶೈವ ಸಮಾಜ ವತಿಯಿಂದ ಅತ್ಯಂತ ಅರ್ಥಪೂರ್ಣವಾಗಿ. ಮತ್ತು ಅದ್ದೂರಿಯಾಗಿ ಆಚರಿಸಲು ನಿರ್ಣಾಯಿಸಲಾಯಿತು, ಅದರಿಂತೆ ಪ್ರತಿ ವರ್ಷ ಜಯಂತಿ ಕಾರ್ಯಕ್ರಮ ಮಾಡಲು ನಿರ್ಣಯಿಸಲಾಯಿತು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago