ಆಳಂದ: ಭಾರತೀಯ ಸಂಸ್ಕೃತಿಯ ಪರಂಪರೆಯ ಪ್ರಾಚೀನ ಗತವೈಭವ ಸಾರುವ ರಾಮಾಯಣದ ಆದರ್ಶ ಪುರುಷ ಶ್ರೀರಾಮಚಂದ್ರನು ಕೈಗೊಂಡಿದ್ದ ೧೪ ವರ್ಷದ ವನವಾಸದ ಸ್ಮರಣಾರ್ಥವಾಗಿ ಇಲ್ಲೊಂದು ಊರಿನ ೧೪ ಮಂದಿ ಭಕ್ತಾದಿಗಳು ಸೇರಿ ಶ್ರೀರಾಮನ ದೇವಸ್ಥಾನಗಳಿಗೆ ತೆರಳಿ ವಾನವಾಸ ವೃತ್ತಾಚರಣೆ ಕೈಗೊಳ್ಳುವ ಮೂಲಕ ಶ್ರೀರಾಮ ಚರಿತ್ರೆಯನ್ನು ಮರುಕಳಿಸುವಂತೆ ಮಾಡಿದ್ದಾರೆ.
ತಾಲೂಕಿನ ನಿರಗುಡಿ ಗ್ರಾಮದ ಹನುಮಾನ ದೇವಸ್ಥಾನ ಕಮೀಟಿಯ ಮುಖಂಡರುಗಳೇ ದೇವಸ್ಥಾನದ ಸೀಖರ ಮತ್ತು ಕಳಸಾಹರೋಹಣ ನೆರವೇರಿಸಿ ಬಳಿಕ ನಿರಗುಡಿಯ ಮಲ್ಲಯ್ಯಾ ಮುತ್ತ್ಯಾ ಅವರ ಮಾರ್ಗದರ್ಶನದಲ್ಲಿ ಗ್ರಾಮದ ಪೀಡಾ ನಿವಾಣೆ ಸಲುವಾಗಿ ಮತ್ತು ಶಾಂತಿ ನೆಲಸುವಂತಾಗಿಸಲು ಎಲ್ಲರೂ ಸೇರಿ ೧೧ ಗ್ರಾಮಗಳ ವನವಾಸ ವತ್ತಾಚರಣೆ ಕೈಗೊಂಡರು.
ವನವಾಸದ ವೇಳೆ ಅಂದು ಶ್ರೀರಾಮಚಂದ್ರನು ತೊಟ್ಟಿದ್ದ ಗೂಣಿಯ ಚೀಲವನ್ನು ಹೊದ್ದಿಕೊಂಡ ವೇಷವನ್ನೇ ತೊಟ್ಟ ಭಕ್ತಾದಿಗಳು ಮನೆಯಿಂದ ೧೧ ದಿನಗಳ ಕಾಲ ತೊರೆದ ಪವಾಸದೊಂದಿಗೆ ಪಾದಯಾತ್ರೆಯ ಮೂಲಕ ಬಸವ ಕಲ್ಯಾಣ ತಾಲೂಕಿನ ರಾಮತೀರ್ಥ ಗುಂಡ, ಚಿಂಚೋಳಿ ತಾಲೂಕಿನ ಸಿರಸಂಗಿ, ಉಜಳಂಬಿ, ಬಸವ ಕಲ್ಯಾಣದ ಜಳಕಾಪೂರ ಹಾರಕೂಡ, ಮುಡಬಿವಾಡಿ, ಕಲಬುರಗಿ ತಾಲೂಕಿನ ಕಮಲಾಪೂರ ರಟಗಲ್, ವಟವಟಿ, ಮಹಾಗಾಂವ್ ಕ್ರಾಸ್, ಬಬಲಾದ ಮಠ, ಆಳಂದ ತಾಲೂಕಿನ ಬಾಳಿ, ಕೊರಳ್ಳಿ ಡ್ಯಾಂನ್ ಮಲ್ಲಯ್ಯ ಮುತ್ತ್ಯಾ ಅವರ ಆಶ್ರಮ ಜಿಡಗಾ ಮಠ, ಖಾನಾಪೂರದ ಚನ್ನವೀರ ಮಠ ಕೊನೆಯದಾಗಿ ನಿರಗುಡಿ ಗ್ರಾಮಕ್ಕೆ ತಲುಪಿ ವತ್ತಾಚರಣೆ ಸಮಾರೋಪ ಕೈಗೊಂಡರು.
ವತ್ತಾಧಾರಿಗಳನ್ನು ಗ್ರಾಮದಲ್ಲಿ ಪ್ರಮುಖ ರಸ್ತೆಗಳ ಮೂಲಕ ಡೊಳ್ಳು, ಭಜನೆ ಕುಂಭ, ಕಳಸದೊಂದಿಗೆ ಮೆರವಣಿಗೆ ಕೈಗೊಂಡು ಹನುಮಾನ ಹಾಗೂ ಶ್ರೀರಾಮಚಂದ್ರನಿಗೆ ವಿಶೇಷ ಪೂಜೆ ಅರ್ಚನೆ ನೆರವೇರಿಸಿದರು.
ಶ್ರೀರಾಮಚಂದ್ರನು ಎರಡನೇ ತಾಯಿ ಕೈ ಕೇ ತನ್ನ ಮಗನಿಗೆ ರಾಜಾಭಿಷೇಕ ಮಾಡಬೇಕು ಎಂಬ ಉದ್ದೇಶದಿಂದ ಶ್ರೀರಾಮನಿಗೆ ೧೪ ವರ್ಷಗಳ ಕಾಲ ವನವಾಸಕ್ಕೆ ಕಳುಹಿಸುವಲ್ಲಿ ಪ್ರಮುಖ ಪಾತ್ರವಾಗಿದ್ದಳು, ವನವಾಸ್‌ಕ್ಕೆ ಶ್ರೀರಾಮಚಂದ್ರ, ಲಕ್ಷ್ಮಣ, ಸೀತೆ ವನವಾಸ ಮುಗಿಸಿ ಮತ್ತೆ ರಾಜಾಭಿಷೇಕವನ್ನು ಸ್ವೀಕರಿಸಿದ ಇತಿಹಾಸವನ್ನು ಮರುಕಳಿಸಿದ ಭಕ್ತಾದಿಗಳು ೧೧ ದಿನಗಳ ಕಾಲ ಸಂಪೂರ್ಣವಾಗಿ ಫಲಹಾರದ ಮೇಲೆ ಉಪವಾಸ ಕೈಗೊಂಡು ಭಕ್ತಿಯ ಹೊಳೆಯನ್ನೇ ಹರಿಸಿದರು.
ಶ್ರೀಗಳ ಸಲಹೆ ನೀಡಿದ್ದರು: ಗ್ರಾಮದಲ್ಲಿ ಪೀಡೆಯ ನಿವಾರಣೆಗೆ ಗ್ರಾಮದ ಹನುಮಾನ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಬಾಬುರಾವ್ ಬಿರಾದಾರ ನೇತೃತ್ವದಲ್ಲಿ ವನವಾಸ ವೃತ್ತಾಚರಣೆ ಕೈಗೊಳ್ಳುವಂತೆ ಮಲ್ಲಯ್ಯಾ ಮುತ್ತಾ ಅವರ ಸಲಹೆ ಮೆರೆಗೆ ಭಕ್ತಾದಿಗಳು ಈ ವೃತ್ತಾಚರಣೆ ಕೈಗೊಂಡಿದ್ದಾರೆ. ಗ್ರಾಮದ ಜನರಿಗೆ ಶಾಂತಿ ಸುಖ ದೊರೆಯಲಿ ಎಂದು ವಿಶೇಷ ಆಚರಣೆಯನ್ನು ಮಾಡಿದ್ದಾರೆ.
ಆನಂದ ಎಸ್. ದೇಶಮುಖ ನಿರಗುಡಿ ಗ್ರಾಮದ ಯುವಕರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…