ಚಿಂಚೋಳಿ: ತಾಲೂಕಿನ ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಲೇಪೇಟ ಗ್ರಾಮದಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ ಕುಟುಂಬಕ್ಕೆ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಭೇಟಿನೀಡಿ ಸಾಂತ್ವನ ಹೇಳಿ ಬಡ ಕುಟುಂಬಗಳಿಗೆ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡಿದರು.
ಅಪಘಾತದಲ್ಲಿ ಗಂಭಿರ ಗಾಯವಾಗಿ ಚಿಕಿತ್ಸೆ ಪಡೆಯುತಿರುವ ಗ್ರಾಮದ ಶರಣು ಹಾಗೂ ಮಸ್ತಾನ ಎಂಬುವವರ ಮನೆಗೆ ಭೇಟಿ ನೀಡಿ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡಿ ವಯಕ್ತಿಕ ಧನ ಸಹಾಯ ಮಾಡಿದರು.
ಭೀಮರೆಡ್ಡಿ ಅವರು ಕೋವಿಡ್ ನಿಂದ ಮೃತಪಟ್ಟಿದು ಅವರ ಮಕ್ಕಳ ಪದವಿ ಪೂರ್ಣಗೋಳ್ಳುವವರಿಗೂ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ನಾನು ಭರಿಸುತೇನೆ ಎಂದು ಭರವಸೆ ನೀಡಿ ಅವರಿಗೆ ವಯಕ್ತಿಕ ಧನ ಸಹಾಯ ಮಾಡಿದರು.
ಇದೇವೇಳೆ ಬಾಲರಾಜ್ ಗುತ್ತೇದಾರ ಬಿಗ್ರೇಡ ವತಿಯಿಂದ ಇಂದಿನಿಂದ ಸುಲೇಪೇಟ ವಲಯದ ಗ್ರಾಮಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಸೇಡಂ ಮತಕ್ಷೇತ್ರದ ತಾಲೂಕು ಅಧ್ಯಕ್ಷ ಎಕ್ಬಾಲ್ ಖಾನ, ಗ್ರಾ.ಪಂ ಸದಸ್ಯ ಫಕ್ರುದ್ದೀನ್ ಚಾಂಗಲೇರ್, ಕಾಮಯ್ಯ ಗುತ್ತೇದಾರ, ಸಿದ್ದಯ್ಯ ಸ್ವಾಮಿ, ಸುರೇಶ ಬಂದಿ, ಭಿಮು ಮಡಿವಾಳ, ಮೋಹಿನ್ ಮೋಮಿನ್, ಹಫಿಜ್, ಹಾರುನ, ಮಹೇಶ್ ಅಣಕಲ್, ಸಿರಾಜೋದ್ದಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…