ಸುರಪುರ: ರಾಜ್ಯದಲ್ಲಿಯೆ ಅತೀ ಹಿಂದುಳಿದ ಜನಾಂಗದೊಳಗೆ ಒಂದಾಗಿರುವ ನಮ್ಮ ಗೊಲ್ಲ ಯಾದವ್ ಸಮುದಾಯದ ಏಕೈಕ ಶಾಸಕಿಯಾದ ಹಿರಿಯೂರು ಕ್ಷೇತ್ರದ ಕೆ.ಪೂರ್ಣಿಮಾ ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಿರುವ ಸರಕಾರಕ್ಕೆ ನಮ್ಮ ಧಿಕ್ಕಾರವಿದೆ ಎಂದು ಗೊಲ್ಲ ಯಾದವ ಸಮುದಾಯದ ಮುಖಂಡ ಚಂದಪ್ಪ ಯಾದವ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಮ್ಮ ಸಮುದಾಯದ ಜನರು ಆರ್ಥಿಕವಾಗಿ,ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದೆ.ಇಂದಿಗುಕೂಡ ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದಾರೆ.ಇಂತಹ ಸಮುದಾವು ರಾಜ್ಯದಲ್ಲಿ ಸುಮಾರು ೪೦ ಲಕ್ಷ ಜನಸಂಖ್ಯೆಯನ್ನು ಹೊಂದಿದೆ.ಇಂತಹ ಸಮುದಾಯದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸರವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯವೆಸಗಲಾಗಿದೆ.ಇದರಿಂದ ನಮ್ಮ ಸಮುದಾಯದ ಅಭಿವೃಧ್ಧಿಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.ಆದ್ದರಿಂದ ಕೂಡಲೇ ಆದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಇನ್ನುಳಿದ ಖಾತೆಗಳಲ್ಲಿ ಒಂದನ್ನು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರಿಗೆ ನೀಡಬೇಕೆಂದು ಆಗ್ರಹಿಸಿದರು.
ಗೊಲ್ಲ ಯಾದವ ಸಂಘದ ತಾಲೂಕು ಅಧ್ಯಕ್ಷ ರಮೇಶ ಯಾದವ್ ಮಾತನಾಡಿ,ಬೊಮ್ಮಾಯಿಯವರ ಸರಕಾರ ನಮ್ಮ ಗೊಲ್ಲ ಸಮುದಾಯಕ್ಕೆ ಅನ್ಯಾಯ ಮಾಡಬಾರದು.ಕೂಡಲೇ ಪೂರ್ಣಿಮಾ ಶ್ರೀನಿವಾಸರವರಿಗೆ ಸಚಿವ ಸ್ಥಾನ ನೀಡಬೇಕು ಇಲ್ಲವಾದಲ್ಲಿ ಇಡೀ ಸಮುದಾಯ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗುಡುಗಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಯಾದವ್,ನಾಗರಾಜ ಯಾದವ್,ನಿಂಗಪ್ಪ ಮಾಲಗತ್ತಿ,ಶಾಂತಪ್ಪ ಯಾದವ್,ಮಾಳಪ್ಪ ಯಾದವ್,ನಿಂಗಪ್ಪ ದೊಡ್ಮನಿ,ಈಶ್ವರ ಬೈರಿಮಡ್ಡಿ,ವೆಂಕಟೇಶ ಜಲೂಡಿ,ಆನಂದ ಪ್ಯಾಟಿ,ಮೆಲಗಿರಿ ಯಾದವ್,ಅಮ್ಮಣ್ಣ ಗೆಜ್ಜೇರಿ,ವಿರೇಶ ಯಾದವ್,ಬಸವರಾಜ ಡೊಳ್ಳೆ,ಲಕ್ಷ್ಮಣ ಯಾದವ್,ಮಲ್ಲೇಶಿ ಕಟಿಗಲ್,ಕೃಷ್ಣಾ ಚಿಕ್ಕನಳ್ಳಿ,ಸುರೇಶ ಅಮ್ಮಾಪುರ,ಹಣಮೇಶ ಅಮ್ಮಾಪುರ,ಭೀಮಣ್ಣ ಬೈರಿಮಡ್ಡಿ,ವೆಂಕಣ್ಣ ಅಮ್ಮಾಪುರ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…