ಆಳಂದ: ಕೋವಿಡ್ ಮೂರನೇ ಅಲೆ ಮುಂಜಾಗೃತವಾಗಿ ರಾಜ್ಯ ಸರ್ಕಾರ ಪ್ರಕಟಿಸಿದ ವಿಕೆಂಡ್ ಕಪ್ರ್ಯೂ ಜಾರಿಯಿಂದ ಗಡಿನಾಡಿನ ಜನರಲ್ಲಿ ಭೀತಿ ಆವರಿಸಿಕೊಂಡಿದೆ.
ರಾಜ್ಯ ಸರ್ಕಾರ ಶುಕ್ರವಾರ ರಾತ್ರಿ 9:00ಗಂಟೆಯಿಂದ ಸೋಮವಾರದ ಬೆಳಗಿನ 5:00ಗಂಟೆಯವರೆಗೆ ಕಪ್ರ್ಯೂ ಜಾರಿಯಿರಗೊಳಿಸಿದ್ದು, ಶನಿವಾರ ಮತ್ತು ರವಿವಾರ ಬೆಳಗಿನ 10:ರಿಂದ2:00 ಗಂಟೆಯವರೆಗೆ ಮಾತ್ರ ವ್ಯಾಪಾರ ವೈಹಿವಾಟಿಗೆ ಅವಕಾಶ ನೀಡಿದೆ. ಆದರೆ ಈ ಆದೇಶ ಇನ್ನೂ ತಾಲೂಕು ಆಡಳಿತಕ್ಕೆ ಶುಕ್ರವಾರ ಸಂಜೆಯವರೆಗೂ ಯಾವುದೇ ಅಧಿಕೃತ ಆದೇಶ ಬಂದಿರಿಲ್ಲ ಎಂಬುದು ವರದಿಯಾಗಿದೆ.
ಗಡಿ ಸರಹದಿನಲ್ಲಿ ಈಗಾಗಲೇ ಆರ್‍ಟಿಪಿಸಿಆರ್ ನೆಗೆÀಟಿವು ವರದಿ ಇಲ್ಲದೆ ಬರುವ ಪ್ರಯಾಣಿಕರ ಸ್ವ್ಯಾಬ್ ಸಂಗ್ರಹಕ್ಕೆ ಮುಂದಾಗಿದ್ದು, ಸದ್ಯ ಹೊರಗಿನಿಂದ ಬರುವವರಿಗೆ ನೆಗೆಟಿವು ವರದಿ ಇಲ್ಲದಿದ್ದರೆ ಪ್ರವೇಶ ನಿರಾಕರಿಸಲಾಗಿದೆ. ಆದರೆ ಈ ನಡುವೆ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ತಮ್ಮ ಗಡಿಗಳಲ್ಲೇ ವಾಹನಗಳಿಂದ ಇಳಿದು ಅನ್ಯೂ ಮಾರ್ಗದಿಂದ ಗಡಿಗಳನ್ನು ಪ್ರವೇಶಿಸಿ ಹೋಗಿ ಬರುವ ದೃಶ್ಯವೂ ಗುರುವಾರ ಸ್ವತಃ ಜಿಲ್ಲಾಧಿಕಾರಿ ಡಾ| ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ ಅವರೇ ಕಂಡು, ಜನರು ಇಂಥ ಕೆಲಸಕ್ಕ ಮುಂದಾಗದೆ ವೈರಸ್ ಹರಡದಂತೆ ನೋಡಿಕೊಳ್ಳಲು ಸಹಕರಿಸಬೇಕು ಎಂದು ನಿನ್ನೆಯಷ್ಟೇ ಹೇಳಿಹೋಗಿದ್ದಾರೆ.
ಆದಾಗಿಯೂ ಕೋವಿಡ್ ಮೂರನೇ ಅಲೆಯನ್ನು ಮುಂಜಾಗೃತ ಕ್ರಮವಾಗಿ ಶುಕ್ರವಾರದಿಂದ ಸೋಮವಾರದ ವರೆಗೆ ಸಂಜೆ ವಿಧಿಸಲಾದ ವಿಕೆಂಡ ಕಪ್ರ್ಯೂ ಎಸ್ಟರ ಮಟ್ಟಿಗೆ ಯಶಕಾಣುತ್ತದೆ ಎಂಬುದು ಕಾದುನೋಡುವಂತೆ ಮಾಡಿದೆ.
ಗಡಿ ಸರಹದಿನಲ್ಲಿ ಸುಮಾರು ದಿನಗಳಿಂದ ಕೋವಿಡ್ ತಪಾಸಣೆಗೆಂದು ಸ್ಥಾಪಿಸಿದ ಚೆಕ್‍ಪೋಸ್ಟ್‍ನಿಂದಾಗಿ ಜನ ಸಾಮಾನ್ಯರು ಪ್ರವೇಶ ದೊರೆಯದೆ ಸಂಕಷ್ಟವನ್ನು ಅನುಭವಿಸತೊಡಗಿದ್ದಾರೆ.
ನರೆಯ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ತಪಾಸಣೆ ತೀವ್ರಗೊಳಿಸಲಾಗಿದೆ. ಮಹಾರಾಷ್ಟ್ರ ಸಾರಿಗೆ ಬಸ್ ಸೇರಿ ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಖಾಸಗಿ ವಾಹನಗಳ ಮೇಲೆ ಕಟ್ಟೇಚ್ಚರ ವಹಿಸಲಾಗಿದೆ.
ಮತ್ತೊಂದಡೆ ಜಿಲ್ಲೆಯಲ್ಲಿ ಹಾಗೂ ತಾಲೂಕಿನಲ್ಲಿ ತೀರಾ ಕಡಿಮೆಯಾಗಿದ್ದ ಸೋಂಕಿನ ಪ್ರಮಾಣ ಹೆಚ್ಚುವ ಭೀತಿ ಎದುರಾಗಿದ್ದು, ಆದರೆ ಜನರು ಮಾತ್ರ ಇದಕ್ಕೆ ಕ್ಯಾರೆ ಎನ್ನುವ ರೀತಿಯಲ್ಲಿ ಮೈಮರೆತು ವ್ಯವಹರಿಸತೊಡಗಿದ್ದಾರೆ. ಸಂಬಂಧಿತ ಅಧಿಕಾರಿಗಳ ಹತಾಶಯದಿಂದ ಕುಳಿತುಕೊಳ್ಳೂವಂತೆ ಮಾಡಿದೆ.
ಕೋವಿಡ್ ರೂಪಾಂತರ ಡೆಲ್ಟಾ ವೈರಸ್ ಪ್ರಮಾಣ ಈ ಭಾಗದಲ್ಲಿ ಅಧಿಕೃತವಾಗಿ ಪತ್ತೆಯಾಗಿಲ್ಲ. ಆದರೂ ಸಾರ್ವಜನಿಕ ವಲಯದಲ್ಲಿ ಭೀತಿ ಎದುರಿಸುವಂತಾಗಿದೆ.
ಆದೇಶಕ್ಕೆ ಕಾಯಲಾಗಿದೆ: ವಿಕೆಂಡ ಕಪ್ರ್ಯೂ ಕುರಿತು ಇನ್ನೂ ಮೇಲಿನಿಂದ ಆದೇಶ ಬಂದಿಲ್ಲ.
ಬಂದ ತಕ್ಷಣ ಸಾರ್ವಜನಿಕವಾಗಿ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯ ಗಡಿ ಸರಹದಿನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಆರ್‍ಟಿಪಿಸಿಆರ್ ವರದಿ ಇದ್ದವರಿಗೆ ಮಾತ್ರ ಹೊರರಾಜ್ಯದಿಂದ ಬರುವವರಿಗೆ ಪ್ರವೇಶ ನೀಡಲಾಗುತ್ತಿದೆ ಎಂದು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಹೇಳಿದರು.
ಚಿಕಿತ್ಸೆಗೆ ಸಕ್ಕಲ ಸಿದ್ಧತೆ: ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕ್ಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ| ಚಂದ್ರಕಾಂತ ನರಿಬೋಳ ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿಂದಿನ ಅಲೆಯಲ್ಲಿ ಆಸ್ಪತ್ರೆಯಲ್ಲಿ ಆಕ್ಸಿನ್ ಮತ್ತು ತಜ್ಞ ವೈದ್ಯರ ಕೊರತೆ ಇತ್ತು. ಆದರೆ ಈಗ ಚಿಕಿತ್ಸೆಗಾಗಿ ಎಲ್ಲವನ್ನು ಸಜ್ಜಗೊಳಿಸಲಾಗಿದೆ. ಅಲ್ಲದದೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಆಗಬಾರದು ಎಂದು ಘಟಕವನ್ನು ಸ್ಥಾಪನೆಯಾಗಿದ್ದು, ಕಾಮಗಾರಿ ಪೂರ್ಣಹಂತಕ್ಕೆ ತಲುಪಿದ್ದು, ಶೀಘ್ರವೇ ಕಾರ್ಯಾರಂಭಿಸುವದರಿಂದ ಯಾವುದೇ ತೊಂದರೆ ಆಗದು ಎಂದು ಅವರು ಹೇಳಿದರು. ವಯಸ್ಕರರಿಗೆ 20 ಹಾಸಿಗೆ ಮತ್ತು ಮಕ್ಕಳ ಚಿಕಿತ್ಸೆಗಾಗಿ 10 ಹಾಸಿಗೆಯನ್ನು ಸಜ್ಜಾಗಿವೆ. ತಜ್ಞ ವೈದ್ಯರಿದ್ದಾರೆ ಎಂದರು.
ಕೋವಿಡ್ ಮೂರನೇ ಅಲೆಯನ್ನು ಕೇವಲ ಮಕ್ಕಳಿಗೆ ಹರಡುತ್ತದೆ ಎಂಬುದು ತಳ್ಳಿಹಾಕಿದ ಅವರು ಇದು ವಯಸ್ಸಿನ ಮಿತಿಯಿಲ್ಲದೆ ಎಲ್ಲ ವಯಸ್ಕರರಿಗೂ ಹರಡುವ ಸಾಧ್ಯತೆ ಇದೆ. ಮುಂಜಾಗೃತವಾಗಿ ಕೋವಿಡ್ ಲಸಿಕೆಯನ್ನು ಪಡೆಯುವುದು ಹಾಗೂ ದೈಹಿಕ ಅಂತರ, ಮಾಸ್ಕ್ ಧರಿಸಿ ವ್ಯವಹಾರಿಸಿದರೆ ಮಾತ್ರ ಸೋಂಕು ತಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…