ಬಿಸಿ ಬಿಸಿ ಸುದ್ದಿ

ಒಂದಾನೊಂದು ಕಾಲದಲ್ಲಿ ನೀರನ್ನು ಒದಗಿಸುತ್ತಿದ ಅಜನಿ ಹಳ್ಳ ಇದೀಗ ಶಾಪವಾಗಿದೆ

ಶಹಾಬಾದ: ಒಂದಾನೊಂದು ಕಾಲದಲ್ಲಿ ನಗರದ ಜನತೆಗೆ ಸ್ವಚ್ಛ ಕುಡಿಯುವ ನೀರನ್ನು ಒದಗಿಸುತ್ತಿದ್ದ ನಗರದ ಹೃದಯ ಭಾಗದಲ್ಲಿರುವ ಅಜನಿ ಹಳ್ಳ, ಇದೀಗ ಶಾಪವಾಗಿ ಪರಿಣಮಿಸಿದೆ.

ತನ್ನ ಒಡಲಲ್ಲಿ ಮಲೇರಿಯಾ, ಕಾಮಾಲೆ, ಟೈಫಡ್‌ದಂತಹ ಸಾಂಕ್ರಾಮಿಕ ರೋಗಗಳನ್ನು  ತುಂಬಿಕೊಂಡಿದೆ.ಅಲ್ಲದೇ ಸೊಳ್ಳೆಗಳನ್ನು ಉತ್ಪಾದನೆ ಮಾಡುವ ಕೇಂದ್ರವಾಗಿ ಬಿಟ್ಟಿದೆ. ೧೯೭೨ ರ ಬರಗಾಲದ ಸಮಯದಲ್ಲಿ ನಗರದ ಜನತೆಗೆ ನೀರಿಲ್ಲದಿದ್ದಾಗ ಇದೇ ಹಳ್ಳದ ನೀರು ಇಲ್ಲಿನ ಜನರಿಗೆ ವರದಾನವಾಗಿತ್ತು.

ಆದರೆ ಇಂದು  ಈ ಹಳ್ಳ ಸಾಕಷ್ಟು ಹೂಳು ತುಂಬಿಕೊಂಡಿದ್ದು ಸ್ವಚ್ಛತೆಯಿಲ್ಲದೇ ಕೊಳಚೆ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಎಲ್ಲಿಲ್ಲದ ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಕಸಕಡ್ಡಿ,ಮಣ್ಣು, ಪ್ಲಾಸ್ಟಿಕ್‌ಗಳಿಂದ ತುಂಬಿ ಹೋಗಿದೆ.ಹಳ್ಳದ ಸುತ್ತ ಮುತ್ತ ಜೇಕು ಬೆಳೆದಿದೆ. ಹಳ್ಳದ ಸ್ಥಳವನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವುದರಿಂದ ಹಳ್ಳ ಕಿರಿದಾಗುತ್ತಿದೆ. ಆದರೂ ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಸೊಳ್ಳೆಗಳ ಹಾವಳಿ : ತಲೆನೋವು: ನಗರದ ಎಲ್ಲಾ ವಾರ್ಡಗಳಲ್ಲಿನ ಕೊಳಚೆ ನೀರು ಗಟಾರದ ಮೂಲಕ ಈ ಹಳ್ಳಕ್ಕೆ ಬಂದು  ಸೇರುತ್ತದೆ. ಇಲ್ಲಿನ ಸಾರ್ವಜನಿಕರು ಸಹ ಮನೆಯಲ್ಲಿ ಬಳಕೆ ಮಾಡಿದ ಪೂಜಾ ಸಾಮಗ್ರಿಗಳನ್ನು ಇಲ್ಲಿಯೇ ತಂದು ಎಸೆಯುತ್ತಿರುವುದರಿಂದ ಹಳ್ಳ ಸಂಪೂರ್ಣ ಹೂಳು ತುಂಬಿಕೊಂಡು ಗಬ್ಬು ವಾಸನೆ ಬೀರುತ್ತಿದೆ. ಇದೇ ನೀರು ಸಮೀಪದ ಕಾಗಿಣಾ ನದಿಗೆ ಹೋಗಿ ಸೇರಿ ನದಿಯನ್ನು ಕಲುಷಿತಗೊಳಿಸುತ್ತಿದೆ.

ಇದೇ ನೀರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಆಗುತ್ತಿರುವುದರಿಂದ ಅನೇಕ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ.ಪ್ರತಿದಿನ ಇಲ್ಲಿನ ಸಾರ್ವಜನಿಕರಿಗೆ ಗಬ್ಬೆದ್ದು ನಾರುತ್ತಿರುವ ವಾತಾವರಣ ಹಾಗೂ ಗಬ್ಬು ವಾಸನೆ ಸಹಿಸುವುದೇ ತಲೆ ನೋವಾಗಿದೆ. ಈ ಸಂಬಂಧ ನಗರಸಭೆಯವರಿಗೆ ಸಾಕಷ್ಟು ಬಾರಿ ಮನವಿಗಳನ್ನು ನೀಡುವ ಮೂಲಕ ಜನರು ಸೋತು ಹೋಗಿದ್ದಾರೆ. ಹಳ್ಳದ ಸುತ್ತಮುತ್ತಲೇ ನೂರಾರು ಕುಟುಂಬಗಳು ವಾಸಿಸುತ್ತಿರುವುದರಿಂದ ಈ ಹಳ್ಳದ ಸಮಸ್ಯೆ ಯಾವಾದ ಬಗೆಹರಿಯುತ್ತದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಹೂಳೆತ್ತಲು ಮನವಿ : ಹಳ್ಳದಲ್ಲಿ ಕೊಳಚೆ ಹೆಚ್ಚಿದ್ದರಿಂದ ಸದ್ಯ ಈ ಪ್ರದೇಶದಲ್ಲಿ ಸಾರ್ವಜನಿಕರು ವಾಸಿಸುವುದೇ ಕಷ್ಟಕರವಾಗಿದೆ.ಜತೆಗೆ ವ್ಯಾಪಕ ಪ್ರಮಾಣದಲ್ಲಿ ಸೊಳ್ಳೆಗಳು ಹೆಚ್ಚಿದ್ದು, ಸಾರ್ವಜನಿಕರು ಆತಂಕಪಡುವಂತಾಗಿದೆ.ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಸೊಳ್ಳೆಗಳನ್ನು ನಿಯಂತ್ರಿಸಲು ಶಿಘ್ರವೇ ಹಳ್ಳವನ್ನು ಹೂಳೆತ್ತಬೇಕು.ನೀರು ಸರಾಗವಾಗಿ ಹರಯುವಂತೆ ಮಾಡಬೇಕು.- ಅನ್ವರ ಪಾಶಾ ನಸರೋದ್ದಿನ್ ಕಾಂಗ್ರೆಸ್ ಮುಖಂಡ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago