ಕಲಬುರಗಿ: ಸೇವಾ ವಯೋನಿವೃತ್ತಿ ಹೊಂದಿರುವ ಪ್ರಾಧ್ಯಾಪಕರಿಗೆ ಮತ್ತು ವಿವಿಧ ಅಕಾಡೆಮಿಗಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಪುರಸ್ಕೃತರಿಗೆ ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಸನ್ಮಾನ ಸಮಾರಂಭ ಮಂಗಳವಾರ ಹಮ್ಮಿಳ್ಳಲಾಗಿತ್ತು.
ಸಿಯುಕೆ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಮಾತನಾಡಿ, ಇಂತಹ ಸಮಾರಂಭಗಳು ಹೊಸ ಪೀಳಿಗೆ ಬೆಳೆಯಲು ಪ್ರೇರಣೆ ನೀಡುವಂತಹದ್ದಾಗಿದೆ ಎಂದರು.
ವಿದ್ವತ್, ಪಾಂಡಿತ್ಯ ಅನಾಯಾಸವಾಗಿ ದಕ್ಕುವಂತಹದ್ದಲ್ಲ. ಅದರಲ್ಲಿ ವ್ಯಕ್ತಿಯ ವ್ಯಕ್ತಿತ್ವ ಅದರಲ್ಲಿ ಸವೆಸಬೇಕಾಗುತ್ತದೆ. ಪುರುಷರನ್ನು ಪ್ರೀಯಾಗಿ ಬಿಡುವ, ಸ್ತ್ರೀಯರನ್ನು ಸಂಕುಚಿತಗೊಳಿಸುವ ಪರಿಪಾಠ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬೆಳೆದು ಹಿಂದಿನಿಂದಲೂ ಬಂದಿರುವುದು ವಿಷಾದದ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿದ್ದ ಗುಲ್ಬರ್ಗ ವಿವಿ ವಾಣಿಜ್ಯ ನಿಕಾಯದ ಡೀನ್ ಪ್ರೊ. ಸಿ.ಎಸ್. ಬಸವರಾಜ ಮಾತನಾಡಿ, ಎಲ್ಲರನ್ನು ಗುರುತಿಸುವ, ಗೌರವಿಸುವ, ಪ್ರೀತಿಸುವ ಹಾಗೂ ಸನ್ಮಾನಿಸುವುದು ಶ್ಲಾಘನೀಯ ಕಾರ್ಯ ಎಂದರು.
ಸಮಾಜ ಕೊಡುವ ಗೌರವಾದಾರಗಳು ನಮಗೆ ಆತ್ಮತೃಪ್ತಿ ಕೊಡುವಂತಿರಬೇಕು. ಭಗವಾನ್ ಬುದ್ಧ ಹೇಳುವಂತೆ ಯಶಸ್ವಿ ಜೀವನವನ್ನು ಬೇರೆಯವರು ಅಳೆಯುತ್ತಾರೆ. ಆದರೆ ಸಂತೃಪ್ತಿಯನ್ನು ನಮ್ಮನ್ನು ನಾವು ಅಳೆದುಕೊಳ್ಳಬಹುದು. ಪ್ರಶಸ್ತಿ ಪುರಸ್ಕಾರಗಳು ಸಾಧನೆಗೆ ಸ್ಫೂರ್ತಿ ನೀಡಬಲ್ಲವು ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಬೀದರ್ ಕರ್ನಾಟಕ ಕಾಲೇಜು ಪ್ರಾಚಾರ್ಯ ಡಾ. ಜಗನ್ನಾಥ ಹೆಬ್ಬಾಳೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ ಮಾತನಾಡಿದರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿದ್ಧಲಿಂಗ ದಬ್ಬಾ ನಿರೂಪಿಸಿದರು. ಡಾ. ಸಂತೋಷ ಕಂಬಾರ ಸ್ವಾಗತಿಸಿದರು.
ಸಿದ್ಧರಾಮ ಹೊನ್ಕಲ್, ಪ.ಮಾನು ಸಗರ, ಶರಣಗೌಡ ಪಾಟೀಲ ಪಾಳಾ, ಡಾ.ಸಂಗಮೇಶ ಹಿರೇಮಠ ಇತರರು ಇದ್ದರು.
ಸೇವಾ ವಯೋನಿವೃತ್ತಿ ಹೊಂದಿದ ಡಾ. ಶ್ರೀಶೈಲ ನಾಗರಾಳ, ಡಾ. ಬಿದರಿ ಚಂದ್ರಭಾಗ ಹಾಗೂ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಎಚ್.ಟಿ. ಪೋತೆ, ಡಾ. ಕಲ್ಯಾಣರಾವ ಪಾಟೀಲ, ಡಾ. ಚೆನ್ನಬಸಯ್ಯ ಹಿರೇಮಠ, ಮುಮ್ತಾಜ್ ಬೇಗಂ ಡಾ. ಶ್ರೀಶೈಲ ನಾಗರಾಳ, ಪ್ರಭುಲಿಂಗ ನಿಲೂರೆ, ಡಾ. ಚಿ.ಸಿ. ನಿಂಗಣ್ಣ, ಶರಣಪ್ಪ ಆನೇಹೊಸೂರ, ಕಪಿಲ ಹುಮನಾಬಾದೆ ಅವರನ್ನು ಸನ್ಮಾನಿಸಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…