ಬಿಸಿ ಬಿಸಿ ಸುದ್ದಿ

ಸುರಪುರ: ನಿಷ್ಠಿ ಕಡ್ಲಪ್ಪನವರ ವಿರಕ್ತಮಠದಲ್ಲಿ ಶ್ರಾವಣ ಶ್ರವಣ ಶಿವಾನುಭವ ಚಿಂತನ

ಸುರಪುರ: ಶರಣರು ಕಾಯಕದಲ್ಲಿ ಸಮಾನತೆಯನ್ನು ಸಾರಿದರು.ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು ಶ್ರಾವಣಮಾಸದಲ್ಲಿ ಶರಣರು ದಾರ್ಶನಿಕರ ವಚನಗಳನ್ನು ಶ್ರವಣ ಮಾಡುವುದರ ಮೂಲಕ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಶ್ರೀ .ಮ.ನಿ.ಪ್ರ.ಪ್ರಭುಲಿನಗ ಮಹಾಸ್ವಾಮಿಗಳು ಶ್ರೀ ನಿಷ್ಟಿ ಕಡ್ಲಪ್ಪನವರ ವಿರಕ್ತಮಠದಲ್ಲಿ ಜರುಗಿದ ಶ್ರಾವಣ-ಶ್ರವಣ ಶಿವಾನುಭವ ಚಿಂತನದ ದಿವ್ಯ ಸಾನಿದ್ಯ ವಹಿಸಿ ನುಡಿದರು. ಮುಂದುವರೆದು ಮಾತನಾಡಿದ ಅವರು ಮಾನವೀಯ ಮೌಲ್ಯಗಳು ಜೀವನಾಧಾರವಾಗಿದ್ದು ಮೌಲ್ಯಯುತ ಜೀವನ ಸಾಗಿಸಿರಿ ಎಂದರು.

ಶರಣರ ವಚನಗಳಲ್ಲಿ ಕಾಯಕ ಮತ್ತು ಸಮಾನತೆ ಕುರಿತು ಚಿಂತನ ಮಾಡಿದ ಡಾ.ಮಲ್ಲಿಕಾರ್ಜುನ ಕಮತಗಿಯವರು,ಶರಣರು ಕಾಯಕಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದರು ಉದಾರಣೆಗೆ ಆಯ್ದಕ್ಕಿ ಲಕ್ಕಮ್ಮ ತಮ್ಮ ವಚನದಲ್ಲಿ ಕಾಯಕದಲ್ಲಿ ನಿರತನಾದರೆ ಲಿಂಗ ಮುಂದಿದ್ದರೂ ಹಂಗು ಹರಿಯಬೇಕು ಜಂಗಮ ಮುಂದಿದ್ದರೂ ಹಂಗು ಹರಿಯಬೇಕು ಗುರು ಮುಂದಿದ್ದರೂ ಹಂಗು ಹರಿಯಬೇಕು ಏಕೆಂದರೆ ಕಾಯಕವೇ ಕೈಲಾಸ ಎನ್ನುವ ವಚನದಲ್ಲಿ ಕಾಯಕದ ಮಹತ್ವವನ್ನು ಸುಂದರವಾಗಿ ವಿವರಿಸಿದ್ದಾರೆ.

ಶರಣರು ತಮ್ಮ ಜೀವನದಲ್ಲಿ ದುಡಿಯದೇ ಯಾವುದನ್ನು ಸ್ವೀಕರಿಸಬಾರದು ದುಡಿಮೆಯೇ ಭಗವಂತನನ್ನು ಕಾಣುವ ಏಕೈಕ ಮಾರ್ಗ ಎನ್ನುವ ತತ್ವದಡಿಯಲ್ಲಿ ಜೀವನವನ್ನು ಸಾಗಿಸಿ ಪಾವನ ಗೊಳಿಸಿದರು ಹಲವಾರು ಶರಣರ ವಿಚಾರಧಾರೆಗಳನ್ನು ಮಂಡಿಸುತ್ತಾ ಶರಣರು ತಮ್ಮ ಅನುಭವದ ಮೂಲಕ ಹೆಣ್ಣು-ಗಂಡು ಬೇರೆಯಲ್ಲ ಹೆಣ್ಣಿಗೂ ಸಮಾನವಾಗಿರುವಂತ ಅವಕಾಶಗಳನ್ನು ನೀಡಬೇಕು ಹೆಣ್ಣು-ಗಂಡು ಭೇದಭಾವ ಸರಿಯಲ್ಲ ಮೊಲೆ ಮೂಡಿ ಬಂದಿದೆ ಹೆಣ್ಣೆಂಬರು ಮೀಸೆ ಮೂಡಿ ಬಂದಿದೆ ಗಂಡೆಂಬರು ನಡುವೆ ಸುಳಿದಾಡುವ ಆತ್ಮಕ್ಕೆ ಗಂಡು ಇಲ್ಲ ಹೆಣ್ಣು ಇಲ್ಲ ಎಲ್ಲರೂ ಸಮಾನರು ಎಂದು ಹೇಳಿದರು.

ಶರಣಪ್ಪ ಆಂದೋಲ ಸತ್ಯಂಪೇಟರವರು ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು ಶಿವಶರಣಯ್ಯ ಸ್ವಾಮಿ ಬಳುಂಡಗಿಮಠ ಸಂಗಡಿಗರು ಪ್ರಾರ್ಥನೆಯನ್ನು ಎಚ್.ರಾಠೋಡ ನಿರೂಪಣೆಮಾಡಿದರು ಶರಣಬಸಪ್ಪ ಯಾಳವಾರ ಸ್ವಾಗತಿಸಿದರು ರಾಜಶೇಖರ ದೇಸಾಯಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ದೇವು ಹೆಬ್ಬಾಳ ವಂದನಾರ್ಪಣೆಯನ್ನು ವಿಜಯಲಕ್ಷಿ ಯಾದವ ಮಂಗಲಗೀತೆಯನ್ನು ಹಾಡಿದರು.

ಸಂಗೀತ ಕಾರ್ಯಕ್ರಮವನ್ನು ಮೋಹನ್ ರಾವ್ ಮಾಳದಕರ ಪ್ರಾಣೇಶರಾವ್ ಕುಲಕರ್ಣಿ ವಿಜಯಲಕ್ಷ್ಮಿ ಯಾದವ ರಾಜಶೇಖರ ಗೆಜ್ಜಿ ಉಮೇಶ ಯಾದವ ರಮೇಶ್ ಕುಲ್ಕರ್ಣಿ ಮಹಾಂತೇಶ ಶಹಪೂರಕರ ನಡೆಸಿಕೊಟ್ಟರು.ಪ್ರಮುಖರಾದ ಬಸವರಾಜ ಜಮದ್ರಖಾನಿ ಕೊಟ್ರಯ್ಯಸ್ವಾಮಿ ಬಳುಂಡಗಿಮಠ ನ್ಯಾಯವಾದಿಗಳಾದ ಶಿವಾನಂದ ಅವಂಟಿ ದೇವಪ್ಪ ಜೋಗಿನ್ ಮಾಳಪ್ಪ ಮಾಳಳ್ಳಿ ಮಲ್ಲಿಕಾರ್ಜುನ ದ್ಯಾವಪ್ಪ ಅಂಬರೀಶ್ ಇತರರು ಉಪಸ್ಥಿತರಿದ್ದರು

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago