ಬಿಸಿ ಬಿಸಿ ಸುದ್ದಿ

ಪ್ರಸಾದತತ್ವ ಸಾರಿದ ಬಿಬ್ಬಿ ಬಾಚರಸ

ತೆಲುಗು ಕವಿ ಪಾಲ್ಕುರಿಕೆ ಸೋಮನಾಥ ರಚಿಸಿದ “ಬಸವ ಪುರಾಣ” ಕೃತಿಯು ಕೇವಲ ಬಸವಣ್ಣನವರಿಗೆ ಮಾತ್ರ ಸಂಬಂಧಿಸಿರದೆ ಇತರ ಶರಣರ ಕುರಿತಾಗಿಯೂ ಹೆಚ್ಚಿನ ಮಾಹಿತಿ ಒದಗಿಸುತ್ತದೆ. ಶರಣರೆಲ್ಲರ ಕಾಯಕನಿಷ್ಠೆ ಹಾಗೂ ತತ್ವನಿಷ್ಠೆಯಿಂದಲೇ ಬಸವಣ್ಣತನದ ಉದಯವಾಯಿತು ಎಂಬುದನ್ನು ಪ್ರಮಾಣೀಕರಿಸುವ ಕೃತಿ ಇದು.

ಪ್ರಸಾದ ಹಂಚುವ ಕಾಯಕ ಮಾಡುತ್ತಲೇ ಪ್ರಸಾದದ ಮಹತ್ವ ತಿಳಿಸಿಕೊಡುತ್ತಿದ್ದ ಬಿಬ್ಬಿ ಬಾಚರಸನ ಕುರಿತು ವಿವರವಾಗಿ, ವಿಸ್ತಾರವಾಗಿ ಹಾಗೂ ಅಷ್ಟೇ ಓತಪ್ರೋತವಾಗಿ ಬರೆದಿರುವುದನ್ನು ಗಮನಿಸಬಹುದು. ಬಿಬ್ಬಿ ಬಾಚರಸ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೊಬ್ಬೂರಿನವರು. ಆಗ ಇದು ಪ್ರಮುಖ ಅಗ್ರಹಾರ ಕೇಂದ್ರವಾಗಿತ್ತು. ವಿಪ್ರ ಕುಲದಲ್ಲಿ ಹುಟ್ಟಿದ ಬಾಚರಸ ವೈದಿಕ ಸಂಪ್ರದಾಯ ಒಲ್ಲದೆ ಲಿಂಗ ಸಂಪ್ರದಾಯ ಒಪ್ಪಿಕೊಂಡು ಬಸವಣ್ಣನವರ ಅನುಯಾಯಿಯಾದವರು. ಇದರಿಂದಾಗಿ ಆಗ ಅಲ್ಲಿ ವೈದಿಕರು ಮತ್ತು ಶರಣರ ಮಧ್ಯೆ ಸಂಘರ್ಷ ನಡೆದಿಯಿತು ಎಂಬುದರ ಮಹತ್ವದ ಉಲ್ಲೇಖವಿದೆ.

ಪ್ರಸಾದಿ ಜೀವನ ನಡೆಸುತ್ತಿದ್ದ ಬಾಚರಸ ತನ್ನ ಊರೊಳಗಿನ ಮನೆ, ಮನೆಗೆ ತೆರಳಿ ಬೇಯಿಸಿದ ಆಹಾರವನ್ನು ಸಂಗ್ರಹ ಮಾಡಿಕೊಂಡು ಬರುತ್ತಿದ್ದ ಎಂದು ಕಾಣಿಸುತ್ತದೆ. ತನ್ನ ಮಠದ ಅನುಯಾಯಿಗಳಿಗೆ ಆ ಪ್ರಸಾದವನ್ನು ಹಂಚುತ್ತಿದ್ದ. ಮದುವೆ, ದೇವರ ಉತ್ಸವ ಮುಂತಾದ ಕಾರ್ಯಕ್ರಮಗಳಿಗೆ ತನ್ನ ಅನುಯಾಯಿಗಳ ಜೊತೆಗೆ ತೆರಳಿ ಕಾರ್ಯಕ್ರಮ ಮುಗಿದ ನಂತರ ಮಿಕ್ಕ ಆಹಾರವನ್ನು ತನ್ನ ಅನುಯಾಯಿಗಳಿಗೆ, ಬಡವರಿಗೆ ಹಸಿದವರಿಗೆ ಹಂಚುತ್ತಿದ್ದನೇನೋ ಎಂಬ ಸಂಶಯ ಬರುತ್ತದೆ. ಅಂತಯೇ ಊರಿನ ಬಹುತೇಕರು ಜನರು ಅವರ ಜೊತೆಗೆ ಇರುತ್ತಿದ್ದರು.

ಬಿಬ್ಬಿ ಬಾಚರಸನ ಈ ಕಾಯಕವು ಕೆಲವರಿಗೆ ಇರಿಸು ಮುರಿಸು ಆಗುವಂತೆ ಮಾಡಿತು. ಎಂಜಲು ತಂದು ಹಂಚಿ ಊರೆಲ್ಲ ಹೊಲಸು ಮಾಡುತ್ತಿರುವೆ ಎಂದು ಹೀಯಾಳಿಸಿ ಅವನ ಕಾರ್ಯವನ್ನು ವಿರೋಧಿಸಿದರು. ಪ್ರಸಾದ ತುಂಬಿದ ಆತನ ಬಂಡಿಯನ್ನು ಒಮ್ಮೆ ತಡೆದು ನೋಡಿದಾಗ, ಪ್ರಸಾದದ ಬದಲು ಅಲ್ಲಿ ಬೆಂಕಿ ಕಾಣಿಸಿತು. ಬೆಂಕಿಯಿಂದ ರಕ್ಷಿಸಿಕೊಳ್ಳಲು ಅಲ್ಲಿರುವ ಗಡಿಗೆಬಾವಿಗೆ ಹಾರಿ ಅವಿತುಕೊಂಡರು ಎಂಬಿತ್ಯಾದಿ ಪವಾಡಸದೃಶ ಕಥೆಗಳು ಈ ಕೃತಿಯಲ್ಲಿವೆ.

ಬಸವ ಪುರಾಣದಲ್ಲಿ ಬರುವ ಪ್ರಸ್ತಾಪ ಹಾಗೂ ಉಲ್ಲೇಖಗಳ ಅನ್ವಯ ಗೊಬ್ಬೂರಿನಲ್ಲಿ ಗಂಜಿಗುಡಿ ಮಠ, ಗಡಿಗೆ ಬಾವಿ, ಸಮಾದಿ, ಅರ್ಪಣ ಕಟ್ಟೆ ಮುಂತಾದ ಸ್ಮಾರಕಗಳು ಈಗಲೂ ಕಾಣಸಿಗುತ್ತವೆ. ಈ ಸ್ಮಾರಕಗಳು ಬಿಬ್ಬಿ ಬಾಚರಸ ಇದೇ ಊರಿನವರು ಎಂಬುದಕ್ಕೆ ಪ್ರಬಲ ಸಾಕ್ಷಿ ಒದಗಿಸುತ್ತವೆ. ವೈದಿಕರು ಹಾಗೂ ಶರಣರ ನಡುವೆ ಆಗ ನಡೆದಿರಬಹುದಾದ ಸಂಘರ್ಷದ ಘಟನೆ ಕುರಿತು ಚೆನ್ನಬಸವಣ್ಣ, ಸಕಲೇಶ ಮಾದರಸ, ಉರಿಲಿಂಗ ಪೆದ್ದಿ, ಬಾಲ ಬೊಮ್ಮಣ್ಣ, ಷಣ್ಮುಖ ಶಿವಯೋಗಿಗಳ ವಚನಗಳಲ್ಲಿ ಕೂಡ ಉಲ್ಲೇಖ ಬರುತ್ತದೆ.

ಪ್ರಸಾದದಲ್ಲಿ ಕುಲ ಜಾತಿಗಳಿಲ್ಲ. ನಮ್ಮ ಮೈ ಮನಗಳೆಲ್ಲವೂ ಕೂಡಲಸಂಗಮದೇವನೊಲಿಸುವ ಪ್ರಸಾದಕಾಯ. ಅದನ್ನು ಕೆಡಿಸಲಾಗದು ಎಂದು ಹೇಳುತ್ತಿದ್ದ ಬಾಚರಸರು ಬಸವತತ್ವ ಪ್ರಸಾರ ಮಾಡಿದ ಪ್ರಮುಖ ಪ್ರಮಥರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

9 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

9 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

11 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

11 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

12 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

12 hours ago