ಸುರಪುರ:ರಾಜ್ಯದಲ್ಲಿನ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ ತೋರುತ್ತಿರುವ ಸರಕಾರದ ನಡೆಯನ್ನು ಖಂಡಿಸಿ ಹಾಗು ನಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇದೆ ೧೬ನೇ ತಾರೀಖಿನಿಂದ ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಟ ಸತ್ಯಾಗ್ರಹ ಆರಂಭಿಸುತ್ತಿರುವುದಾಗಿ ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಸುರೇಖಾ ಕುಲಕರ್ಣಿ ತಿಳಿಸಿದರು.
ನಗರದ ಟೈಲರ್ ಮಂಜಿಲ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,ಅಂಗನವಾಡಿ ನೌಕರರು ಕಡಿಮೆ ಸಂಬಳ ಮತ್ತು ಸವಲತ್ತುಗಳಿಗಾಗಿ ಕೆಲಸ ಮಾಡುತ್ತಿದ್ದು,ಕೊರೊನಾ ಸಂದರ್ಭದಲ್ಲಿ ಕೆಲಸದ ಒತ್ತಡದಿಂದ ೩೫ ಜನರು ಮೃತಪಟ್ಟರೆ ಇನ್ನು ಕೊರೊನಾ ಕೆಲಸ ಮಾಡುವಾಗ ೨೮ ಜನರು ತಮ್ಮ ಜೀವನಗಳನ್ನು ಮುಡುಪಾಗಿಟ್ಟು ಬಲಿಯಾಗಿದ್ದಾರೆ.ಅಲ್ಲದೆ ೧೭೩ ಜನ ಕೊರೊನಾ ಸೊಂಕಿಗೆ ಒಳಗಾಗಿದ್ದಾರೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಕೊರೊನಾ ಸೊಂಕಿನಿಂದ ೧೬ ಜನರು ಮೃತಪಟ್ಟಿದ್ದಾರೆ.
ಆದರೆ ಇವರ‍್ಯಾರಿಗೂ ಕೊರೊನಾ ಪರಿಹಾರ ಸಿಕ್ಕಿಲ್ಲ.ಅಲ್ಲದೆ ರಾಜ್ಯದ ಹೈಕೋರ್ಟ್ ಕೊರೊನಾ ಸಂದರ್ಭದಲ್ಲಿ ಮಕ್ಕಳ ಮತ್ತು ಮಹಿಳೆಯರ ಅಪೌಷ್ಠಿಕತೆ ತಡೆಯಲು ಪೌಷ್ಠಿಕ ಆಹಾರ ಫಲಾನುಭವಿಗಳಿಗೆ ತಲುಪಿಸಿ ಖಾತ್ರಿಪಡಿಸುವಂತೆ ತಿಳಿಸಿದಾಗಲೂ ಅಂಗನವಾಡಿ ನೌಕರರು ತಮ್ಮ ಪ್ರಾಣ ಪಣಕ್ಕಿಟ್ಟು ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿದ್ದೇವೆ.ಅಲ್ಲದೆ ಮಲೆನಾಡು ಗುಡ್ಡಗಾಡು ಕೊಳಚೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಆಹಾರ ಸಾಮಾಗ್ರಿಗಳನ್ನು ಮನೆ ಮನೆಗೆ ತಲುಪಿಸಿದ್ದೇವೆ.ಇಂತಹ ಎಲ್ಲಾ ಕೆಲಸವನ್ನು ಮೆಚ್ಚಿದ ಮುಖ್ಯಮಂತ್ರಿಗಳು ಜೂನ್ ೯ ರಂದು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.ಆದರೆ ನಮಗೆ ಸೌಲಭ್ಯಗಳನ್ನು ಮಾತ್ರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ನಮ್ಮ ಪ್ರಮುಖ ಬೇಡಿಕೆಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭೀವೃಧ್ಧಿ ಇಲಾಖೆ ಶಿಫಾರಸ್ಸು ಮಾಡಿರುವ ೩೩೯.೪೮ ಲಕ್ಷ ಅನುದಾನ ಬಿಡುಗಡೆ ಮಾಡಬೇಕು.ಕೋಳಿ ಮೊಟ್ಟೆ ಸರಬರಾಜಿನಲ್ಲಾಗಿರುವ ಭ್ರಷ್ಟಾಚಾರವನ್ನು ತನಿಖೆಗೊಳಪಡಿಸಬೇಕು ಮತ್ತು ಅನುದಾನ ಮುಂಗಡವಾಗಿ ನೀಡುವಂತಾಗಬೇಕು.ಅನುಕಂಪದ ಆಧಾರದಲ್ಲಿ ಕೆಲಸ ಕೊಡುವಾಗ ಮಗಳ ಬದಲಾಗಿ ಕುಟುಂಬದ ಸದಸ್ಯರಿಗೆ ಕೆಲಸ ನೀಡುವಂತಾಗಬೇಕು.೨೦೧೬ ರಿಂದ ನಿವೃತ್ತಿಯಾದ ಸುಮಾರು ೭೧೬೬ ಅಂಗನವಾಡಿ ನೌಕರರಿಗೆ ಬಾಕಿ ಇರುವ ಇಡಗಂಟು ಕೊಡಬೇಕು ಮತ್ತು ೨೦೧೫ ರಿಂದ ನೇಮಕವಾಗಿರುವವರಿಗೆ ಜೀವ ವಿಮಾ ಆಧಾರಿತ ಸೌಲಭ್ಯ ನೀಡಬೇಕು ಹಾಗು ಎನ್.ಪಿ.ಎಸ್.ಲೈಟ್ ಅನ್ವಯ ಆದವರಿಗೆ ೩ ರಿಂದ ೫ ಲಕ್ಷ ಇಡಗಂಟು ನೀಡಬೇಕು.
ಕೊರೊನಾ ಕೆಲಸದ ಒತ್ತಡದಿಂದ ನಿಧನರಾದವರಿಗೆ ೧ ಲಕ್ಷ ನೀಡಬೇಕು.ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಕನಿಷ್ಠ ೨೧ ಸಾವಿರ ವೇತನ ನೀಡಬೇಕು ಎಂಬುದು ಸೇರಿದಂತೆ ೨೧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ ೧೬ ನೇ ತಾರೀಖಿನಿಂದ ಅಮರಣಾಂತ ಸತ್ಯಾಗ್ರಹ ಆರಂಭಿಸಲಾಗುವುದು.೧೬ ರಂದು ಯಾದಗಿರಿ ನೌಕರರು,೧೭ ರಂದು ಶಹಾಪುರ ಮತ್ತು ೧೮ ರಂದು ಸುರಪುರ ನೌಕರರು ಧರಣಿಯಲ್ಲಿ ಭಾಗವಹಿಸಲಿದ್ದಾರೆ,ಇದರಂತೆ ನಮ್ಮ ಬೇಡಿಕೆಗಳು ಈಡೇರುವ ವರೆಗೆ ಧರಣಿ ಮುಂದುವರೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಬಸಮ್ಮ ಆಲ್ಹಾಳ,ಗೌರವಾಧ್ಯಕ್ಷ ಪ್ರಭಾವತಿ ಕುಲಕರ್ಣಿ,ಹುಣಸಗಿ ತಾಲೂಕು ಅಧ್ಯಕ್ಷ ನಸೀಮಾ ಮುದನೂರು,ರಾಧಾಬಾಯಿ ಲಕ್ಷ್ಮೀಪುರ,ದಲಿತ ಹಕ್ಕುಗಳ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಆಲ್ಹಾಳ,ಬಿಸಿಯೂಟ ತಾಲೂಕು ಅಧ್ಯಕ್ಷ ಶಹಾಜಾದಿ ಬೇಗಂ,ಪರವಿನ್ ಶರ್ಕಿಮೊಹಲ್ಲಾ ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…