ಭಾರತವೆಂದರೆ ಕೇವಲ ಕಾಶ್ಮೀರವಲ್ಲ. ಕೇರಳ ಅಥವಾ ಕರ್ನಾಟಕವೂ ಅಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವುದೆಲ್ಲವೂ ಭಾರತ, ಭವ್ಯ ಭಾರತ! ಭಾರತದ ಆತ್ಮವೇ ಅಧ್ಯಾತ್ಮ. ಭಾರತದ ತತ್ವ ಅದು ಬಸವತತ್ವ. ಬಸವಣ್ಣನವರು ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಭಾರತ ಕಟ್ಟಿದರು. ಭಾರತವೆಂದರೆ ಕಾಯಕ-ದಾಸೋಹ, ಸಮಾನತೆ, ಶೀವಯೋಗ, ಶಿವಾನುಭವ. ಹೀಗೆ ಬಸವ ಭಾರತಕ್ಕೆ ಹಲವು ಮುಖಗಳಿವೆ. ಅವುಗಳು ನಮ್ಮನ್ನು ಶಿವಪತದತ್ತ, ಸತ್ಪಥದತ್ತ ತೆಗೆದುಕೊಂಡು ಹೋಗುವ ಮುಕ್ತಕಗಳು, ಸತ್ಯನುಡಿಗಳು, ಸೂಳ್ನುಡಿಗಳು.
ಈ ನಾಡು ನುಡಿಗೆ ಸೇವೆ ಸಲ್ಲಿಸಿದ ಶರಣರು ಸದಾ ಸ್ಮರಣೀಯರು. ಸಮವಿಲ್ಲದ ಬೆರಳುಗಳಿಂದಲೇ ಸಮಾನತೆ ತಂದ ಶರಣರ ಬದುಕು ಹಾಗೂ ಬರಹ ಅನುಕರಣೀಯ. ಕುಲ-ಮತದ ಹೋರಾಟದಲ್ಲಿ ಒಂದೇ ಎಂದು ಹೇಳಿ, ಲಿಂಗದಲ್ಲಿಯೇ ಸುಖವೆಂದು ಅರುಹಿದರು. ದೊಡ್ಡದು, ಸಣ್ಣಾದಾಗಬೇಕು, ಸಣ್ಣದು ದೊಡ್ಡದಾಗಬೇಕು, ಬಾಗಿದ ಬಿದಿರು ಪಲ್ಲಕ್ಕಿ ಆಗುವಂತೆ, ಬಾಗಿದ ಬಾಳೆ ರುಚಿಯಾದ ಹಣ್ಣಾಗುವಂತೆ ಬಾಳಬೇಕು, ಬದುಕಬೇಕು, ಅನುಭವಿಸಬೇಕು ಎಂದು ಅನುಭಾವದ ನುಡಿಗಡಣ ಅರಹಿದವರು.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರಿನ ಆದ್ಯ ವಚನಕಾರ ಜೇಡರ ದಾಸಿಮಯ್ಯ ಹಾಗೂ ಗೊಬ್ಬೂರಿನ ಮಲ್ಲಿನಾಥ-ಮಹಾದೇವಿಯ ಪುತ್ರಿ ದುಗ್ಗಳಾದೇವಿ ಶರಣರು ಒಪ್ಪಿದ ದಾಂಪತ್ಯ ಒಪ್ಪಿ ಬಾಳಿ ಬದುಕಿದವರು. ಅಕ್ಕ, ಅಲ್ಲಮ, ಸಿದ್ಧರಾಮ ಮತ್ತಿತರರನ್ನು ಹೊರತುಪಡಿಸಿದರೆ ಉಳಿದೆಲ್ಲ ಶರಣರು ತುಂಬು ಜೀವನ ಬಾಳಿ ಬದುಕಿದವರು.
ಅದರಂತೆ ಈ ದಾಸಿಮಯ್ಯ ದಂಪತಿ ಭಗವಂತನಿಗೆ ಪ್ರಿಯವಾಗುವ, ದೇವರ ಮನಸ್ಸು ಮುಟ್ಟುವ ಹಾಗೆ ಬದುಕಿದರು. ದೇವನನ್ನು ಹಾಸಿ, ಹೊದ್ದು ಬಾಳಿದವರು. ಹಣ, ಆಸ್ತಿ, ಅಧಿಕಾರ, ಅಂತಸ್ತು, ಸಂಪತ್ತು ಒಲ್ಲೆ ಎಂದ ಈ ದಂಪತಿ ಶರಣರ ಸೂಳ್ನುಡಿ ಒಂದರಗಳಿಗೆ ಮಾತ್ರ ಸಾಕು, ಬೇಕು ಎಂದರು. ನೀರಿಲ್ಲದೆ ಪಾದೋದಕದಿಂದ ಅನ್ನ ಮಾಡಿಕೊಟ್ಟ ದುಗ್ಗಳೆ ಮತ್ತು ಮೃಡ ಶರಣರ ನುಡಿಗಡಣವೇ ಕಡೆಗೀಲು ಎಂದು ಹೇಳಿದ ದಾಸಿಮಯ್ಯನವರು “ಸತಿಪತಿಗಳೊಂದಾದ ಭಕ್ತಿ ಹಿತವಗಿಪ್ಪುದು ಶಿವಂಗೆ” ಎಂಬಂತೆ ಬಾಳಿದವರು.
ಬಂದುದನ್ನು ಅರಿದು ಬಳಸುವ, ಪರಿಣಾಮಿಸುವ ದುಗ್ಗಳಾದೇವಿ ಬದುಕಿನಲ್ಲಿ ಎದುರಾದ ಎಡರು, ತೊಡರುಗಳಿಗೆ ಮಾತ್ರ ಪರಮಾತ್ಮನನ್ನು ಧ್ಯಾನಿಸದೆ, ಸದಾ ತನ್ನ ಹೃನ್ಮಂದಿರದಲ್ಲಿಯೇ ರಾಮನಾಥನನ್ನುನೆಲೆಗೊಳಿಸಿಕೊಂಡಿದ್ದಳು. ಹೀಗಾಗಿಯೇ ದುಗ್ಗಳೆಯನ್ನು ತಂದು ಬದುಕಿದೆ ಕಾಣಾ! ಹ್ಯೇಯವಲ್ಲ ಸಂಸಾರ ಸುಖವದು, ಮಧುರಾತಿ ಮಧುರ. ಕಟ್ಟಿಕೊಂಡ ಸತಿಯನ್ನು ಸಾಕ್ಷಾತ್ ಗೌರಿ ಎಂದು ಪರಿಭಾವಿಸಿದರೆ ಇಡೀ ಭೂ ಮಂಡಲಕ್ಕೆ ಅರಸರಾಗುವವರು ಎಂದು ದಾಸಿಮಯ್ಯನವರು ಹೇಳಿದ್ದಾರೆ. ಹೇಮ ನಿನ್ನದಲ್ಲ ಭೂಮಿ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ ಇವು ಜಗಕ್ಕಿಕ್ಕಿದ ವಿಧಿ! ನಿನ್ನೊಡವೆ ಎಂಬುದು ಜ್ಞಾನರತ್ನ ಎಂದು ಹೇಳಿದ ಅಲ್ಲಮನ ವಚನದಂತೆ ಬಾಳಿ ಬದುಕಿದವರು.
ಎಂಬ ಕಿಂಕರ ಭಾವ ತಾಳಿದ್ದ ಅವರುಗಳು, ದೇವರ ಎದುರಿಗೆ ನಿಂತು ಅದು ಕೊಡು, ಇದು ಕೊಡು ಎಂದು ಬಿಕ್ಷೆ ಬೇಡಲಿಲ್ಲ. ಏಕೆಂದರೆ ಬೇಡುವುದು ಪ್ರಾರ್ಥನೆಯಲ್ಲ ಎಂದು ಅವರು ಅರಿತಿದ್ದರು. ಹೀಗಾಗಿಯೇ “ಕಣ್ಣ ಮುಂದೆ, ಬೆನ್ನ ಹಿಂದೆ ನೀ ಇರು ತಂದೆ” ಎಂದು ಪ್ರಾರ್ಥಿಸಿದರು. ಪರಧನ, ಪರವಧುವಿಗೆ ಎಳಸದಂತೆ ನಮ್ಮನ್ನು ಕರುಣಿಸು ಎಂದು ದೇವರಲ್ಲಿ ಮೊರೆಯಿಟ್ಟರು. ನುಡಿದಂತೆ ನಡೆದು ತೋರಿದರು. ಸುಖದ ಜೀವನಾಡಿಯಾಗಿರುವ ಶರಣ ಮಾರ್ಗ ನಮ್ಮದಾಗಬೇಕಿದೆ.
(ಸ್ಥಳ: ಬಸವ ಸಮಿತಿ ಅನುಭವ ಮಂಟಪ, ಜಯನಗರ, ಕಲಬುರಗಿ)
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…