ಶಹಾಬಾದ: ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧರಿಗೆ ಗ್ರಾಮದಿಂದ ಅದ್ದೂರಿಯಾಗಿ ಸ್ವಾಗತ ಮಾಡಿ ತಮ್ಮೂರಿನ ವೀರಯೋಧರಿಗೆ ಬರಮಾಡಿಕೊಂಡರು.
ಕಲಬುರಗಿ ಜಿಲ್ಲೆ ಶಹಬಾದ ತಾಲೂಕಿನ ಮರತೂರು ಗ್ರಾಮದಲ್ಲಿ ಗ್ರಾಮದ ಮೂವರು ಯೋಧರಿಗೆ ಭವ್ಯವಾದ ಸ್ವಾಗತ ಕೋರಲಾಯಿತು. ಸೇನೆ ಹಾಗೂ ಬಿಎಸ್‍ಎಫ್‍ನಲ್ಲಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮರತೂರು ಗ್ರಾಮದ ಶರಣಪ್ಪ ದುಗ್ಗೊಂಡ, ಜಗದೀಶ್ ಠಾಕೂರ್ ಮತ್ತು ಶಿವಾನಂದ ಧರ್ಮಾಪುರ ಅವರನ್ನು ಗ್ರಾಮದ ಅಂಬೇಡ್ಕರ್ ವೃತ್ತದಿಂದ ತೆರೆದ ಜೀಪಿನಲ್ಲಿ ಗ್ರಾಮಸ್ಥರು ತ್ರೀವರ್ಣ ಧ್ವಜಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ, ಇಡೀ ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿ, ವಂದೇ ಮಾತಾರಂ, ಭಾರತ್ ಮಾತಾಕೀ ಜೈ ಎಂಬ ಜಯಘೋಷ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಅಲ್ಲದೆ ಗ್ರಾಮದ ಮಹಿಳೆಯರು ಆರತಿ ಎತ್ತಿ ತಿಲಕವಿಟ್ಟು ಆತ್ಮೀಯವಾಗಿ ತಮ್ಮೂರಿನ ವೀರಯೋಧರನ್ನ ಬರಮಾಡಿಕೊಂಡರು.
ಭಾರತೀಯ ಗಡಿ ಭದ್ರತಾ ಪಡೆ, ಭಾರತೀಯ ಸೇನೆಯಲ್ಲಿ ಜಮ್ಮು ಕಾಶ್ಮೀರ, ಜಾಖಾರ್ಂಡ್, ಗುಜರಾತ್, ಪಂಜಾಬ್ ಗಡಿ ಸೇರಿದಂತೆ ದೇಶದ ಹಲವು ಗಡಿಗಳಲ್ಲಿ ಸೇವೆ ಸಲ್ಲಿಸಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ದೇಶ ಸೇವೆ ಮಾಡಬೇಕೆಂಬ ಇಚ್ಛೆಯಿಂದ ಒಂದೇ ಗ್ರಾಮದ ಮೂವರು ಯೋಧರು ಸೇನೆಗೆ ಸೇರಿದ್ದರು.
ಇದೀಗ ಸುದೀರ್ಘ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ್ದಾಗ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದ್ದನ್ನು ಕಂಡು ಸೈನಿಕರು ಭಾವುಕರಾದರು.ರಾಜಕಾರಣಿಗಳಿಗೆ ಅದ್ದೂರಿ ಮೆರವಣಿಗೆ ಸನ್ಮಾನ ಮಾಡುವ ಜನರ ಮಧ್ಯೆ, ಮರತೂರು ಗ್ರಾಮಸ್ಥರು ದೇಶ ಸೇವೆ ಮಾಡಿ ಬಂದ ವೀರಯೋಧರಿಗೆ ಭರ್ಜರಿ ಸ್ವಾಗತ ಕೋರಿದ್ದು ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಾಡಿ, ದೇಶದ ಜನರ ರಕ್ಷ ಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಗಡಿ ಕಾಯುವ ಯೋಧರಿಗೆ ಗೌರವ ನೀಡುವ, ಸ್ಮರಿಸುವ ಕೆಲಸ ಆಗಬೇಕು.ನಾವೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೆವೆ ಎಂದರೆ, ಅದಕ್ಕೆ ಗಡಿಯಲ್ಲಿ ಕಷ್ಟಪಟ್ಟು ದೇಶ ರಕ್ಷಣೆ ಮಾಡುತ್ತಿರುವ ಸೈನಿಕರ ಶ್ರಮವೇ ಕಾರಣ ಎಂದರು.
ಮರತೂರಿನ ಶ್ರೀಶೈಲ ಮಹಾಸ್ವಾಮಿಗಳು ಮಾತನಾಡಿ, ದೇಶ ಕಾಯುವ ಯೋಧರು ತಂದೆ, ತಾಯಿ, ಪತ್ನಿ ಸೇರಿದಂತೆ ಕುಟುಂಬದವರಿಂದ ದೂರವಿದ್ದು, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುತ್ತಾರೆ. ಗಡಿಯಲ್ಲಿ ಮೈನಸ್ ನಲವತ್ತು ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಊಟ, ತಿಂಡಿ, ನಿದ್ದೆ ಇವುಗಳ ಹಂಗೇ ಇರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಗಣ್ಯರಾದ ಅಜಿತಕುಮಾರ ಪಾಟೀಲ, ಶಾಮರಾಯಗೌಡ, ಗುರುನಾಥ ಕಂಬಾ, ರವಿ ನರೋಣಿ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…