ಸುರಪುರ: ನಗರದ ಕಾಟನ್‍ಮಿಲ್ ಮಾಲೀಕರೊಬ್ಬರಿಂದ ಕಳೆದ 2017 ರಲ್ಲಿ ಹತ್ತಿಕಾಳು ಕದ್ದು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಕ್ಷ್ಮೀನಾರಾಯಣ ಕಾಟನ್ ಮಿಲ್ ಮಾಲೀಕ ಮನೀಶ್ ಎನ್ನುವವರ ಬಳಿ 2017 ರಲ್ಲಿ ನಗರದ ಲಕ್ಷ್ಮೀನಾರಾಯಣ ಕಾಟನ್ ಮಿಲ್ ಮಾಲೀಕರಾದ ಮನೀಶ್ ಎನ್ನುವರ ಹತ್ತಿ ಕಾಳುಗಳನ್ನು ಸಾಗಿಸುವಾಗ ಇಬ್ಬರು ಆರೋಪಿಗಳಾದ ನರೇಂದ್ರ ಸಿಂಗ್ ಮತ್ತು ರೂಪಾಸಿಂಗ್ ಪಾಲ್ ಎನ್ನುವ ಇಬ್ಬರು ಖದಿಮರು ಸುಮಾರು 4 ಲಕ್ಷ 70 ಸಾವಿರ ರೂಪಾಯಿಗಳ ಹತ್ತಿಕಾಳನ್ನು ಕದ್ದು ತಲೆಮರೆಸಿಕೊಂಡಿದ್ದರು. ಇದರ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಗಂಭಿರವಾಗಿ ತೆಗೆದುಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ:ಸಿ.ಬಿ ವೇದಮೂರ್ತಿ ಹಾಗು ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಇವರ ಮಾರ್ಗದರ್ಶನದಲ್ಲಿ ಪಿಐ ಸುನಿಲಕುಮಾರ ಮೂಲಿಮನಿಯವರ ನೇತೃತ್ವದಲ್ಲಿ ಪಿಎಸ್‍ಐ ಕೃಷ್ಣಾ ಸುಬೇದಾರ ಮತ್ತು ಮುಖ್ಯಪೇದೆ ನಿಂಗಪ್ಪ,ಮನೋಹರ ರಾಠೋಡ,ಚಂದ್ರಶೇಖರ ಹಾಗು ಪೇದೆ ಬಸವರಾಜ ಇವರುಗಳು ಇಬ್ಬರು ಆರೋಪಿಗಳಾದ ನರೇಂದ್ರ ಸಿಂಗ್ ಮತ್ತು ರೂಪಾಸಿಂಗ್ ಪಾಲ್ ಇವರನ್ನು ಚತ್ತೀಸಗಡದಿಂದ ಬಂಧಿಸಿ ಕರೆ ತಂದು ಇವರಿಂದ 4 ಲಕ್ಷ 70 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಡಾ:ಸಿ.ಬಿ ವೇದಮೂರ್ತಿಯವರು ತಿಳಿಸಿದ್ದು ಜೊತೆಗೆ ಆರೋಪಿಗಳನ್ನು ಬಂಧಿಸಿ ತಂದ ತಂಡಕ್ಕೆ ಬಹುಮಾನವನ್ನು ಘೋಷಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…