ಕಲಬುರಗಿ: ಔರಾದಕರ್ ವರದಿ ಜಾರಿಗೊಳಿಸುವಂತೆ, ಹೈದ್ರಾಬಾದ್ ಕರ್ನಾಟಕ ಪೋಲಿಸ್ ಇಲಾಖೆ ಸೇರಿ ಎಲ್ಲ ಇಲಾಖೆಗಳಲ್ಲಿ ಹಿಂಬಡ್ತಿಯಾದ ಅಧಿಕಾರಿಗಳ ಬಡ್ತಿಗೆ ಆಗ್ರಹಿಸಿ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನಾ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್ ಅವರು ಇಲ್ಲಿ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ ೬ರಂದು ಸಹಿ ಸಂಗ್ರಹ ಅಭಿಯಾನಾಕ್ಕೆ ಚಾಲನೆ ನೀಡಲಾಗುವುದು. ಅಂದು ಬೆಳಿಗ್ಗೆ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಪಾಳಾ ಮೂಲ ಕಟ್ಟಿಮನಿ ಹಿರೇಮಠ್ ಸಂಸ್ಥಾನ ಮಠದ ಗುರುಮೂರ್ತಿ ಶಿವಾಚಾರ್ಯರು ಅಭಿಯಾನಕ್ಕೆ ಚಾಲನೆ ನೀಡುವರು. ವಿವಿಧ ಮಠಾಧೀಶರು ಸಹ ಪಾಲ್ಗೊಳ್ಳುವರು ಎಂದರು.
ಸಹಿ ಸಂಗ್ರಹ ಅಭಿಯಾನದಲ್ಲಿ ಸಂಗ್ರಹವಾದ ಸಹಿಗಳನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಗೃಹ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಕಳಿಸಿಕೊಡಲಾಗುವುದು. ೧೫ ದಿನಗಳೊಳಗೆ ಸರ್ಕಾರ ಸ್ಪಂದಿಸದೇ ಹೋದಲ್ಲಿ ಗೃಹ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.
ಹಗಲು ರಾತ್ರಿ ಎನ್ನದೆ ಕೆಲ ಸಂದರ್ಬಗಳಲ್ಲಿ ಊಟ ನಿದ್ರೆ ಸರಿಯಾಗಿ ಆಗದೆ ಮಳೆ ಚಳಿ ಎನ್ನದೆ ಹಗಲಿರುಳು ಪೋಲಿಸರು ಕೆಲಸ ಮಾಡುತ್ತಾರೆ. ಶಾಂತಿ ಸುವ್ಯವಸ್ಥೆಗೆ ಪೋಲಿಸರು ಬೇಕು. ಭದ್ರತೆಗಾಗಿ ಪೋಲಿಸರು ಬೇಕು. ಆದಾಗ್ಯೂ, ಅವರ ಕಷ್ಟ ಕಾರ್ಪಣ್ಯಗಳನ್ನು ಕೇಳಲು ನಿಮಗೆ ಸಮಯವಿಲ್ಲ. ಇದು ಖಂಡನೀಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೆ ಪೋಲಿಸರಿಗೆ ಹಲವಾರು ಪ್ರಯೋಜನೆಗಳು ಇರುವಂತಹ ಆರ್ಥಿಕವಾಗಿ ಮಾನಸೀಕವಾಗಿ ಸಧೃಡವಾಗುವಂತಹ ಔರಾದಕರ್ ವರದಿ ಶೀಘ್ರ ಜಾರಿಗೊಳಿಸಿ ಪೋಲಿಸರಿಗೆ ನ್ಯಾಯ ವದಗಿಸಬೇಕು ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದ ಪೋಲಿಸ, ಶಿಕ್ಷಣ ಅಬಕಾರಿ, ಅರಣ್ಯ ಸೇರಿ ಎಲ್ಲಾ ಇಲಾಖೆಗಲ್ಲಿ ಹಿಂಬಡ್ತಿಯಾಗಿ ಮಾನಸಿಕವಾಗಿ ಕುಗ್ಗಿರುವ ಅಧಿಕಾರಿಗಳಿಗೆ ಕೂಡಲೇ ಬಡ್ತಿ ನೀಡಲು ಅವರು ಆಗ್ರಹಿಸಿದರು.
ನಗರದ ರೈಲು ನಿಲ್ದಾಣದಲ್ಲಿ ಮತ್ತು ರೈಲ್ವೆಗಳಲ್ಲಿ ಏನಾದರೂ ಕಳುವಾದರೆ ವಾಡಿ (ಜಂ) ಗೆ ಹೋಗಿ ದೂರು ನೀಡಬೇಕಾಗುತ್ತದೆ ಇದರಿಂದ ಜನರಿಗೆ ತೊಂದರೆ ಆಗುತ್ತಿದೆ. ಕೂಡಲೇ ನಗರದಲ್ಲಿ ರೈಲ್ವೆ ಪೋಲಿಸ ಠಾಣೆ ಸ್ಥಾಪಿಸುವಂತೆ ಒತ್ತಾಯಿಸಿದ ಅವರು, ರೈಲ್ವೆ ಪೋಲಿಸರು ವಾಸಿಸುವ ರೈಲ್ವೆ ವಸತಿಗಳು ದುರಸ್ತಿಗೊಳಿಸಬೇಕು. ಅಲ್ಲದೆ ರೈಲ್ವೆ ಪೋಲಿಸ ಅಧಿಕಾರಿಗಳಿಗೆ ವಸತಿ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಮುಖಂಡರಾದ ಶ್ರೀಮತಿ ದಿವ್ಯಾ ಆರ್. ಹಾಗರಗಿ, ಶ್ರೀಮತಿ ಶ್ವೇತಾ ಓಂಪ್ರಕಾಶ್, ರಮೇಶ್ ಕುಲಕರ್ಣಿ, ರಾಜಶೇಖರ್ ಬಂಡೆ ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…