ಸುರಪುರ: ಹುಣಸಗಿ ಶಹಾಪುರ ಮತ್ತು ಸುರಪುರ ತಾಲೂಕುಗಳಿಗೆ ಸಂಬಂಧಿಸಿದಂತೆ ಸುರಪುರ ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿರುವ ಎಲ್ಲಾ ಮೊಬೈಲ್ ನೆಟವರ್ಕ್ ಕಂಪನಿಗಳ ಟವರ್‍ನ ಮಾಹಿತಿ ನೀಡುವಂತೆ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ತಿಳಿಸಿದರು.
ನಗರದ ಪೊಲೀಸ್ ಠಾಣೆಯ ಡಿವೈಎಸ್ಪಿ ಕಚೇರಿಯಲ್ಲಿ ಮಂಗಳವಾರ ನಡೆದ ವಿವಿಧ ಮೋಬೈಲ್ ನೆಟವರ್ಕ್ ಕಂಪನಿಗಳಾದ ಏರಟೆಲ್,ಜಿಯೋ,ಐಡಿಯಾ,ಇಂಡಸ್ ಮತ್ತಿತರೆ ಕಂಪನಿಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ,ಸುರಪುರ ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿರುವ ಎಲ್ಲಾ ಟವರ್‍ಗಳ ಮಾಹಿತಿಯನ್ನು ನೀಡಿ,ಯಾಕೆಂದರೆ ಅನೇಕ ಟವರ್ ರೂಮ್‍ಗಳಲ್ಲಿನ ಬ್ಯಾಟರಿ ಕಳ್ಳತನ ಮತ್ತು ಡಿಸೇಲ್ ಕಳ್ಳತನ ನಡೆದಿರುವ ಬಗ್ಗೆ ದೂರುಗಳು ಬರುತ್ತಿವೆ.
ಅಲ್ಲದೆ ಈ ಟವರ್‍ಗಳಲ್ಲಿ ಕೆಲಸ ಮಾಡಿ ಬಿಟ್ಟಿರುವ ಹಳೆಯ ನೌಕರರೆ ಕಳ್ಳತನ ಮಾಡಿರುವ ಬಗ್ಗೆಯು ಅನುಮಾನದ ಮಾತುಗಳು ಕೇಳಿಬರುತ್ತಿವೆ.ಆದ್ದರಿಂದ ಎಲ್ಲಾ ಟವರ್‍ಗಳ ಮಾಹಿತಿಯನ್ನು ನೀಡುವ ಜೊತೆಗೆ ಟವರ್ ಅಳವಡಿಸಲು ಪಡೆದಿರುವ ಪರವಾನಿಗೆಯ ಸಂದರ್ಭದಲ್ಲಿ ಹೆಸರಿಸಲಾಗಿರುವ ಷರತ್ತುಗಳ ವಿವಿರಣೆಯುಳ್ಳ ಪಟ್ಟಿಯನ್ನು ನೀಡುವಂತೆ ಸೂಚಿಸಿದರು.ಅಲ್ಲದೆ ಎಲ್ಲಾ ಟವರ್ ರೂಮ್‍ಗಳ ಬಳಿಯಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸುವುದು ಮುಖ್ಯವಾಗಿದೆ.ಇದರಿಂದ ಯಾರೇ ಕಳ್ಳತನ ಮಾಡಿದರು ಅಂತವರನ್ನು ಪತ್ತೆ ಹಚ್ಚಲು ಸುಲಭವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಕಂಪನಿಗಳ ಅಧಿಕಾರಿಗಳು ಮಾತನಾಡಿ,ಡಿವೈಎಸ್ಪಿಯವರು ಕೇಳಿದ ಎಲ್ಲಾ ಮಾಹಿತಿಯನ್ನು ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಹಾಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಚನ್ನಯ್ಯ ಹಿರೇಮಠ,ಎ.ಎಸ್.ಐ ಗೋಪಾಲ ರಾಠೋಡ ಹಾಗು ಮೊಬೈಲ್ ಟವರ್ ಕಂಪನಿಗಳ ಅಧಿಕಾರಿಗಳಾದ ಪ್ರವೀಣ,ಪಾಪಣ್ಣ,ಮಹೇಂದ್ರ,ಮಂಜುನಾಥ,ಸಿದ್ರಾಮ,ಶಂಕರ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…